ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನವು ತುಂಬಾ ವೇಗವಾಗಿದೆ. ಮತ್ತು ನಾವು ಸಂಪೂರ್ಣ ಪೋಷಕಾಂಶಗಳನ್ನು ಪಡೆಯುವುದರಲ್ಲಿ ಬಲ್ಲವರಾಗಿದ್ದೇವೆ. ಆದರೆ ನಾವು ನಮ್ಮ ಆಹಾರವನ್ನು ಮತ್ತು ಪಾನೀಯವನ್ನು ಸರಿಯಾಗಿ ಆರಿಸಿಕೊಂಡರೆ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಪಡೆಯಬಹುದು. ಇಂದು ನಾವು ಅಂತಹ ಆರೋಗ್ಯಕರ ಪ್ರಯೋಜನ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದಾಗಿ ಕಲ್ಲಂಗಡಿ ಬೀಜ ಇವು ಪ್ರೋಟೀನ್ ಗಳ ಉತ್ತಮ ಬೆಳವಣಿಗೆ ಯಾಗಿವೆ ಮತ್ತು ಇವುಗಳಲ್ಲಿ ಅನೇಕ ಅಮೈನೋ ಆಮ್ಲಗಳು ಸಹ ನಮಗೆ ದೊರೆಯುತ್ತವೆ. ಜೊತೆಗೆ ಪೊಟ್ಯಾಶಿಯಂ ಸೆಲಿನಿಯಂ ಮತ್ತು ಸತುಗಳಂತಹ ಅನೇಕ ಪೋಷಕಾಂಶಗಳು ಇದರಲ್ಲಿ ಇವೆ

ಕಲ್ಲಂಗಡಿ ಬೀಜಗಳಲ್ಲಿ ಪ್ರೊಟೀನ್ ಮತ್ತು ವಿಟಮಿನ್ ಬಿ ಇರುವ ಕಾರಣ ಸ್ನಾಯುಗಳ ಶಕ್ತಿಯನ್ನು ಹೆಚ್ಚಿಸುತ್ತವೆ.ಕಲ್ಲಂಗಡಿ ಬೀಜ ಮೂಳೆಗಳನ್ನು ಬಲಪಡಿಸುತ್ತದೆಕಲ್ಲಂಗಡಿ ಬೀಜಗಳಲ್ಲಿ ತಾಮ್ರ, ಮ್ಯಾಂಗನೀಸ್ ಮತ್ತು ಪೊಟ್ಯಾಶಿಯಂ ಇದ್ದು ಮೂಳೆಗಳನ್ನು ಬಲಗೊಳಿಸಲು ನೆರವಾಗುತ್ತದೆ. ಅಲ್ಲದೇ ಮೂಳೆ ಸಾಂದ್ರತೆಯನ್ನು, ಕಲ್ಲಂಗಡಿ ಬೀಜಗಳು ಉತ್ತಮಗೊಳಿಸಲು ನೆರವಾಗುತ್ತದೆ.

ಹೃದಯವನ್ನು ಆರೋಗ್ಯವಾಗಿಡುತ್ತದೆಕಲ್ಲಂಗಡಿ ಬೀಜಗಳಲ್ಲಿ ಮೆಗ್ನೀಶಿಯಂ ಇದ್ದು, ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಎರಡನೆಯದಾಗಿ ಸೂರ್ಯಕಾಂತಿ ಬೀಜ. ಸೂರ್ಯಕಾಂತಿ ಎಣ್ಣೆಯನ್ನು ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸುತ್ತೇವೆ.ಆದರೆ ಸೂರ್ಯಕಾಂತಿ ಬೇಜವನ್ನೂ ಸಹ ನೇರವಾಗಿ ಆಹಾರದಲ್ಲಿ ಬಳಸಬಹುದು. ಇದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳೂ ಸಹ ಇವೆ.ಸೂರ್ಯಕಾಂತಿ ಬೀಜದಲ್ಲಿ ಕೊಬ್ಬಿನಾಮ್ಲಗಳು, ಜೀವಸತ್ವಗಳು ಮತ್ತು ಖನಿಜಗಳಿರುತ್ತವೆ.

ಜತೆಗೆ ಫೈಬರ್ ಅಂಶ ಕೂಡ ಅಧಿಕಾವಾಗಿರುತ್ತವೆ. ಮಧುಮೇಹಿಗಳಿಗೆ ಸೂರ್ಯಕಾಂತಿ ಬೀಜ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಮಧುಮೇಹ ಸಮಸ್ಯೆ ಇರುವವರು ಆಹಾರದ ಭಾಗವಾಗಿ ಸೂರ್ಯಕಾಂತಿ ಬೀಜವನ್ನು ಸೇವಿಸುವ ಮೂಲಕ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದಾಗಿದೆ. ಇದರಲ್ಲಿ ಮೆಗ್ನೀಷಿಯಂ ಮತ್ತು ಹಲವಾರು ವಿಟಮಿನ್ ಗಳು ನಮಗೆ ಸಮೃದ್ಧವಾಗಿ ಸಿಗುತ್ತವೆ. ಸೂರ್ಯಕಾಂತಿ ಬೀಜಗಳು ಚರ್ಮದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.

ಜೊತೆಗೆ ಹೃದಯ ಸಂಬಂಧಿ ಸಮಸ್ಯೆಗಳಿಗೂ ಕೂಡ ಇದು ಪರಿಹಾರವಾಗಿದೆ. ಸೂರ್ಯಕಾಂತಿ ಬೀಜವು ಕಡಿಮೆ ಕ್ಯಾಲೋರಿ ಬೀಜ ವಾಗಿದ್ದು ಇದು ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ಈ ಬೀಜಗಳು ತೂಕ ಕಡಿಮೆ ಮಾಡಿಕೊಳ್ಳಲು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ ಮೂರನೆಯದಾಗಿ ಅಗಸೆ ಬೀಜ ಒಂದು ಚಮಚ ಅಗಸೆ ಬೀಜದಲ್ಲಿ ನಮ್ಮ ದೈನಂದಿನ ಅವಶ್ಯಕತೆಗೆ ಬೇಕಾದ ಎಂಟು ಪರ್ಸೆಂಟ್ ಫೈಬರ್ ಅಂಶವು ನಮ್ಮ ದೇಹಕ್ಕೆ ಇದರಿಂದ ದೊರೆಯುತ್ತದೆ.

ಇದರಲ್ಲಿ ಒಮೇಗಾತ್ರಿ ಕೊಬ್ಬಿನ ಆಮ್ಲಗಳು ಮತ್ತು ಪ್ರೋಟೀನಿನ ಅಂಶಗಳು ನಮಗೆ ದೊರೆಯುತ್ತವೆ. ಪ್ರಯೋಜನಗಳುಅಗಸೆಬೀಜದಲ್ಲಿ ಆಂಟಿ-ಆಕ್ಸಿಡೆಂಟ್ಸ್ ಮತ್ತು ಫೈಟೊಕೆಮಿಕಲ್ಸ್ ಗುಣ ಲಕ್ಷಣಗಳಿವೆ, ಇದು ಹೆಚ್ಚುತ್ತಿರುವ ವಯಸ್ಸಿನಲ್ಲಿ ಮುಖದ ಚರ್ಮವನ್ನು ಯುವ್ವನಯುಕ್ತವಾಗಿರಿಸುತ್ತದೆ. ಸುಕ್ಕುಗಳು ಸಮಸ್ಯೆ ದೂರವಾಗಿಸಿ ಮತ್ತು ಚರ್ಮವು ಹೊಳೆಯುವಂತೆ ಮಾಡುತ್ತದೆ.ಅಗಸೆಬೀಜವನ್ನು ನಿಯಮಿತವಾಗಿ ಬಳಸುವ ಮೂಲಕ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸಬಹುದು. ಇದರಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಇದ್ದು, ಇದು ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ.

Leave a Reply

Your email address will not be published. Required fields are marked *