ಸಾಮಾನ್ಯವಾಗಿ ಹೆದ್ದಾರಿಯಲ್ಲಿ ಸಂಚಾರ ಮಾಡುವಂತಹ ವಾಹನ ಚಲಾಕರು, ಆಗಾಗ ಟೋಲ್ ಗೇಟ್ ಗಳಲ್ಲಿ ನಿಲ್ಲಿಸಿ, ಶುಲ್ಕವನ್ನು ಕಟ್ಟಿ ಮುಂದೆ ತೆರಳಬೇಕಿತ್ತು. ಇದರಿಂದ ವಾಹನ ಚಲಾವಕರು ಬಹಳನೇ ಸಮಸ್ಯೆಯನ್ನು ಎದುರಿಸಿದರು. ಅಷ್ಟೇ ಅಲ್ಲದೆ ಕೆಲವು ಹೆದ್ದಾರಿಗಳಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗುತ್ತಿತ್ತು. ಏಕೆಂದರೆ ಹೈವೇಯಲ್ಲಿ ಸಂಚಾರ ಮಾಡುವಂತಹ ಪ್ರತಿಯೊಂದು ವೆಹಿಕಲ್ ಕೂಡ ಇದಕ್ಕೆ ಶುಲ್ಕವನ್ನು ಕಟ್ಟಿದ ನಂತರವಷ್ಟೇ ಮುಂದೆ ಹೋಗಬೇಕಿತ್ತು. ಇದನ್ನು ಗಮನಿಸಿದಂತಹ ಸರ್ಕಾರ ಟೋಲ್ ಗಳಲ್ಲಿ ನಡೆಯುತ್ತಿರುವಂತಹ ತೊಂದರೆಯನ್ನು ನಿವಾರಣೆ ಮಾಡುವ ದೃಷ್ಟಿಯಿಂದಾಗಿ ಫಾಸ್ಟ್ ಟ್ಯಾಗ್ ಎಂಬ ಹೊಸ ನೀತಿಯನ್ನು ಜಾರಿಗೆ ತಂದಿತು. ಇದರ ಅನುಸಾರ ಹೈವೇನಲ್ಲಿ ಸಂಚಾರ ಮಾಡುವಂತಹ ವಾಹನಗಳ ಮೇಲೆ ಒಂದು ಬಾರ್ಕೋಡ್ ಇರುವಂತಹ ಸ್ಟಿಕ್ಕರ್ ಅನ್ನು ಅಂಟಿಸಲಾಗಿತ್ತು.

ಇದಕ್ಕೆ ನಮ್ಮ ಖಾತೆಯಿಂದ ರಿಚಾರ್ಜ್ ಮಾಡಿಕೊಂಡರೆ ಟೋಲ್ ಗೇಟ್ ಗಳಲ್ಲಿ ವಾಹನ ಪಾಸಾದಾಗ ಅದರಿಂದ ಹಣ ಕಟ್ ಆಗುತಿತ್ತು ಒಂದು ರೀತಿಯಲ್ಲಿ ಇದು ಉತ್ತಮ ಕೆಲಸವೇ ಆಗಿತ್ತು ಬಹಳಷ್ಟು ಸಮಯ ಉಳಿತಾಯವಾಗುತ್ತಿತ್ತು. ಆದರೂ ಕೂಡ ಹೆದ್ದಾರಿಗಳಲ್ಲಿ ನೀವು ಸಂಚಾರ ಮಾಡುವಾಗ ಬಹಳಷ್ಟು ಟೋಲ್ ಗೇಟ್ ಗಳು ದೊರೆಯುತ್ತದೆ.

ಎಲ್ಲಾ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ನಿಂದ ಹಣವನ್ನು ಕಡಿತ ಮಾಡಲು ಸಾಧ್ಯವಾಗುವುದಿಲ್ಲ ಇದರಿಂದ ವಾಹನ ಚಲವಕರಿಗೆ ಹೆಚ್ಚಿನ ಹಣ ಕಡಿತವಾಗುತ್ತದೆ ಎನ್ನುತ್ತಿದ್ದರು. ಇದನ್ನು ಗಮನದಲ್ಲಿ ಇಟ್ಟುಕೊಂಡಂತಹ ಕೇಂದ್ರ ಸರ್ಕಾರ ಇದೀಗ ನೂತನವಾಗಿ ಮತ್ತೊಂದು ಯೋಜನೆಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಅದೇನೆಂದರೆ ಇನ್ನು ಮುಂದೆ ನೀವು ಟೋಲ್ ಗೇಟ್ ಗಳಲ್ಲಿ ಫಾಸ್ಟ್ ನಿಂದ ಹಣವನ್ನು ಕಡಿತ ಮಾಡಿಕೊಳ್ಳುವುದಾಗಲಿ ಅಥವಾ ಟೋಲ್ ಗೇಟ್ ಗಳಲ್ಲಿ ಹಣ ನೀಡುವುದಾಗಲಿ ಇರುವುದಿಲ್ಲ. ಇದರ ಬದಲಿಗೆ ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಷ್ಟು ಕಿಲೋಮೀಟರ್ ಸಂಚಾರ ಮಾಡುತ್ತೀರಾ ಆದಷ್ಟು ಕಿಲೋಮೀಟರ್ ಗೆ ಮಾತ್ರ ಹಣವನ್ನು ಕಟ್ಟಬೇಕಾಗುತ್ತದೆ. ನಿಮ್ಮ ವಾಹನದಲ್ಲಿ ಇರುವಂತಹ ನಂಬರ್ ಪ್ಲೇಟ್ ನ ಮುಖಾಂತರ ಸ್ಕ್ಯಾನ್ ಮಾಡಿಕೊಳ್ಳಲಾಗುತ್ತದೆ. ನಿಜಕ್ಕೂ ಇದೊಂದು ವಿಶೇಷವಾದಂತಹ ನಿಯಮ ಅಂತಾನೇ ಹೇಳಬಹುದು.

ಈಗಾಗಲೇ ಗುಜರಾತ್ ನಲ್ಲಿ ಒಂದು ನಿಯಮ ಜಾರಿಯಲ್ಲಿದ್ದು ಶೀಘ್ರದಲ್ಲಿಯೇ ದೇಶದ ಎಲ್ಲಾ ಭಾಗದಲ್ಲಿಯೂ ಕೂಡ ಈ ನಿಯಮವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಇದೀಗ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅದೆನೆಂದರೆ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೀಡರ್ (ANPR) ವ್ಯವಸ್ಥೆ ಜಾರಿಗೆ ಬರಲಿದೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ರಾಜಸ್ಥಾನದಲ್ಲಿ ಒಂದು ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್‌ವೇ ಅನ್ನು ನಿರ್ಮಿಸುತ್ತಿದ್ದು, ಅದರ ಮೇಲೆ ಟೋಲ್ ಬೂತ್ ಇರುವುದಿಲ್ಲ ಎನ್ನಲಾಗಿದೆ.

ಈ ನೂತನ ಯೋಜನೆಯಲ್ಲಿ ನೀವು ಹೈವೇ ಮೇಲೆ ಎಷ್ಟು ದೂರ ವಾಹನ ಸಂಚಾರ ಮಾಡುತ್ತಿರೋ ಅದಷ್ಟು ದೂರದ ಶುಲ್ಕವನ್ನು ಪಡೆಯಲಾಗುತ್ತದೆ. ಈ ವ್ಯವಸ್ಥೆಯಲ್ಲಿ, ಹೆದ್ದಾರಿಯಲ್ಲಿ ಒಂದು ಪ್ರವೇಶ ಮತ್ತು ನಿರ್ಗಮನ ಬಿಂದುವನ್ನು ಗುರುತಿಸಲಾಗುವುದು ವಾಹನ ಪ್ರವೇಶಿಸಿದ ತಕ್ಷಣ ನಂಬರ್ ಪ್ಲೇಟ್ ಸ್ಕ್ಯಾನ್ ಆಗುತ್ತದೆ. ನಂತರ ಪ್ರವೇಶ ಮತ್ತು ನಿರ್ಗಮನದ ಅಂತರಕ್ಕೆ ಅನುಗುಣವಾಗಿ ಪ್ರಯಾಣಿಕರ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ. ಈವರೆಗೂ ಬಂದ ಎಲ್ಲಾ ಯೋಜನೆಗಳಿಗಿಂತ ಇದೊಂದು ಉತ್ತಮ ಯೋಜನೆ ಎಂದು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಾಗಾಗಿ ಇನ್ನು ಮುಂದೆ ಪ್ರಯಾಣಿಕರು ಚಿಂತೆ ಮಾಡುವಂತಹ ಅಗತ್ಯವಿಲ್ಲ ಟೋಲ್ ಗೇಟ್ ಗಳಲ್ಲಿ ಅನಗತ್ಯವಾಗಿ ಕಾಯಬೇಕಾದಂತಹ ಪ್ರಮೇಯವೂ ಕೂಡ ಇಲ್ಲ.

Leave a Reply

Your email address will not be published. Required fields are marked *