ಯಾವುದೇ ಶುಭ ಕಾರ್ಯಗಳು ನಡೆಯುತ್ತಿದ್ದರೆ ಬಹಳ ಮುಖ್ಯವಾಗಿ ಅಕ್ಷತೆಯು ಇರಲೇಬೇಕು ಅಕ್ಷತೆ ಇಲ್ಲದ ಕಾರ್ಯವು ಪ್ರಾರಂಭ ಮತ್ತು ಪೂರ್ಣಗೊಳ್ಳುವುದೇ ಇಲ್ಲ ನಮ್ಮ ಸಂಪ್ರದಾಯದಲ್ಲಿ ಅಕ್ಷತೆಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಅಕ್ಷತೆ ಎಂದರೆ ನಾಶವಿಲ್ಲದ್ದು ಎಂದರ್ಥ ಯಾವುದೇ ಸಂದರ್ಭದಲ್ಲಿಯೂ ಗುರು ಹಿರಿಯರಿಂದ ಪ್ರೀತಿ ಮಾತುಗಳನ್ನು ಕೇಳುತ್ತ ಆಶೀರ್ವಾದದ ಮಂತ್ರಗಳಿಂದ ಪುರೋಹಿತರ ಬಳಿ ಮತ್ತು ಗುರು ಜಂಗಮ ಸ್ವಾಮಿಜಿಯವರ ಕೈಯಲ್ಲಿ ತಲೆಯ ಮೇಲೆ ಆಕಿಸಿಕೊಂಡರೆ ನಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಅಷ್ಟೆ ಅಲ್ಲದ ಸಾಕ್ಷಾತ್ ಪರಬ್ರಹ್ಮನೇ ಆಶೀರ್ವಾದ ಮಾಡಿದಂತೆ ಅನುಭವಕ್ಕೆ ಬರುತ್ತದೆ.

ಮಗು ಹುಟ್ಟಿದಾಗಿಂದ ಮದುವೆ ಮುಂಜಿ ಗೃಹ ಪ್ರವೇಶಗಳಲ್ಲಿ ನಾಮಕರಣ ಎಲ್ಲಾ ಕಾರ್ಯಗಳಲ್ಲಿಯೂ ಈ ಅಕ್ಷತೆಯು ಮುಖ್ಯವಾಗಿದ್ದು ಆಗಮ ಶಾಸ್ತ್ರದಿಂದ ಅಕ್ಷತೆಗಳು ಆಚಾರಕ್ಕೆ ಬಂದಿದೆ.ದೇವರನ್ನು ಪೂಜಿಸುವುದಕ್ಕೂ ಮನುಷ್ಯರನ್ನು ಆಶೀರ್ವಾದಿಸುವುದಕ್ಕೂ ನಾವು ಅಕ್ಷತೆಗಳನ್ನೇ ಉಪಯೋಗ ಮಾಡುತ್ತೇವೆ.

ಮಾನವ ದೇಹವನ್ನು ಪುಷ್ಟಿ ಗೊಳುಸುವ ಮತ್ತು ಸುಲಭ ರೀತಿಯಲ್ಲಿ ಜೀರ್ಣಗೊಳಿಸುವ ಗುಣಗಳು ಅಕ್ಕಿಯಲ್ಲಿವೆ. ಯಜ್ಞಯಾಗಗಳನ್ನು ಮಾಡುವ ಋಷಿಗಳು ಅಕ್ಕಿಯಿಂದ ಪಾಯಸ ಮಾಡಿ ಅದರಲ್ಲಿ ಮಂತ್ರಶಕ್ತಿಯನ್ನು ಮಿಶ್ರಿತಗೊಳಿಸಿ ಬೇಕಾದವರಿಗೆ ತಿನ್ನಿಸುತ್ತಿದ್ದರು ಶ್ರೀರಾಮ ವಿಶ್ವಾಮಿತ್ರ ಪರಶುರಾಮ ಮುಂತಾದವರು ಅಕ್ಕಿಯ ಪಾಯಸ ಪ್ರಭಾವದಿಂದ ಜನಿಸಿದ್ದಾರೆ.

ಅಕ್ಷತೆಗಳಲ್ಲಿ ಹಳದಿಯನ್ನು ಹಾಕಿರುತ್ತಾರೆ ಹಳದಿ ಮೈಮೇಲೆ ಬೀಳುವುದು ಶುಭಪ್ರದವೆಂದು ಭಾವಿಸುತ್ತಾರೆ ಕೆಲವರು ದೇವರ ಬಳಿಯಲ್ಲಿ ಅಕ್ಷತೆಗಳನ್ನಿಟ್ಟು ಪ್ರತಿದಿನವು ತಲೆಯ ಮೇಲೆ ಹಾಕಿ ಕೊಳ್ಳುತ್ತಾರೆ ಇದರಿಂದ ಪರಮಾತ್ಮನ ಆಶೀರ್ವಾದ ಲಭಿಸುತ್ತದೆ ಎಂದು ಭಾವಿಸುತ್ತಾರೆ.

ಅಕ್ಕಿಯನ್ನೇ ಅಕ್ಷತೆಗೆ ಬಳಸುವುದರಲ್ಲಿ ಒಂದು ಪರಮಾರ್ಧವಿದೆ ಗೋಧಿ ಜೋಳ ಮುಂತಾದವುಗಳನ್ನು ಬಳಸದೇ ಅಕ್ಕಿಯನ್ನೇಯಾಕೆ ಉಪಯೋಗಿಸುತ್ತಾರೆಂದರೆ ಬತ್ತದ ಹೊಟ್ಟೆಯಿಂದ ಹೊರಗೆ ಬಂದ ಅಕ್ಕಿ ಎಂದರೇ ಭೂಮಿಯ ಮೇಲೆ ತಿರುಗಾಡುವ ಅನೇಕ ಕ್ರಿಮಿಗಳಿಗೆ ಬಹು ಇಷ್ಟ.

ಅಕ್ಷತೆಯ ರೂಪದಿಂದ ಕೆಳಗೆ ಬಿದ್ದಿರುವ ಅಕ್ಕಿಕಾಳುಗಳು ಚಿಕ್ಕಪುಟ್ಟ ಪ್ರಾಣಿಗಳಿಗೆ ಆಹಾರವಾಗುತ್ತದೆ ಪ್ರಾಣಿದಯಾ ದೃಷ್ಟಿಯಿಂದ ಬಂದ ಆಚಾರವಿದು ಭಾರತೀಯ ತಾತ್ವಿಕ ದೃಷ್ಟಿ ಬಹುವಿಶಾಲವಾಗಿದೆ ಎಂಬುದಕ್ಕೆ ಇದೊಂದು ಉದಾಹರಣೆ. ಈ ವಿಚಾರವನ್ನು ಪ್ರತಿಯೊಬ್ಬರಿಗೂ ಹ೦ಚಿಕೊಳ್ಳಿ.

Leave a Reply

Your email address will not be published. Required fields are marked *