ಅವಿವಾಹಿತರಿಗೆ ಕಂಕಣ ಭಾಗ್ಯ ನೀಡುವ ಕ್ಷೇತ್ರ ಎಂದೇ ಪ್ರಸಿದ್ದಿ ಪಡೆದಿರುವ ಈ ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಿದರೆ ಒಂದು ವರುಷದ ಒಳಗಡೆ ವಿವಾಹ ಭಾಗ್ಯ ಲಭಿಸುವುದು ಎಂಬ ಬಲವಾದ ನಂಬಿಕೆ ಇದೆ.

ಈ ಪುಣ್ಯ ಕ್ಷೇತ್ರ ಇರುವುದು ದಕ್ಷಿಣ ಭಾರತದ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಚೆನ್ನೈನಲ್ಲಿರುವ ತಿರುವಿಂದಂಡೈನಲ್ಲಿರುವ ನಿತ್ಯಾಕಲೈಯ ಪೆರುಮಾಳ್ ದೇವಾಲಯ. ಧರ್ಮಸಂಸ್ಥಾಪಕ ಶ್ರೀ ಮಹಾವಿಷ್ಣು ಸಮರ್ಪಿತವಾದ ದೇವಾಲಯವಿದು. ಈ ದೇವಾಲಯದಲ್ಲಿ ವಿವಾಹ ಭಾಗ್ಯ ವಿಳಂಬವಾಗಿರುವ ಮಂದಿ ಇಲ್ಲಿ ಬಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರೆ ವಿವಾಹ ಭಾಗ್ಯ ಫಲ ಸಿಗುತ್ತದೆ. ಇಂತಹದ್ದೊಂದು ನಂಬಿಕೆ ಇರುವ ಪುಣ್ಯ ಕ್ಷೇತ್ರವಿದು.

ಹಿಂದೂ ಸಾಹಿತ್ಯದಲ್ಲಿ, ಶ್ರೀ ವಿಷ್ಣುವಿಗೆ ಅರ್ಪಿತವಾದ 108 ಪವಿತ್ರ ದೇವಾಲಯಗಳಲ್ಲಿ ಒಂದಾಗಿದ್ದು ಸುಮಾರು 6 ರಿಂದ 9 ನೇ ಶತಮಾನದ ಮಧ್ಯ ಕಾಲದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಇದರ ಇನ್ನೊಂದು ವಿಶೇಷವೇನೆಂದರೆ ಒಂದು ಗ್ರಾನೈಟ್ ಗೋಡೆಯ ದೇವಾಲಯದ ಸುತ್ತಲೂ ಅದರ ಎಲ್ಲಾ ದೇವಾಲಯಗಳನ್ನು ಸುತ್ತವರೆದಿದ್ದಾರೆ. ಈ ದೇವಾಲಯವನ್ನು ತೆಂಕಲೈ ಪದ್ದತಿಯಲ್ಲಿ ಆರಾಧನೆಯನ್ನು ಅನುಸರಿಸುತ್ತಿದ್ದಾರೆ.

ಈ ದೇವಸ್ಥಾನದಲ್ಲಿ ಕಾರಣಾಂತರಗಳಿಂದ ವಿವಾಹ ಭಾಗ್ಯ ವಿಳಂಬವಾಗಿರುವ ಮಂದಿ ಇಲ್ಲಿ ಬಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರೆ ವಿವಾಹ ಭಾಗ್ಯ ಒದಗಿ ಬಂದಿರುವುದು. ಇಲ್ಲಿನ ಕ್ಷೇತ್ರಕ್ಕೆ ರಾಜ್ಯದೆಲ್ಲೆಡೆಯಿಂದಲೂ ಭಕ್ತರು ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ. ಈ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಅನ್ನ ಸಂತರ್ಪಣೆಯು ಅನುದಿನವೂ ನಡೆಯುತ್ತಿದ್ದು, ಕ್ಷೇತ್ರದಲ್ಲಿ ನಾನಾ ಬಗೆಯ ಸೇವೆಗಳು ಭಕ್ತರ ಕೋರಿಕೆಯಂತೆ ಸದಾ ಕಾಲ ನಡೆಯುತ್ತಿವೆ.

Leave a Reply

Your email address will not be published. Required fields are marked *