ನಮಸ್ತೇ ಪ್ರಿಯ ಓದುಗರೇ, ಕಾಮಾಲೆ ಅಥವಾ ಜಾಂಡೀಸ್ ಅಂದರೆ ಜನರಿಗೆ ತುಂಬಾನೇ ಭಯ ಆಗುತ್ತದೆ. ಹಾಗಾದ್ರೆ ಏನಿದು ಜಾಂಡೀಸ್ ಅಂತ ಹೇಳುವುದಾದರೆ. ಲಿವರ್‌ನಲ್ಲಿ ಉತ್ಪತ್ತಿಯಾಗುವ ಬಿಲುರುಬಿನ್‌ ಅಥವಾ ಪಿತ್ತದಾಂಶದ ಪ್ರಮಾಣವು ರಕ್ತದಲ್ಲಿ ಹೆಚ್ಚಾದ ಅವಸ್ಥೆಯನ್ನು ಜಾಂಡೀಸ್‌ ಅಥವಾ ಕಾಮಾಲೆ ಎನ್ನಲಾಗುವುದು. ಉತ್ತರ ಕನ್ನಡ ಭಾಷೆಯಲ್ಲಿ ಇದನ್ನು ಕಾಮಣಿ ಎಂಬ ರೋಗ ಅಂತ ಕರೆಯುತ್ತಾರೆ ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ದೇಹದಲ್ಲಿ ಕೆಂಪು ರಕ್ತ ಕಣಗಳು ಕಡಿಮೆ ಆದಾಗ ಜಾಂಡೀಸ್ ಕಾಯಿಲೆ ಬರುತ್ತದೆ ಹಾಗೂ ದೇಹದ ಪೂರ್ತಿ ಎಲ್ಲ ಭಾಗವು ಹಳದಿ ಬಣ್ಣಕ್ಕೆ ತಿರುಗುತ್ತದೆ.ಕಾಮಾಲೆಯಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ತಲೆನೋವು, ಲಘು ಜ್ವರ, ವಾಕರಿಕೆ, ವಾಂತಿ, ಹಸಿವು ಕಡಿಮೆ ಆಗುವುದು, ಚರ್ಮದಲ್ಲಿನ ತುರಿಕೆ ಮತ್ತು ನಿಶ್ಯಕ್ತಿಯು ಕಂಡುಬರುವುದು. ಕಾಮಾಲೆ ಇರುವಂತಹ ಜನರಲ್ಲಿ ಚರ್ಮ ಮತ್ತು ಕಣ್ಣಿನ ಬಿಳಿ ಭಾಗ, ಅದೇ ರೀತಿ ಮೂತ್ರವು ಹಳದಿಯಾಗುವುದು. ಹಾಗಾದರೆ ಇದಕ್ಕೆಲ್ಲ ಏನು ಮಾಡಬೇಕು. ಕೆಲವೊಂದು ಒಂದು ಬಾರಿ ದೊಡ್ಡ ದೊಡ್ಡ ಕಾಯಿಲೆಗಳಿಗೆ ಮನೆಯಲ್ಲಿ ಅಥವಾ ಹಳ್ಳಿ ಔಷಧಗಳು ತುಂಬಾನೇ ಸಹಾಯಕ್ಕೆ ಬರುತ್ತವೆ.

ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಜಾಂಡೀಸ್ ಅನ್ನು ಹೋಗಲಾಡಿಸಲು ಯಾವೆಲ್ಲ ಆಹಾರಗಳನ್ನು ತಿನ್ನಬೇಕು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ತಪ್ಪದೇ ನಮ್ಮ ಈ ಆರೋಗ್ಯಕರ ಉಪಯುಕ್ತ ಲೇಖನವನ್ನು ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಈ ಜಾಂಡೀಸ್ ರೋಗ ತಪ್ಪಿದ್ದಲ್ಲ. ಎಲ್ಲರಲ್ಲಿಯೂ ಕಾಡುವ ಸಮಸ್ಯೆ ಕಾಯಿಲೆ ಇದಾಗಿದೆ ಅಂತ ಹೇಳಿದರೆ ತಪ್ಪಾಗಲಾರದು. ಜಾಂಡೀಸ್ ಹೆಚ್ಚಾಗಿ ಚಿಕ್ಕ ಮಕ್ಕಳಲ್ಲಿ ಕಾಣಿಸುತ್ತದೆ. ಆದ್ದರಿಂದ ಮಗುವನ್ನು ನೀವು ಸೂರ್ಯನಿಗೆ ಅಥವಾ ಮಗುವಿನ ಪೂರ್ತಿ ದೇಹಕ್ಕೆ ಎಣ್ಣೆಯಿಂದ ಮಸಾಜ್ ಮಾಡಿ ದೇಹವನ್ನು ಸೂರ್ಯನತ್ತ ಒಡ್ಡುವುದು ಸೂಕ್ತ. ನಮ್ಮ ಹಿರಿಯರು ಮಾರ್ಕೆಟ್ ಗೆ ಹೋದಾಗ ಅಲ್ಲಿ ಕಬ್ಬಿನ ಹಾಲಿನ ರಸದ ಅಂಗಡಿಯನ್ನು ನೋಡಿದರೆ ಈ ಮಾತು ಖಂಡಿತವಾಗಿ ಹೇಳುತ್ತಾರೆ, ಕಬ್ಬಿನ ಜ್ಯೂಸ್ ಅಥವಾ ಹಾಲು ಕುಡಿದರೆ ಕಾಮಾಲೆ ಬರುವುದಿಲ್ಲ ಎಂದು. ಹೌದು ಜಾಂಡೀಸ್ ಕಾಯಿಲೆ ಹೋಗಲಾಡಿಸಲು ಕಬ್ಬಿನ ಜ್ಯೂಸ್ ಅಥವಾ ಹಾಲು ಕುಡಿಯುವುದು ಒಳ್ಳೆಯದು. ಇದರಿಂದ ಕಾಮಾಲೆ ಬರುವುದಿಲ್ಲ. ಬಂದರೂ ಕಡಿಮೆ ಆಗುತ್ತದೆ.

ಇನ್ನೂ ನಿಂಬೆ ಹಣ್ಣಿನ ಎಣ್ಣೆಯನ್ನು ಕೂಡ ಕಾಮಾಲೆ ರೋಗಿಗಳು ಬಳಸಬಹುದು. ಅಥವಾ ನಿಂಬೆ ರಸ ಕುಡಿಯಿರಿ. ಇನ್ನೂ ಕಾಮಾಲೆ ರೋಗಿಗಳಿಗೆ ಮೇಕೆ ಹಾಲು ಕುಡಿಸಬೇಕು. ಇದರಿಂದ ಕಾಮಾಲೆ ಉಪಶಮನ ಆಗುತ್ತದೆ. ಇದರಲ್ಲಿ ಪೋಷಕಾಂಶಗಳು ಇದ್ದು ಜಾಂಡೀಸ್ ಅನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇನ್ನೂ ಹಸಿರು ದ್ರಾಕ್ಷಿ ಪಪ್ಪಾಯಿ ಮತ್ತು ಮೊಸರು ಸೇವನೆ ಮಾಡುವುದರಿಂದ ಜಾಂಡೀಸ್ ಕಡಿಮೆ ಮಾಡಬಹುದು. ಜಾಂಡೀಸ್ ಇರುವವರು ಬೆಳ್ಳುಳ್ಳಿ ಎಸಳುಗಳನ್ನು ತಿನ್ನಬೇಕು. ಬೆಳ್ಳುಳ್ಳಿ ಎಸಳುಗಳನ್ನು ತಿನ್ನುವುದರಿಂದ ಜಾಂಡೀಸ್ ನಿಂದ ಬೇಗನೆ ಗುಣಮುಖವಾಗಬಹುದು. ಕೊನೆಯದಾಗಿ ಮೂಲಂಗಿ ತರಕಾರಿ ಸೇವಿಸುವುದು ಜಾಂಡೀಸ್ ರೋಗಿಗಳಿಗೆ ದಿವ್ಯ ಔಷಧ. ನೆಲ್ಲಿಕಾಯಿ ಜ್ಯೂಸ್ ನ್ನು ನಿಯಮಿತವಾಗಿ ಸೇವನೆ ಮಾಡಿದರೆ ಆಗ ಕಾಮಾಲೆಯಿಂದ ಬೇಗನೆ ಚೇತರಿಕೆ ಪಡೆಯಹುದು. ಕಹಿಬೇವು ಕೂಡ ಜಾಂಡೀಸ್ ರೋಗಿಗಳಿಗೆ ರಾಮಬಾಣ.ಅಮೃತ ಬಳ್ಳಿಯನ್ನು ಕಾಮಾಲೆಗೆ ಒಳ್ಳೆಯ ಔಷಧಿಯಾಗಿಯೂ ಬಳಸಬಹುದು. ದಿನದಲ್ಲಿ ಎರಡು ಸಲ ನೀವು ಒಂದು ಚಮಚ ಅಮೃತ ಬಳ್ಳಿ ಹುಡಿ ಸೇವಿಸಿ. ಹಾಗೂ ಜಾಂಡೀಸ್ ರೋಗಿಗಳು ವೈದ್ಯರ ಸಲಹೆ ಮೇರೆಗೆ ಮಾತ್ರೆಗಳನ್ನು ಮತ್ತು ಆಹಾರವನ್ನು ಸೇವಿಸಬೇಕು. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಶುಭದಿನ.

Leave a Reply

Your email address will not be published. Required fields are marked *