ಅಡುಗೆಯ ವಿಷಯಕ್ಕೆ ಬಂದರೆ ಪ್ರತಿಯೊಬ್ಬರ ಮನೆಯಲ್ಲೂ ಕರಿಬೇವಿನ ಸೊಪ್ಪಿಗೆ ವಿಶೇಷ ಸ್ಥಾನ ನೀಡಿರುತ್ತಾರೆ. ನಮ್ಮ ದಕ್ಷಿಣ ಭಾರತದ ಯಾವುದೇ ಖಾರದ ಅಡುಗೆಯಾದರೂ ಕರಿಬೇವಿನ ಸೊಪ್ಪು ಇರಲೇಬೇಕು. ಅಡುಗೆಯ ಪರಿಮಳ ಮತ್ತು ರುಚಿ ಹೆಚ್ಚಿಸಲೆಂದು ಬಳಸುವ ಕರಿಬೇವಿನ ಸೊಪ್ಪು ಮನೆಯವರೆಲ್ಲರ ಆರೋಗ್ಯವನ್ನೂ ವೃದ್ಧಿಸುತ್ತದೆ. ಕಡಿ ಪಟ್ಟಾ ಇಂದು ಸಾಮಾನ್ಯವಾಗಿ ಕರೆಯಲ್ಪಡುವ ಕರಿಬೇವಿನ ಸೊಪ್ಪು ಅಡುಗೆಗೆ ಸೇರಿದ ನಂತರ ತನ್ನ ವಿಶಿಷ್ಟ ಸುವಾಸನೆ ಬೀರುವ ಗುಣದಿಂದ ಯಾವುದೇ ಸಾರು, ಸಾಗು, ಪಲ್ಯ ಇತ್ಯಾದಿ ಅಡುಗೆಗಳ ರುಚಿ ಹೆಚ್ಚಿಸುವಿಕೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ದಕ್ಷಿಣ ಭಾರತದ ತಮಿಳುನಾಡು, ಕೇರಳ, ಕರ್ನಾಟಕಗಳಲ್ಲಿ ಕರಿಬೇವಿನ ಸೊಪ್ಪು ಇಲ್ಲದೆ ಯಾವುದೇ ಖಾರದ ಅಡುಗೆಗಳನ್ನು ಮಾಡುವುದೇ ಇಲ್ಲ.

ನಮ್ಮ ಪುರಾತನ ಆಯುರ್ವೇದ ಪದ್ಧತಿಯಲ್ಲಿ ಕೂಡ ಕರಿಬೇವಿನ ಸೊಪ್ಪಿಗೆ ನಮ್ಮ ಆರೋಗ್ಯ ಪಂಡಿತರು ಬಹಳ ಗೌರವದ ಸ್ಥಾನ ನೀಡಿ ಅನೇಕ ಕಾಯಿಲೆಗಳನ್ನು ಗುಣ ಪಡಿಸಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಈಗಲೂ ಸಹ ಇದು ಮುಂದುವರೆದಿದ್ದು ಅನೇಕ ಬಗೆಯ ಸೋಂಕುಗಳು, ಉರಿಯೂತದ ಲಕ್ಷಣಗಳು ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಮಧುಮೇಹವನ್ನು ನಿಯಂತ್ರಣದಲ್ಲಿಡುವ ಅದ್ಭುತ ಶಕ್ತಿ ಕರಿಬೇವಿನ ಸೊಪ್ಪಿನಲ್ಲಿ ಇದೆ. ಕರಿ ಬೇವಿನ ಸೊಪ್ಪಿನಲ್ಲಿ ವಿಟಮಿನ್ ‘ ಸಿ ‘ ಮತ್ತು ಬೀಟಾ – ಕ್ಯಾರೋಟಿನ್ ಅಂಶಗಳಿದ್ದು, ಹಲವಾರು ಕಾಯಿಲೆಗಳಿಗೆ ಮನೆಮದ್ದಾಗಿ ಉಪಯೋಗಿಸಲ್ಪಡುತ್ತದೆ. ಯಾವುದೇ ಆಂಗ್ಲ ಔಷಧಿಗಳಿಗಿಂತ ಮನುಷ್ಯನ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಅಂಶದ ಮಟ್ಟವನ್ನು ನಿಯಂತ್ರಣದಲ್ಲಿಟ್ಟು ಟೈಪ್ – 2 ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಕರಿಬೇವಿನ ಸೊಪ್ಪು ನಿಯಂತ್ರಣದಲ್ಲಿಡುತ್ತದೆ ಎಂದರೆ ಇದರ ಅದ್ಭುತ ಶಕ್ತಿಯ ಬಗ್ಗೆ ನೀವೇ ಒಮ್ಮೆ ಯೋಚಿಸಬೇಕು. ಹಾಗಾದರೆ ಅಂತಹ ವಿಶೇಷ ಗುಣಗಳಿಂದ ಕರಿಬೇವಿನ ಸೊಪ್ಪು ಮಾಡುವ ಚಮತ್ಕಾರಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮಗೂ ಇದೆ ಅಲ್ಲವೇ ಮುಂದೆ ಓದಿ.

ಮಧುಮೇಹದ ನಿಯಂತ್ರಣಕ್ಕೆ ಕರಿಬೇವಿನ ಸೊಪ್ಪು ಸಂಶೋಧಕರ ಪ್ರಕಾರ ಅವರು ಸಂಶೋಧನೆಯಲ್ಲಿ ಬಳಸಿದ ಕರಿಬೇವಿನ ಸೊಪ್ಪಿನಿಂದ ಸಂಶೋಧನೆಗೆ ಒಳಪಡಿಸಿದ ಅತಿಯಾದ ಮಧುಮೇಹ ಹೊಂದಿದ ಜನರಲ್ಲಿ ಶೇಕಡ 45 ರಷ್ಟು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವಲ್ಲಿ ಕರಿಬೇವಿನ ಸೊಪ್ಪು ತನ್ನ ಶಕ್ತಿ ತೋರಿಸಿದೆ. ಇದರಿಂದ ಟೈಪ್ -2 ಮಧುಮೇಹವನ್ನು ನಿಯಂತ್ರಣ ಮಾಡುವಲ್ಲಿ ಕರಿಬೇವಿನ ಸೊಪ್ಪಿನ ಯಶಸ್ವಿ ದಾಖಲಾಗಿದೆ. ಕರಿಬೇವಿನ ಸೊಪ್ಪು ರಕ್ತದಲ್ಲಿನ ಗ್ಲೂಕೋಸ್ ಅಂಶವನ್ನು ಸ್ಥಿರಗೊಳಿಸಿ ಮಧುಮೇಹವನ್ನು ನಿಯಂತ್ರಣದಲ್ಲಿ ಇಡುವ ನಿಟ್ಟಿನಲ್ಲಿ ಹೇಗೆಲ್ಲಾ ಕೆಲಸ ಮಾಡುತ್ತದೆ ಎಂಬುದರ ಕಿರುನೋಟ ಇಲ್ಲಿದೆ.

Leave a Reply

Your email address will not be published. Required fields are marked *