ನಾವು ಅಡುಗೆಯಲ್ಲಿ ಪ್ರತಿನಿತ್ಯ ಬೇರೆಬೇರೆ ರೀತಿಯ ಕಾಳುಗಳನ್ನೆಲ್ಲ ಬಳಸುತ್ತಿವೆ ಅಲ್ವಾ ಇವಾಗಂತೂ ಅವರೇ ಕಾಳು ಸೀಸನ್ ಎಲ್ಲಿ ನೋಡಿದರೂ ಅವರೇ ಕಾಳು ಇರುತ್ತದೆ ಹಾಗೆ ಬೇರೆ ಬೇರೆ ತರಹದ ಅವರೆಕಾಳುಗಳು ಎಲ್ಲ ಮಾಡುತ್ತಾರೆ ಅವರೆಕಾಳು ಎಷ್ಟು ರುಚಿನೂ ನಮ್ಮ ಆರೋಗ್ಯಕ್ಕೆ ಕೂಡ ಅಷ್ಟೇ ಒಳ್ಳೆಯದು. ಈ ಅವರೆಕಾಳನ್ನು ನಾವು ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ಯಾವ ಯಾವ ರೀತಿಯ ಪ್ರಯೋಜನಗಳು ಸಿಗುತ್ತವೆ.

ಅವರೆಕಾಳು ವಿಟಮಿನ್ ಬಿಯಿಂದ ಸಮೃದ್ಧವಾಗಿದ್ದು, ಇದು ದೇಹದ ಅಂಗಾಂಶಗಳಿಗೆ ಬೇಕಾಗಿರುವಂತಹ ಶಕ್ತಿ ನೀಡುವುದು. ಅವರೆ ಕಾಳು ದೇಹಕ್ಕೆ ಅಗತ್ಯವಿರುವಂತಹ ಶಕ್ತಿ ಒದಗಿಸುವುದು. ಮೆದುಳು ಮತ್ತು ನರಕೋಶಗಳನ್ನು ಸರಿಯಾಗಿಡಲು ಇದು ತುಂಬಾ ಸಹಕಾರಿ.ಇದರಲ್ಲಿ ನಮಗೆ ಬೇರೆ ಬೇರೆ ರೀತಿಯ ಪೋಷಕಾಂಶಗಳು ಖನಿಜಾಂಶಗಳು ಎಲ್ಲವೂ ಕೂಡ ಸಿಗುತ್ತವೆ ಹಾಗಾದರೆ ನಮ್ಮ ಆರೋಗ್ಯಕ್ಕೆ ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಅವರೇ ಕಾಳು ಹೇಗೆ ಸಹಾಯ ಮಾಡುತ್ತದೆ ಇವತ್ತಿನ ಮಾಹಿತಿಯಲ್ಲಿ ನೋಡೋಣ.

ಈ ಮಾಹಿತಿಯನ್ನು ಮಿಸ್ ಮಾಡದೆ ಕೊನೆಯವರೆಗೂ ಓದಿ. ಅವರೆಕಾಳಿನಲ್ಲಿ ವಿಟಮಿನ್ ಬಿ ನಮಗೆ ಹೇರಳವಾಗಿ ಸಿಗುತ್ತದೆ ಇದರಿಂದ ನಮ್ಮ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ ನ್ಯಾಚುರಲ್ ಎನರ್ಜಿ ಬೂಸ್ಟರ್ ಅಂತ ಹೇಳಬಹುದು ಹಾಗೆ ನಮ್ಮ ಮೆದುಳು ನರಮಂಡಲ ಆರೋಗ್ಯಕ್ಕೆ ಕೂಡ ತುಂಬಾನೇ ಒಳ್ಳೆಯದು ಅವರೆಕಾಳು. ನಾವು ಈ ಸೀಸನ್ ನಲ್ಲಿ ಅವರೆಕಾಳನ್ನು ಬಳಸುವುದರಿಂದ ನಮ್ಮ ಮೆದುಳು ಆರೋಗ್ಯವಂತವಾಗಿ ಇರುವುದಕ್ಕೆ ಸಹಾಯಮಾಡುತ್ತದೆ ಹಾಗೆ ನರಮಂಡಲ ಚುರುಕಾಗಿರುವುದಕ್ಕೆ ಕೂಡ ಇದು ಸಹಾಯಮಾಡುತ್ತದೆ.

ಇನ್ನು ನಿದ್ರಾಹೀನತೆ ಸಮಸ್ಯೆ ಇರುವವರಿಗೆ ಕೂಡ ತುಂಬಾನೇ ಒಳ್ಳೆಯದು ಅವರೆಕಾಳು ಅವರೆಕಾಳಿನಲ್ಲಿ ನಾವು ಯಾವುದೇ ರೀತಿ ಅಡುಗೆಗಳಲ್ಲಾದರೂ ಬಳಸಬಹುದು ಇದರಲ್ಲಿ ಇರುವಂತಹ ಮ್ಯಾಗ್ನಿಷಿಯಂ ಅಂಶ ನಿದ್ರಾಹೀನತೆ ಸಮಸ್ಯೆ ಇದ್ದರೆ ಅದನ್ನು ದೂರ ಇಡುವುದಕ್ಕಿಂತ ಸಹಾಯ ಮಾಡುತ್ತದೆ. 2 ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ಕೂಡ ಅವರೇ ಕಾಳು ತುಂಬಾನೇ ಸಹಾಯಮಾಡುತ್ತದೆ ನಮ್ಮ ದೇಹದಲ್ಲಿ ರಕ್ತ ಸಂಚಾರವಾಗಿ ಆಗುವುದಕ್ಕೆ ಕೂಡ ಈ ಅವರೆಕಾಳು ತುಂಬಾನೇ ಸಹಾಯಮಾಡುತ್ತದೆ ಈ ಅವರೇ ಕಾಳಿನಲ್ಲಿ ಕ್ಯಾಲ್ಸಿಯಂ ಅಂಶ ಕೂಡ ಹೇರಳವಾಗಿ ಸಿಗುವುದರಿಂದ ನಮ್ಮ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಅವರೆ ಕಾಳಿನಲ್ಲಿ ಇರುವಂತಹ ಪೋಷಕಾಂಶಗಳು ಮೆದುಳಿಗೆ ತುಂಬಾ ಒಳ್ಳೆಯದು. ಇದರಲ್ಲಿ ಇರುವ ಮೆಗ್ನಿಶಿಯಂ ಅಂಶವು ಮನಸ್ಥಿತಿ ಸುಧಾರಣೆ ಮಾಡುವುದು. ಮೆಗ್ನಿಶಿಯಂ ನಿದ್ರಾಹೀನತೆಯನ್ನು ತಗ್ಗಿಸುವುದು. ಇದನ್ನು ಸೇವನೆ ಮಾಡಿದರೆ ಅದರಿಂದ ರಾತ್ರಿ ವೇಳೆ ಒಳ್ಳೆಯ ನಿದ್ರೆಯು ಬರುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ. ಮಕ್ಕಳಿಗೆ ನಾವು ಅವರೆಕಾಳಿನಲ್ಲಿ ಮಾಡಿರುವಂತಹ ಅಡುಗೆಗಳನ್ನು ಕೊಡುವುದರಿಂದ ಶ್ವಾಸಕೋಶ ಸಂಬಂಧಿಸಿದವರು ಇರುತ್ತವೆ ಉಸಿರಾಟ ಸಂಬಂಧಿಸಿದಗಳು ಉಸಿರಾಟ ತುಂಬಾನೇ ಕಷ್ಟ ಆಗುವುದು ಇತರವೆಲ್ಲ ಆಗುತ್ತಾ ಇರುತ್ತದೆ ಅಂತಹವರಿಗೆ ಕೂಡ ಅವರೇ ಕಾಳು ತುಂಬಾನೇ ಒಳ್ಳೆಯದು.

ಇದರಲ್ಲಿ ಕಬ್ಬಿಣ ಅಂಶ ಹೇರಳವಾಗಿ ಸಿಗುವುದರಿಂದ ನಮ್ಮ ದೇಹಕ್ಕೆ ಸ್ವಾಸಕೋಶಕ್ಕೆ ಆಮ್ಲಜನಕ ಪೂರೈಕೆ ಕರೆಕ್ಟಾಗಿ ಆಗುತ್ತದೆ ಇದರಿಂದ ಉಸಿರಾಟ ಸರಾಗವಾಗಿ ಆಗುವುದಕ್ಕೆ ತುಂಬಾನೇ ಸಹಾಯವಾಗುತ್ತದೆ ಇನ್ನು ಜೀರ್ಣಕ್ರಿಯೆಗೆ ಕೂಡ ತುಂಬಾನೇ ಒಳ್ಳೆಯದು. ಇದರಲ್ಲಿ ಫೈಬರ್ ಹೇರಳವಾಗಿ ಇರುತ್ತದೆ. ನಾರಿನ ಅಂಶ ಜಾಸ್ತಿ ಇರುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಅಷ್ಟೇ ಅಲ್ಲದೆ ನಮ್ಮ ಶ್ವಾಸಕೋಶಕ್ಕೆ ಸಂಬಂಧಿಸಿದಂತಹ ಎಲ್ಲ ಸಕಲ ಕಾರ್ಯಗಳನ್ನು ಅಭಿವೃದ್ಧಿ ಪಡಿಸುತ್ತದೆ

Leave a Reply

Your email address will not be published. Required fields are marked *