ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ಒಂದೊಮ್ಮೆ ಅಲ್ಲ, ಹಲವಾರು ಬಾರಿ ತಲೆನೋವು ಬಂದೇ ಇರುತ್ತದೆ, ಆದರೆ ಹಲವಾರು ಬಾರಿ ತಲೆನೋವು ಬಂದಾಗಲೂ ನಮಗೊಂದು ಪ್ರಶ್ನೆ ಕಾಡುತ್ತದೆ. ಇದು ಯಾವುದಾದರೂ ಸೀರಿಯಸ್ ತಲೆ ನೋವು ಇರಬಹುದಾ? ತುಂಬಾ ಕೆಟ್ಟದಾಗಿ ತೀವ್ರವಾಗಿ ಅದು ತಿರುಗಿದರೆ ಅದರ ಪರಿಣಾಮ ಏನಾಗಬಹುದು? ಅಥವಾ ನಮ್ಮ ತಲೆಯಲ್ಲಿ ಏನಾದರೂ ಬ್ರೈನ್ ಟ್ಯೂಮರ್ ಏನಾದರೂ ಬೆಳೆದು ಕೊಂಡು ಬಿಟ್ಟಿದೆಯಾ? ಅದರಿಂದಾಗಿ ಆಗಿಂದಾಗ ಈ ತಲೆನೋವು ಬರುತ್ತದೆಯೋ ಏನೋ ಅಂತ. ಸೋ ನಿಮ್ಮ ತಲೆ ನೋವನ್ನೂ ಇನ್ನಷ್ಟು ಕೂಲಂಕುಷವಾಗಿ ಪರೀಕ್ಷೆ ಮಾಡಿ, ತಲೆನೋವು ತೀವ್ರ ಆದರೆ, ಯಾವ ರೀತಿಯ ತಲೆ ನೋವು ಹೆಚ್ಚಾದರೆ ನಾವು ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎನ್ನುವುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ತಲೆನೋವು ಸಾಮಾನ್ಯವಾಗಿ ಬ್ರೈನ್ ಟ್ಯೂಮರ್ ನಿಂದಾಗಿ ಬರುವುದಾದರೆ ಅದು ಬಂದು ಒಂದು ಕಡೆ ಬರಬಹುದು ಅಥವ ತಲೆ ತುಂಬಾ ಹಲವಾರು ಕಡೆ ಒಮ್ಮೆಲೇ ಬರಬಹುದು. ಈ ತರಹದ ತಲೆನೋವು ಸಾಮಾನ್ಯವಾಗಿ ಬೆಳಿಗ್ಗೆ ಏಳುತ್ತಲೇ ಶುರು ಆಗುತ್ತದೆ. ಒಂದೊಮ್ಮೆ ನಿಮ್ಮನ್ನು ನಿದ್ದೆ ಇಂದ ಎಬ್ಬಿಸಿ ನಿಮ್ಮ ನಿದ್ದೆಯನ್ನು ಹಾಳು ಮಾಡುತ್ತದೆ.

ತಲೆನೋವು ಹಾಗೆಯೇ ತೀವ್ರವಾಗುತ್ತ ಹೋಗುತ್ತದೆ. ಇಂತಹ ತಲೆನೋವು ಒಮ್ಮೆ ಬಂದು ಬರು ಬರುತ್ತಾ ಹೆಚ್ಚಾಗಿ ತೀವ್ರತೆ ಅತೀ ಆದಾಗ ಅಂತಹ ಸಮಯದಲ್ಲಿ ನಮ್ಮ ಕಣ್ಣು ಮಂಜಾಗುವಿಕೆ, ಅಥವಾ ಎರಡೆರಡು ಕಾಣುವಿಕೆ ಅದನ್ನು ನಾವು ಇಂಗ್ಲಿಷ್ ಅಲ್ಲಿ ದಿಪ್ಲೋಪಿಯ ಅಂತ ಹೇಳುತ್ತಾರೆ. ಅಥವಾ ಡಬಲ್ ವಿಷನ್ ಸೋ ಇಂತಹ ತಲೆನೋವು ಅದರ ಉತ್ತುಂಗ ತಲುಪಿದಾಗ ಒಂದು ತರಹ ತಲೆ ಕೆಳಗಾಗಿ ಪ್ರತಿ ವಸ್ತುವೂ ಎರಡೆರಡು ಕಾಣುವುದು ಅಥವ ಬ್ಲರ್ರಿಂಗ್ ಅಫ್ ಐಯ್ಸ್ ಆದರೆ ಅಂತಹ ತಲೆನೋವನ್ನು ನಾವು ಹೆಚ್ಚಾಗಿ ಗಮನ ಕೊಡಬೇಕಾಗುತ್ತದೆ. ಬ್ರೈನ್ ಟ್ಯೂಮರ್ ನ ನೋವು ಬರು ಬರುತ್ತಾ ನೋವು ಹೆಚ್ಚಾಗುತ್ತಾ ಬರುತ್ತದೆ. ಒಂದೊಮ್ಮೆ ನೀವು ನಿವಾರಕ ಮಾತ್ರೆ ಅಥವಾ ತಲೆನೋವಿನ ಮಾತ್ರೆ ಇಂದ ನೋವು ಶಮನ ಆದರೂ ಸಹಿತ ವಾರ ವಾರಕ್ಕೆ ತಿಂಗಳಿಗೆ ಅದು ಹೆಚ್ಚಾಗುತ್ತಲೇ ಹೋದರೆ ಅದನ್ನು ನಾವು ಪರೀಕ್ಷೆಗೆ ಒಳಪಡಿಸಬೇಕು. ಇಂತಹ ತಲೆನೋವು ಅದರ ಉತ್ತುಂಗದಲ್ಲಿ ವಾಂತಿ ಸಹಿತವಾಗಿ ಬರುತ್ತದೆ. ವಾಂತಿಯುತವಾದ ತಲೆನೋವು ಅಥವಾ ಕಣ್ಣು ಮಂಜಾಗುವುದು ಅಥವಾ ಡಬಲ್ ವಿಷನ್ ಎರಡೆರಡು ಕಾಣುವುದು ಈ ರೀತಿ ಆದರೆ ಇದೂ ಸಹ ತೀವ್ರತೆಯನ್ನು ಸೂಚಿಸುತ್ತದೆ. ತಲೆನೋವು ಕೆಲವೊಮ್ಮೆ ನಾವು ಪ್ರಜ್ಞಾಹೀನರಾಗಿ ಮೂರ್ಛೆ ಹೋಗುವಂತೆ ಕೂಡ ಮಾಡಬಹುದು. ಅಂತಹ ಧಿಡೀರ್ ಅಂತ ಬರುವ ತಲೆನೋವು ಒಮ್ಮೆಲೇ ಗರಬಡಿದಂತೆ ಒಮ್ಮೆಲೇ ಬರುವ ತಲೆನೋವನ್ನು ಹೆಚ್ಚಾಗಿ ಬ್ರೈನ್ ಟ್ಯೂಮರ್ ಆಗಿದ್ದಲ್ಲಿ ಕಾಣ ಸಿಗುತ್ತದೆ.

ಕೆಲವೊಮ್ಮೆ ಇದು ಬ್ರೈನ್ ಟ್ಯೂಮರ್ ಆಗಿರಬಹುದು ಅಥವಾ ರಕ್ತ ನಾಳದಲ್ಲಿ ಬಲೂನಿನ ತರಹ ಒಂದು ಉತ ಬಂದು ಅದು ಒಡೆದು ರಕ್ತಸ್ರಾವ ಆದರೆ ಈ ರೀತಿಯ ತಲೆನೋವು ಬರಬಹುದು. ಇಂತಹ ತಲೆನೋವು ಆದರೂ ಒಂದು ಗಂಟೆ ಇದ್ದು ಅದು ತಾನಾಗಿ ಕಡಿಮೆ ಆಗಿ ಅಥವಾ ಮಾತ್ರೆ ತೆಗೆದುಕೊಂಡ ತಕ್ಷಣ ಕಡಿಮೆ ಆದರೆ ಅದು ಸಾಮಾನ್ಯವಾದ ತಲೆನೋವು ಅಥವಾ ಈ ರೀತಿಯಾದ ತಲೆನೋವು ನಿಮಗೆ ಹಲವಾರು ಬಾರಿ ಬಂದಿದ್ದು ಈ ತಲೆನೋವು ನನಗೆ ಬಹಳ ಹತ್ತಿರವಾಗಿ ಬಂದಿದೆ, ಕಣ್ಣಿನ ಸುತ್ತ ಬರುತ್ತದೆ, ತಲೆಯ ಒಂದು ಕಡೆ ಬರುತ್ತದೆ, ಅಥವಾ ಬಂದು ಇಂದು ಗಂಟೆ ಇದ್ದು ತಾನಾಗಿ ಸರಿ ಹೋಗುತ್ತದೆ ಅಂದರೆ ಅದು ನಿಮ್ಮ ಮೈಗ್ರೇನ್ ತಲೆನೋವು ಇರಬಹುದು. ಬ್ರೈನ್ ಟ್ಯೂಮರ್ ಇರದೇ ಇರಬಹುದು. ಕೆಲವೊಮ್ಮೆ ಈ ತಲೆನೋವು ಕತ್ತಿನ ಕಡೆಗೆ ಹರಡಿ ಕತ್ತು ನೋವು ಅಥವಾ ಒಂದು ಕಡೆ ಕೈ ಕಾಲಿನ ನಿಶ್ಯಕ್ತಿ ಅಥವಾ ಪರಲೈಸಿಸ್ ತರಹ ಕಾಣಿಸಿಕೊಂಡರೆ ಅದೂ ಸಹ ತೀವ್ರವಾದ ತಲೆನೋವು, ಇಂತಹ ಚಿನ್ಹೆಗಳು, ಸೂಚನೆಗಳು ಕಂಡು ಬಂದಲ್ಲಿ ತಕ್ಷಣವೇ ನಿಮ್ಮ ಹತ್ತಿರ ಇರುವ ನರರೋಗ ತಜ್ಞರನ್ನು ಕಂಡು ಅದನ್ನು ಪರೀಕ್ಷೆಗೆ ಒಳಪಡ್ಸಿ ಅದು ಏನು ಎಂದು ತಿಳಿದುಕೊಂಡು ನಂತರ ಅದಕ್ಕೆ ಸರಿ ಹೊಂದುವ ಚಿಕಿತ್ಸೆ ಕೊಡಿಸಬೇಕು. ಈ ಮಾಹಿತಿ ನಿಮಗೆ ಉಪಯೋಗಕಾರಿ ಎನ್ನಿಸಿದರೆ ದಯವಿಟ್ಟು ಶೇರ್ ಮಾಡಿ ಲೈಕ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *