ಕೆಲವೊಮ್ಮೆ ಅದೃಷ್ಟ ಹಾಗು ಅವಕಾಶಗಳು ಹೇಗೆ ಬರುತ್ತವೆ ಅನ್ನೋದು ಯಾರಿಗೂ ತಿಳಿದಿಲ್ಲ ಒಮ್ಮೆ ಆ ಅದೃಷ್ಟ ಎಷ್ಟೇ ಕಷ್ಟಪಟ್ಟರು ಸಿಗುವುದಿಲ್ಲ ಆದರೂ ಇಲ್ಲೊಬ್ಬ ಮಹಿಳೆಯಗೆ ಅದೃಷ್ಟ ಅನ್ನೋದು ಒಂದು ಚುನಾವಣೆಯಲ್ಲಿ ಬಂದಿದೆ, ಮೊನ್ನೆಯಷ್ಟೇ ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ಬಂದಿದ್ದು ಅದರಲ್ಲಿ ಬಿಜೆಪಿ ಅಭ್ಯರ್ಥಿ ಆಗಿದ್ದ ಚಂದನಾ ಬೌರಿ ತನ್ನ ಎದುರಾಳಿ ಕೋಟಿಯ ಒಡೆಯನನ್ನು ಸೋಲಿಸಿ ತನ್ನ ಜಯ ಸಾದಿಸಿದ್ದಾಳೆ, ಆದರೆ ಎಲ್ಲ ಸ್ಪರ್ದಿಯಂತೆ ಈ ಅಭ್ಯರ್ಥಿ ಆಗಿದ್ದರೆ ಇಷ್ಟೊಂದು ಸುದ್ದಿ ಆಗುತ್ತಿರಲಿಲ್ಲ ಯಾಕೆ ಅಂದರೆ ಈ ಚಂದನಾ ಬೌರಿ ಹಿನ್ನೆಲೆ ಮತ್ತು ಆಕೆಯ ಬಡತನ ಹಾಗು ಒಬ್ಬ ಸಾಮಾನ್ಯ ಮಹಿಳೆಯಾಗಿ ಗೆದ್ದಿರುವ ಕಾರಣ ಇಂದು ಇಷ್ಟೊಂದು ಸುದ್ದಿಯಾಗಿದ್ದಾರೆ.

ಇನ್ನು ಈ ಚಂದನಾ ಬೌರಿ ಪಡೆದಿರುವ ಮತಗಳು 91,648 ಪಡೆದು ತಮ್ಮ ಎದುರಾಳಿ ಸಂತೋಷ ಕುಮಾರ್ ಮೊಂಡಾಲ್ ಅವರ ವಿರುದ್ಧ 4,145 ಮತಗಳ ಅಂತರದಿಂದ ತಮ್ಮ ಜಯ ಸಾಧಿಸಿದ್ದಾರೆ.

ಈ ಚಂದನಾ ಬೌರಿ ಮನೆಗೆಲಸ ಮಾಡುತ್ತಾ ತಮ್ಮ ಮೂರೂ ಹೊತ್ತಿನ ಊಟ ಮಾಡುತಿದ್ದರು ಮತ್ತು ಈಕೆಯ ಗಂಡ ದಿನಗೂಲಿ ಕೆಲಸ ಮಾಡುವ ಒಬ್ಬ ಬಡ ಕಾರ್ಮಿಕನಾಗಿದ್ದಾನೆ ಇನ್ನು ಬಾನ್ಕುರು ಜಿಲ್ಲೆಯ ಸಾಲ್ ತೋರ ಎಸ್​ಸಿ ಮೀಸಲು ಕ್ಷೇತ್ರಕ್ಕೆ ಚಂದನಾ ಬೌರಿಯನ್ನು ಬಿಜೆಪಿ ಕಣಕ್ಕಿಳಿಸಿತ್ತು ಅದು ಒಬ್ಬ ಕೋಟಿ ಒಡೆಯನ ವಿರುದ್ಧ.

ಚಂದನಾ ಬೌರಿ 10 ನೇ ತರಗತಿ ಪಾಸ್ ಆಗಿದ್ದು ಅವರ ದಿನದ ಆದಾಯ ಕೇವಲ ₹400 ಮಾತ್ರ. ಅವರ ಬ್ಯಾಂಕ್​ ಖಾತೆಯಲ್ಲಿ 31,985 ರೂ ಹಣವಿರುವುದು ಬಿಟ್ಟರೆ ಮೂರು ಮೇಕೆ, ತಂದೆಯಿಂದ ಬಳುವಳಿಯಾಗಿ ಬಂದ 3 ಹಸು, ಒಂದು ಮಣ್ಣಿನ ಮನೆಯಷ್ಟೇ ಚಂದನಾ ಬೌರಿಯವರ ಆಸ್ತಿ.

ಇನ್ನು ಚಂದನಾ ಬೌರಿ ಅವರ ಒಟ್ಟು ಅಸ್ತಿ ಅಂದರೆ ತಮ್ಮ ಬ್ಯಾಂಕ್ ಖಾತೆಯಲ್ಲಿ 31,985 ರೂ ಹಣ ಹಾಗು ಮೂರೂ ಅಪ್ಪ ಕೊಟ್ಟ ಮೇಕೆ ಹಾಗು ದಿನದ ಆದಾಯ 400 ಇಷ್ಟೇ ಇವರ ಒಟ್ಟು ಅಸ್ತಿ ಮತ್ತು ಗಂಡ ಒಬ್ಬ ದಿನಗೂಲಿ ಕಾರ್ಮಿಕ. ಇಂತಹ ಮಹಿಳೆ ಇಂದು ಗೆದ್ದು ಒಬ್ಬ ಶಾಸಕಿ ಆಗಿದ್ದಾಳೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *