ಧೂಮಪಾನ ಆರೋಗ್ಯಕ್ಕೆ ಹಾಕಿಕಾರಕ ಎಂದು ಗೊತ್ತಿದ್ದರೂ ಅದನ್ನು ಬಿಡದೆ ಸೇದುತ್ತಾರೆ. ಆದೌ ಕೊನೆಗೆ ಕಾನ್ಸರ್ ನಂತಹ ಮಾರಕ ಕಾಯಿಲೆಗೆ ದೂಡುತ್ತದೆ. ಆದ್ದರಿಂದ ಸಿಗರೇಟ್ ಚಟವನ್ನು ಬಿಡಿಸಲು ಮತ್ತು ಬಿಡಲು ತುಂಬಾ ಪ್ರಯತ್ನ ಮಾಡುತ್ತೀರಾ. ಆದರೆ ಆಗುವುದಿಲ್ಲ. ಈ ಸಿಗರೇಟ್ ಚಟವನ್ನು ಬಿಡಿಸಲೆಂದೇ ಮಾರುಕಟ್ಟೆಗೆ ಅದೆಷ್ಟೋ ಚ್ಯುಯಿಂಗಮ್​ಗಳೂ ಸಹ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಆದರೆ ಇದನ್ನು ಬಳಸಿದರೂ ಫಲಿತಾಂಶ ಮಾತ್ರ ಶೂನ್ಯ ಎಂಬುದು ಧಮ್​ ಪ್ರಿಯರ ಮಾತು. ಆದರೀಗ ಧೂಮಪಾನವನ್ನು ತೊಡೆದು ಹಾಕುವುದು ಹೇಗೆ ಎಂಬುದರ ಬಗ್ಗೆ ಅಧ್ಯಯನವೊಂದನ್ನು ನಡೆಸಲಾಗಿದೆ. ಈ ಮಹತ್ತರ ಸಂಶೋಧನೆಯಿಂದ ನಿಂಬೆ ರಸವನ್ನು ಕುಡಿದರೆ ಸಿಗರೇಟ್ ಚಟಕ್ಕೆ ಗುಡ್ಬಾಯ್ ಹೇಳಬಹುದು ಎಂದು ತಿಳಿಸಲಾಗಿದೆ.

ಥಾಯ್ಲೆಂಡ್​ನ Srinakharinwirot University ಮೆಡಿಸಿನ್ ವಿಭಾಗದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಸಿಗರೇಟ್​ ಸೇವನೆಯಿಂದ ಮುಕ್ತಿ ಪಡೆಯಲು ನಿಂಬೆ ಜ್ಯೂಸ್ ಪರಿಣಾಮಕಾರಿ ಎಂಬುದು ತಿಳಿದುಬಂದಿದೆ. ಈ ಅಧ್ಯಯನಕ್ಕಾಗಿ ಸಿಗರೇಟ್​ ಸೇವಿಸುತ್ತಿದ್ದ 2 ತಂಡಗಳ ಗುಂಪುಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಶೇ.47 ರಷ್ಟು ಮಂದಿಗೆ ಪ್ರತಿದಿನ ನಿಂಬೆ ರಸ ನೀಡಲಾಗಿತ್ತು. ಶೇ.53 ರಷ್ಟಿದ್ದ ಮತ್ತೊಂದು ಗುಂಪಿಗೆ ನಿಕೋಟಿನ್ ಚ್ಯುಯಿಂಗಮ್ ನೀಡಲಾಯಿತು. ನಂತರ 12 ವಾರಗಳವರೆಗೆ ಇವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿಲಾಗಿತ್ತು. ಈ ವೇಳೆ ಚ್ಯುಯಿಂಗಮ್ ಜಗಿದವರಿಕ್ಕಿಂತ ನಿಂಬೆ ಜ್ಯೂಸ್ ಕುಡಿದವರಲ್ಲಿ ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿರುವುದು ಕಂಡು ಬಂದಿದೆ. ಅಲ್ಲದೆ ನಿಂಬೆ ರಸವನ್ನು ಸೇವಿಸಿದವರಲ್ಲಿ ಧಮ್ ಹೊಡೆಯುವ ಬಯಕೆಯು ಕಡಿಮೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಸಿಗರೇಟ್​ನಿಂದ ಮುಕ್ತಿ ಪಡೆಯಲು ನಿಂಬೆ ರಸವನ್ನು ಪ್ರತಿನಿತ್ಯ ಕುಡಿಯಬೇಕಾಗುತ್ತದೆ. ಈ ಜ್ಯೂಸ್ ತಯಾರಿಸಲು 1 ನಿಂಬೆ ಹಣ್ಣು, 1 ನಿಂಬೆಕಾಯಿ, 1 ಟೀ ಚಮಚ ಸಕ್ಕರೆ, 1 ಕಪ್​ ನೀರು ಹಾಗೂ ಸ್ವಲ್ಪ ಐಸ್​ ಅವಶ್ಯಕ. ಒಂದು ಸಣ್ಣ ಗ್ಲಾಸ್​ ನೀರಿನಲ್ಲಿ ನಿಂಬೆಹಣ್ಣುಗಳನ್ನು ಕತ್ತರಿಸಿ ರಸ ಹಿಂಡಿರಿ. ಈ ರಸಕ್ಕೆ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಮಿಶ್ರಣ ಮಾಡಿ ಜ್ಯೂಸ್ ಮಾಡಿ ದಿನಕ್ಕೆ 2 ಬಾರಿ ಕುಡಿಯಿರಿ. ಹೀಗೆ ಮಾಡುವುದರಿಂದ ಸಿಗರೇಟ್​ ಸೇದಬೇಕೆಂಬ ಬಯಕೆ ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುತ್ತಾರೆ ಸಂಶೋಧಕರು.

Leave a Reply

Your email address will not be published. Required fields are marked *