ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋ, ಫೋಟೋಗಳು ವೈರಲ್‌ ಅಗುತ್ತವೆ. ಈ ವೈರಲ್‌ ಕಂಟೆಂಟ್‌ಗಳ ರಾಶಿಯಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂದು ಕಂಡುಹಿಡಿಯುವುದೇ ಒಂದು ದೊಡ್ಡ ಸವಾಲು. ಇತ್ತೀಚಿನ ದಿನಗಳಲ್ಲಿ ಈ ಒಂದು ಚಿತ್ರ ತುಂಬಾನೇ ವೈರಲ್ ಆಗುತ್ತಿದೆ.ಹೆದ್ದಾರಿಯ ಚಿತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಫೋಟೋದಲ್ಲಿ, ಹೆದ್ದಾರಿಯ ಮಧ್ಯದಲ್ಲಿ ಮರವಿದ್ದು ಅದರ ಮುಂದೆ ರಸ್ತೆ ಕೊಂಚ ಕಾಣಬಹುದಾಗಿದೆ. ಈ ಚಿತ್ರವನ್ನು ಹಂಚಿಕೊಳ್ಳುವ ಮೂಲಕ, ಅದನ್ನು ನಿರ್ಮಿಸಿದ ಗುತ್ತಿಗೆದಾರರು, ಹೆದ್ದಾರಿಯಲ್ಲಿ ಮರ ಇದ್ದ ಕಾರಣ ಅದನ್ನು ಉಳಿಸಲು ಈ ರಸ್ತೆ ಪಥವನ್ನು ಬದಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಫ್ಯಾಕ್ಟ್‌ಚೆಕ್‌ ತನಿಖೆಯಲ್ಲಿ ವೈರಲ್ ಅಗುತ್ತಿರುವ ಫೋಟೋ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಹರಿಯುತ್ತಿರುವ ಕ್ಲೈಮ್ ನ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಿದಾಗ ವೈರಲ್ ಆಗಿರುವ ಚಿತ್ರವನ್ನು ಎಡಿಟ್ ಮಾಡಿ ಸಿದ್ಧಪಡಿಸಲಾಗಿದ್ದು ಇದು ಫೇಕ್ ಎಂದು ತಿಳಿದುಬಂದಿದೆ. ಈ ವೈರಲ್ ಚಿತ್ರವನ್ನು ಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಜಾಹೀರಾತಿನಂತೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಫೋಟೋವಿನ ಉದ್ದೇಶ ಒಳ್ಳೆಯದೇ, ಆದರೆ ಜನರು ಅದನ್ನೇ ಸತ್ಯವೆಂದು ಪರಿಗಣಿಸಿ ವೈರಲ್ ಮಾಡಿದ್ದಾರೆ. ವೈರಲ್ ಚಿತ್ರವನ್ನು ಫೇಸ್‌ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. “ಮರವನ್ನು ಉಳಿಸಲು ರಸ್ತೆಯನ್ನು ತಿರುಚಿದ ಈ ಗುತ್ತಿಗೆದಾರನಿಗೆ ಸಲಾಮ್” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು, ಹಲವಾರು ಕೀವರ್ಡ್‌ಗಳ ಮೂಲಕ ಗೂಗಲ್‌ ಸರ್ಚ್‌ ಮಾಡಿದಾಗ ಸಮುದಾಯದ ಸಮಸ್ಯೆಗಳನ್ನು ಚರ್ಚಿಸುವ ವೆಬ್‌ಸೈಟ್ ಸ್ಕೇಪ್ಟಿಕ್ಸ ನಲ್ಲಿ ಈ ಚಿತ್ರವನ್ನು ಕಂಡುಕೊಂಡಿದ್ದೇವೆ. ಇಲ್ಲೂ ಈ ಚಿತ್ರದ ಬಗ್ಗೆ ಕಂಪ್ಯೂಟರ್ ಮೂಲಕ ಎಡಿಟ್ ಮಾಡಿ ಈ ಚಿತ್ರವನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ. ಗೆಟ್ಟಿ ಇಮೇಜಸ್ ವೆಬ್‌ಸೈಟ್‌ನಲ್ಲಿರುವ ರಸ್ತೆಯ ಚಿತ್ರವನ್ನು ಬಳಸಿ ಎಡಿಟ್ ಮಾಡುವ ಮೂಲಕ ವೈರಲ್ ಚಿತ್ರವನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಲಾಗಿದೆ.

ಪರಿಸರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ಚಿತ್ರವನ್ನು ಜಾಹೀರಾತಿನಂತೆ ಮಾಡಿದ್ದಾರೆ ಅಂತೆ ವಾಸ್ತವಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಫ್ಯಾಕ್ಟ್‌ ಚೆಕ್‌ನಲ್ಲಿ ಈ ವೈರಲ್ ಪೋಸ್ಟ್ ನಕಲಿ ಎಂದು ತಿಳಿದುಬಂದಿದೆ. ಜನರಲ್ಲಿ ಜಾಗೃತಿ ಮೂಡಿಸಲು ಈ ಚಿತ್ರವನ್ನು ಮಾಡಲಾಗಿದೆ. ಆದರೆ ಜನರು ಅದನ್ನೇ ಸತ್ಯವೆಂದು ಪರಿಗಣಿಸಿ ವೈರಲ್ ಮಾಡಿದ್ದಾರೆ.

Leave a Reply

Your email address will not be published. Required fields are marked *