ಬಿಸಿ ಬಿಸಿ ಇಡ್ಲಿಯ ಜೊತೆಗೆ ಒಂದೆರಡು ಉದ್ದಿನವಡೆ ಇದ್ದರೆ. ಬೆಳಗಿನ ಉಪಹಾರವು ಪರಿಪೂರ್ಣವಾಗುತ್ತದೆ ಉದ್ದಿನ ವಡೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಮ್ಮನ್ನು ಕಾಪಾಡುತ್ತದೆ. ಇದು ಪ್ರೋಟೀನ್ ಮತ್ತು ವಿಟಮಿನ್ ಬಿ ಯ ಶ್ರೀಮಂತವಾದ ಮೂಲವನ್ನು ಹೊಂದಿದೆ. ಅಲ್ಲದೆ ಕಬ್ಬಿನ ಪೋಲಿಕ್ ಆಮ್ಲ ಕ್ಯಾಲ್ಸಿಯಂ ಮ್ಯಾಗ್ನಿಷಿಯಂ ಮತ್ತು ಪೊಟ್ಯಾಷಿಯಂ ಗಳಿಂದ ಸಮೃದ್ಧವಾಗಿದೆ.

ಸತ್ಯಹಾರಿಗಳಿಗೆ ಇದೊಂದು ಅತ್ಯುತ್ತಮವಾದ ಆಹಾರ ಎಂದರೆ ತಪ್ಪಾಗಲಾರದು. ಅಷ್ಟಕ್ಕೂ ಈ ದಿನ ಒಡೆಯು ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಮಧುಮೇಹ ಹೊಂದಿರುವವರು ಉದ್ದಿನ ವಡೆಯನ್ನು ಸೇವನೆ ಮಾಡಬಹುದೇ ಅಥವಾ ತೂಕ ಇಳಿಕೆ ಮಾಡಿಕೊಳ್ಳುವವರು ತಮ್ಮ ಡಯಟ್ ನಲ್ಲಿ ಉದ್ದಿನ ವಡೆಗಳನ್ನು ಸೇವಿಸಬಹುದೇ ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ.

ಉದ್ದಿನಬೇಳೆಯನ್ನು ನಿಮ್ಮ ಆಹಾರದಲ್ಲಿ ಸೇವಿಸುವುದರಿಂದ ಅತ್ಯುತ್ತಮವಾದ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಡೀಪ್ ಫ್ರೈ ಮಾಡದೇ ಬೇರೆ ರೀತಿಯಲ್ಲಿ ಆಹಾರ ಸೇವನೆ ಮಾಡಬೇಕು. ಏಕೆಂದರೆ ಉದ್ದಿನಬೇಳೆಯೂ ಫೈಬರ್ ನಲ್ಲಿ ಸಮೃದ್ಧವಾಗಿದೆ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನೀವು ಅತಿ ಸಾರಾ ಮಲಬದ್ಧತೆ ಸೆಳೆತ ಅಥವಾ ಹುಟ್ಟಿಬ್ಬರದಿಂದ ಬಳಲುತ್ತಿದ್ದರೆ ಉದ್ದಿನ ವಡೆಯನ್ನು ನಿಮ್ಮ ಆಹಾರದಲ್ಲಿ ಸೇವಿಸಬಹುದು.

ಪದೇ ಪದೇ ಬಿಸಿ ಮಾಡಿದ ಎಣ್ಣೆ ಅಥವಾ ಉಳಿದ ಎಣ್ಣೆಯನ್ನು ಅಡುಗೆಗೆ ಬಳಸುವುದರಿಂದ ಕ್ಯಾನ್ಸರ್ ಅಪಾಯವನ್ನು ಕೂಡಾ ಹೆಚ್ಚಿಸುತ್ತದೆ. ಇದು ಹೊಟ್ಟೆಯ ಕ್ಯಾನ್ಸರ್, ಪಿತ್ತಕೋಶದ ಕ್ಯಾನ್ಸರ್, ಪಿತ್ತಜನಕಾಂಗದ ಕ್ಯಾನ್ಸರ್ ಮತ್ತು ಇತರ ರೀತಿಯ ಕ್ಯಾನ್ಸರ್ ಗೆ ಕಾರಣವಾಗಬಹುದು.

ಇನ್ನು ಉದ್ದಿನಬೇಳೆಯೂ ಫೈಬರ್ ಮೆಗ್ನೀಷಿಯಂ ಮತ್ತು ಪೊಟ್ಯಾಶಿಯಂ ಅನ್ನು ಹೊಂದಿರುತ್ತದೆ. ಇದು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಅಲ್ಲದೆ ದೇಹದಲ್ಲಿನ ಅಧಿಕ ಕೊಲೆಸ್ಟ್ರಾಲ್ಮಟ್ಟವನ್ನು ಸುಧಾರಿಸುವ ಮೂಲಕ ಹೃದಯದ ರಕ್ತನಾಳದ ವ್ಯವಸ್ಥೆಯನ್ನು ಆರೋಗ್ಯಕರವಾಗಿ ಇರಿಸುತ್ತದೆ. ಇನ್ನು ಈ ಬೇಳೆಯಲ್ಲಿ ಹೆಚ್ಚಿನ ಕಬ್ಬಿಣ ಅಂಶವನ್ನು ಹೊಂದಿದ್ದು ಒಟ್ಟಾರೆ ದೇಹದಲ್ಲಿ ಶಕ್ತಿ ಮಟ್ಟವನ್ನು ಹೆಚ್ಚು ಮಾಡಲು ಸಹಾಯಮಾಡುತ್ತದೆ.

ಹಲವು ಬಾರಿ ಬಿಸಿ ಮಾಡಿದ ಎಣ್ಣೆಯಲ್ಲಿ ತಯಾರಿಸಿದ ಆಹಾರವನ್ನು ತಿನ್ನುವುದರಿಂದ ಅದರಲ್ಲಿರುವ ಕೊಬ್ಬು ದೇಹಕ್ಕೆ ಹೋಗುತ್ತದೆ. ಇದರಿಂದ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಇದು ಹೃದಯ ಸಂಬಂಧಿ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಉಳಿದಿರುವ ಎಣ್ಣೆಯನ್ನು ಮತ್ತೆ ಮತ್ತೆ ಬಳಸಿ, ಆಹಾರ ತಯಾರಿಸುವುದರಿಂದ ಹೊಟ್ಟೆ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆಳು ಬರಬಹುದು. ಈ ಕಾರಣದಿಂದಾಗಿ ಅಲ್ ಜೈಮರ್, ಅಸಿಡಿಟಿ ಮತ್ತು ಇತರ ಗಂಭೀರ ರೋಗಗಳನ್ನು ಕೂಡಾ ತರಬಹುದು.

Leave a Reply

Your email address will not be published. Required fields are marked *