ನಮಸ್ತೆ ಪ್ರಿಯ ಸ್ನೇಹಿತರೆ, ಕಾಲಿನಲ್ಲಿ ಇರುವ ಉದ್ದವಾದ ಬೆರಳಿನ ಕೆಲವು ರಹಸ್ಯಗಳನ್ನು ಇಂದಿನ ಲೇಖನದಲ್ಲಿ ನೋಡೋಣ ಬನ್ನಿ ಸ್ನೇಹಿತರೆ. ಸಾಮಾನ್ಯವಾಗಿ ನೀವು ನೋಡಿರಬಹುದು ಕಾಲಿನಲ್ಲಿ ಇರುವ ಬೆರಳುಗಳು ನೇರವಾಗಿ ಸರಿಯಾಗಿ ಇರುತ್ತವೆ. ಆದರೆ ಹಲವಾರು ಜನರು ಯಾವ ರೀತಿ ಇದ್ದಾರೆ ಎಂದರೆ ಅವರ ಕಾಲಿನ ಬೆರಳುಗಳು ಅಂಕು ಡೊಂಕಾಗಿರುತ್ತವೆ. ಕೆಲವೊಮ್ಮೆ ಕಾಳಿನ ಹೆಬ್ಬೆರಳಿಗಿಂತ ಉಳಿದ ಬೆರಳುಗಳು ಉದ್ದವಾಗಿ ಇರುತ್ತವೆ. ಕೆಲವರಲ್ಲಿ ಹೆಬ್ಬೆರಳಿಗಿಂತ ಚಿಕ್ಕವಾಗಿ ಇರುತ್ತವೆ. ಹಾಗಾಗಿ ಇಲ್ಲಿ ಬೆರಳುಗಳಿಗೆ ಭಿನ್ನವಾದ ಮಹತ್ವ ಇರುತ್ತದೆ. ಶಾಸ್ತ್ರದಲ್ಲಿ ಹೇಳುವ ಪ್ರಕಾರ ನಿಮ್ಮ ದೇಹದ ಪ್ರತಿಯೊಂದು ಅಂಗಗಳು ನಿಮ್ಮ ಬಗ್ಗೆ ತಿಳಿಸಿ ಕೊಡುತ್ತವೆ ಎಂದು. ನೀವು ವ್ಯಕ್ತಿಗಳ ಶರೀರದ ಅಂಗಗಳನ್ನು ನೋಡಿದ ನಂತರ ಆ ವ್ಯಕ್ತಿಯ ಬಗ್ಗೆ ಹಲವಾರು ರಹಸ್ಯಗಳನ್ನು ತಿಳಿಯಬಹುದಾಗಿದೆ. ವ್ಯಕ್ತಿಯ ಅಂಗಗಳನ್ನು ನೋಡಿ ಅವ್ರ ಸ್ವಭಾವ ಯಾವ ರೀತಿ ಇರುತ್ತೆ, ಅವರ ವ್ಯಕ್ತಿತ್ವ ಯಾವ ರೀತಿ ಇರುತ್ತೆ ಎಂಬುದರ ಬಗ್ಗೆ ತಿಳಿಯಬಹುದು. ಈ ವಿದ್ಯೆಯನ್ನು ಸಾಮುದ್ರಿಕಾಶಾಸ್ತ್ರ ಎಂದು ಕರೆಯುತ್ತಾರೆ. ಸಾಮುದ್ರಿಕ ವಿದ್ಯೆಯನ್ನು ಅಧ್ಯಯನ ಮಾಡಿದ ನಂತರ ಆ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಶರೀರ ನೋಡಿದ ನಂತರ ಅವರ ವ್ಯಕ್ತಿತ್ವದ ಜೊತೆಗೆ ಅವರ ಜೀವನಕ್ಕೆ ಸಂಬಂದಿಸಿದ ಹಲವಾರು ರಹಸ್ಯಗಳನ್ನು ತಿಳಿಯಬಹುದಾಗಿದೆ.

ಇದರ ಜೊತೆಗೆ ಆ ವ್ಯಕ್ತಿಯ ವ್ಯವಹಾರ ಆಗಲಿ ಆಚಾರ ವಿಚಾರಗಳನ್ನು, ಕಾರ್ಯ ಕ್ಷಮತೆಯನ್ನು ಇದರ ಮೂಲಕ ಸುಲಭವಾಗಿ ತಿಳಿಯಬಹುದು. ಈ ಲೇಖನದಲ್ಲಿ ಪಾದದ ಉದ್ದವಾದ ಬೆರಳಿನ ರಹಸ್ಯ ತಿಳಿಸುತ್ತೇವೆ. ಇದನ್ನು ತಿಳಿದರೆ ನೀವು ಖಂಡಿತ ಅಚ್ಚರಿ ಪಡ್ತಿರಾ. ಯಾವ ವ್ಯಕ್ತಿಯ ಪಾಡದಲ್ಲಿನ ಹೆಬ್ಬೇರಿಳಿನ ಪಕ್ಕದ ಬೆರಳು ಉದ್ದವಾಗಿ ಇರುತ್ತದೋ ಅಂದ್ರೆ, ಹೇಬ್ಬೇರಿಳಿನ ಪಕ್ಕದ ಬೆರಳು ಮಾತ್ರ ಉದ್ದವಾಗಿದ್ದು ಉಳಿದ ಎಲ್ಲಾ ಬೆರಳುಗಳು ಚಿಕ್ಕವಾಗಿ ಇದ್ದರೆ ಇಂತಹ ಮನುಷ್ಯರು ಶಕ್ತಿಶಾಲಿ ಆಗಿರುತ್ತಾರೆ. ಇಂತಹ ವ್ಯಕ್ತಿಗಳ ಸ್ವಭಾವವು ಸಾಮಾನ್ಯವಾಗಿ ಕ್ರೇಜಿ ಆಗಿರುತ್ತದೆ. ಇವರು ಏನನ್ನಾದರೂ ಹೊಸದಾಗಿ ಸಾಧಿಸುವ ಇಚ್ಛೆ ಹೊಂದಿರುತ್ತಾರೆ. ಇಂತಹವರು ಯಾವುದೇ ಕೆಲಸವನ್ನು ಪೂರ್ಥಿಗೊಳಿಸಲು ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆ ಎರೆಯುತ್ತಾರೆ. ಇಂತಹವರ ಬುದ್ಧಿ ಶಕ್ತಿ ಹೆಚ್ಚಾಗಿದ್ದು,ಶಾರೀರಿಕ ರೂಪದಲ್ಲಿ ಸ್ವಲ್ಪ ದುರ್ಬಲವಾಗಿ ಇರ್ತಾರೆ. ಇಂತಹ ವ್ಯಕ್ತಿಗಳು ಯಾವುದೇ ಕೆಲ್ಸ ಮಾಡುವ ಮುನ್ನ ಚೆನ್ನಾಗಿ ಯೋಚಿಸಿ ಅದರ ಬಗ್ಗೆ ತಿಳಿದುಕೊಂಡು ಮುಂದುವರೆಯುತ್ತಾರೆ.

ಪಾದದ ಹೆಬ್ಬೆರಳಿನ ಪಕ್ಕದ ಬೆರಳು ಚಿಕ್ಕದಾಗಿದ್ದರೆ ಯಾವತ್ತಿಗೂ ತಮ್ಮ ಜೀವನದಲ್ಲಿ ಖುಷಿಯಾಗಿಯೇ ಇರ್ತಾರೆ. ಅಥವಾ ಖುಷಿಯಾಗಿ ಇರಲು ಪ್ರಯತ್ನ ಮಾಡ್ತಾ ಇರ್ತಾರೆ. ಒಂದುವೇಳೆ ಪಾದದ ಹೆಬ್ಬೆರಳು ಮತ್ತು ಪಕ್ಕದ ಬೆರಳು ಸಮವಾಗಿದ್ದರೆ , ಉಳಿದ ಬೆರಳುಗಳು ಚಿಕ್ಕದಾಗಿ ಇದ್ದರೆ ಸಮಾಜದಲ್ಲಿ ನೀವು ನಿಮ್ಮ ಹೆಸರಿಗಾಗಿ ತುಂಬಾ ಶ್ರಮಿಸುತ್ತಾರೆ .ಇಂತಹ ಜನರು ತುಂಬಾ ಶಾಂತ ಸ್ವಭಾವದ ವರಾಗಿರುತ್ತರೆ. ಇನ್ನೊಬ್ಬ ರೊಂದಿಗೆ ಎಂದಿಗೂ ಜಗಳ ಆಡಲು ಬಯಸುವುದಿಲ್ಲ. ಇನ್ನೂ ಸರಿಯಾದ ಆಯ್ಕೆ ಮಾಡುವಂಥ ವ್ಯಕ್ತಿಗಳು. ಯಾರ ಪಾದದ ಬೆರಳು ಒಂದರ ನಂತರ ಒಂದು ಇಳಿಮುಖವಾಗದ ಗಾತ್ರವನ್ನು ಹೊಂದಿದ್ದಾರೆ ಅಂಥವರು ಯಾವತ್ತಿಗೂ ತಮ್ಮ ಶ್ರೇಷ್ಠತೆಯನ್ನು ತೋರಿಸಲು ಪ್ರಯತ್ನ ಮಾಡ್ತಾ ಇರ್ತಾರೆ. ಇವರು ತಮ್ಮ ಅಧಿಕಾರದ ಬಗ್ಗೆ ಮಾತುಗಳನ್ನು ಆಡ್ತಾ ಇರ್ತಾರೆ. ಇವ್ರು ನಾನು ಏನು ಯೋಚನೆ ಮಾಡ್ತಾ ಇದೀನಿ ಏನು ಮಾಡಲು ಹೋಗ್ತಾ ಇದೀನಿ ಅದೇ ಸರಿ ಅನ್ನುವ ಭಾವನೆ ಹೊಂದಿರುತ್ತಾರೆ. ಜನರು ಇವರ ಮಾತನ್ನು ಸ್ವೀಕರಿಸಲಿ ಅಂತ ಬಯಸ್ತ ಇರ್ತಾರೆ. ಒಂದುವೇಳೆ ಸಮಾಜದವರು ಅಥವಾ ಕುಟುಂಬದವರು ಇವರ ಮಾತನ್ನು ಕೇಳದಿದ್ದರೆ, ಸ್ವೀಕರಿಸದೆ ಹೋದರೆ ಇವರಿಗೆ ತುಂಬಾ ಸಿಟ್ಟು ಬರುತ್ತದೆ. ಆದ್ರೆ ಸ ಸಿಟ್ಟನ್ನು ಎಂದೂ ಹೊರ ಹಾಕುವುದಿಲ್ಲ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *