ಈ ಸಂಜೀವಿನಿಯನ್ನು ನಿಮ್ಮ ಮನೆಯಲ್ಲಿ ಇಡಿ ಅನಾರೋಗ್ಯದಿಂದ ಮುಕ್ತಿಯನ್ನ ಪಡೆಯಿರಿ. ನೋಡಿ ಸ್ನೇಹಿತರೆ ನಾವು ಸಂಜೀವಿನಿಯನ್ನ ತಿನ್ನುವುದರಿಂದ ಚಿರಂಜೀವಿ ಆಗ್ತಿವಿ. ಚಿರಂಜೀವಿ ಅಂದರೆ ಏನು ಅರ್ಥ ಆದರೆ ಸಾವೇ ಇಲ್ಲದವ ಅಂತ. ಆದರೆ ನಿಜವಾದ ಸಂಜೀವಿನಿಯ ಬಗ್ಗೆ ನಾವು ಯಾರು ಕೂಡ ಕೇಳಿಲ್ಲ ನೋಡು ಕೂಡ ಇಲ್ಲ. ಆದರೆ ನಮ್ಮದು ಸಂಪ್ರದಾಯ ಬದ್ಧವಾದ ದೇಶ ಪಾರಂಪರಿಕ ದೇಶ. ಇಲ್ಲಿ ಸಂಜೀವಿನಿ ಅಂತಹ ಅನೇಕ ವಸ್ತುಗಳು ಸಿಗುತ್ತವೆ.

ಈ ವಸ್ತುಗಳನ್ನು ಉಪಯೋಗಿಸಿಕೊಂಡು ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅತಿ ಚಿಕ್ಕದಾದ ಗಿಡ ಇದು. ಎಲ್ಲಿಯೂ ಕೂಡ ಬೆಳೆಸಬಹುದು ಒಂದು ಸ್ವಲ್ಪ ಜಾಗದಲ್ಲಿ ಇದನ್ನ ಬೆಳೆಸಬಹುದು. ಮನೆಯ ಮಹಡಿಯ ಮೇಲೆ ಬೆಳೆಸಬಹುದು ಮನೆಯ ಅಂಗಳದಲ್ಲೂ ಬೆಳೆಸಬಹುದು ಮನೆಯ ಹೊರಗೆ ಇರುವ ಸಣ್ಣ ಬಾಲ್ಕನಿಯಲ್ಲಿ ಕೂಡ ಇದನ್ನು ಬೆಳೆಸಬಹುದು. ಹಾಗಾದ್ರೆ ಇದು ಯಾವುದು ಅಂತ ಕೇಳಿದ್ರೆ ಇದೇ ದಾಸವಾಳ. ನಿಮಗೆಲ್ಲಾ ಗೊತ್ತೇ ಇದೆ ದಾಸವಾಳದ ಬಗ್ಗೆ. ದೇವರ ಪೂಜೆಗೆ ನಾವು ಈ ಹೂವನ್ನ ಬಳಸುತ್ತೇವೆ. ಗಣಪತಿಗೆ ಶ್ರೇಷ್ಠವಾದ ಹೂವು ಈ ದಾಸವಾಳ ಹೂವು ಅದರಲ್ಲೂ ಕೆಂಪು ದಾಸವಾಳ ಎಂದರೆ ಗಣಪತಿಗೆ ತುಂಬಾ ಶ್ರೇಷ್ಠ. ಆದರೆ ಬಹಳಷ್ಟು ಜನರಿಗೆ ಇದರ ಆರೋಗ್ಯ ಉಪಯೋಗ ಗೊತ್ತಿಲ್ಲ. ಇದು ಪೂಜೆಗೆ ಎಷ್ಟು ಶ್ರೇಷ್ಠವೋ ಅಷ್ಟೇ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಹಾಗಾದ್ರೆ ಇದರ ಆರೋಗ್ಯದ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

ನೋಡಿ ಸ್ನೇಹಿತರೆ ಈಗಿನ ಜೀವನ ಶೈಲಿಯಿಂದ ಪ್ರತಿ ಮನೆಯಲ್ಲಿಯೂ ಸಹ ಶುಗರ ಬಿಪಿ ಸಮಸ್ಯೆ ಹೆಚ್ಚಾಗುತ್ತಿದೆ. ಅಂತಹವರಿಗೆ ಈ ದಾಸವಾಳದ ಹೂವು ತುಂಬಾ ಪ್ರಯೋಜನಕಾರಿಯಾಗಿದೆ. ದಾಸವಾಳದ ಹೂವನ್ನು ನೀರಿನಲ್ಲಿ ಕುದಿಸಿ ಕಷಾಯದ ರೂಪದಲ್ಲಿ ಕುಡಿಯುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು ದೇಹದಲ್ಲಿ ಇರುವಂತಹ ಟಾಕ್ಸಿನ್ ಅಂಶವನ್ನು ಇದು ಹೊರಗೆ ಹಾಕುತ್ತದೆ. ದೇಹವನ್ನು ಪರಿಶುದ್ಧವಾಗಿ ಇಡುವುದರಲ್ಲಿ ಇದು ಸಹಾಯ ಮಾಡುತ್ತದೆ.

ಈ ಹೂವಿನಿಂದ ಮಾಡಿರುವ ಚಹಾ ವನ್ನು ಕುಡಿಯುವುದರಿಂದ ಬಿಪಿಯು ಕಂಟ್ರೋಲ್ ಗೆ ಬರುತ್ತದೆ ಮತ್ತು ಶುಗರ್ ಕೂಡ ಕಂಟ್ರೋಲ್ ಗೆ ಬರುತ್ತದೆ. ದಾಸವಾಳದಲ್ಲಿ ತುಂಬಾ ರೀತಿಯ ಜಾತಿಗಳಿವೆ. ಕೆಂಪು ದಾಸವಾಳ ಬಿಳಿಯ ದಾಸವಾಳ ಹಳದಿಯ ದಾಸವಾಳ ಇನ್ನಿತರ ಹಲವಾರು ರೀತಿಯ ದಾಸವಾಳಗಳಿವೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಇದು ಇಮ್ಯೂನಿಟಿಯನ್ನು ಹೆಚ್ಚಿಸುತ್ತದೆ ಅಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *