ಮನೇಲಿ ಯಾವುದೇ ಅಡುಗೆ ಪದಾರ್ಥಗಳನ್ನು ಮಾಡಬೇಕಾದರೆ ಅದಕ್ಕೆ ಬೇಕಾಗಿರುವುದು ಬಹಳ ಮುಖ್ಯವಾದ ಮಸಾಲ ಪದಾರ್ಥಗಳು. ಮಸಾಲ ಪದಾರ್ಥಗಳು ಅದ್ಭುತವಾಗಿದ್ದರೆ ನಮ್ಮಅಡಿಗೆ
ಇನ್ನು ರುಚಿಯಾಗುತ್ತದೆ. ಇವತ್ತಿಗೆ ಮಾರುಕಟ್ಟೆಯಲ್ಲಿ ಹಲವಾರು ಮಸಾಲ ಕಂಪನಿಗಳು ಇದೆ.ಅದರಲ್ಲಿ ತೇಜು ಮಸಾಲ ಎಂಬುದು ಒಂದು. ಇದು ನಮ್ಮ ಕನ್ನಡಿಗರ ಮಸಾಲ ಕಂಪನಿ ಎಂಬುದು ಕನ್ನಡಿಗರಿಗೆ ಹೆಮ್ಮೆ. ತೇಜು ಮಸಾಲ ಇಂದು ಮಾರುಕಟ್ಟೆಯಲ್ಲಿ ತುಂಬಾನೇ ಹೆಸರುವಾಸಿಯಾಗಿದೆ. ಕಂಪನಿಯನ್ನು 1999 ರಲ್ಲಿ ಶ್ರೀ ಎ ಎಸ್ ಜಯರಾಮ್ ಮತ್ತು ಎಂಆರ್ ವಿ ಸುಬ್ರಮಣ್ಯ ಅವರು ಸ್ಥಾಪಿಸಿದರು, ಇದು ಜೆ ಎಸ್ ಫಾಸ್ಟ್ ಫುಡ್ ಹೆಸರಿನಲ್ಲಿ ತೇಜು ಬ್ರ್ಯಾಂಡ್ ಆಗಿದೆ, ಇದು ಕರ್ನಾಟಕ ಮತ್ತು ದಕ್ಷಿಣ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ಒಂದಾಗಿದೆ.

2009 ರಲ್ಲಿ ಕಂಪನಿಯ ಹೆಸರನ್ನು J S ಫಾಸ್ಟ್ ಫುಡ್‌ನಿಂದ J S MASALA ಕಂಪನಿ ಎಂದು ಬದಲಾಯಿಸಲಾಯಿತು. ಜಯರಾಮ್ ಅವರು ಸುಮಾರು 20 ವರ್ಷಗಳ ಕಾಲ ಹಿಂದೆ ಒಂದು ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಅಂದಿನಿಂದಲೂ ಏನನ್ನಾದರೂ ಮಾಡಬೇಕೆಂಬುದು ಛಲ ಇವರಿಗೆ ಇತ್ತು. ಇವರಿಬ್ಬರ ಸ್ನೇಹ ತುಂಬಾನೇ ಗಾಢವಾದದ್ದು ಅಕ್ಕ ಪಕ್ಕದ ಮನೆಯವರಾಗಿದ್ದ ಇವರು ಇಬ್ಬರು ಸೇರಿ ಒಂದು ಕಬಾಬ್ ಮಸಾಲ ಮಾರುಕಟ್ಟೆಗೆ ತರೋಣ ಎಂದು ಯೋಚನೆ ಮಾಡಿದರು. ಅಂದು ಕೇವಲ 300 ರೂಪಾಯಿಯಿಂದ ಶುರು ಮಾಡಿದ ಈ ತೇಜು ಮಸಾಲ ಕಂಪನಿ ಇಂದು 130 ಕೋಟಿ ರೂಪಾಯಿಗಳನ್ನು ಮಾಡುತ್ತದೆ. ಇದು ಅಂದಿನ ಕಾಲದಲ್ಲಿ ಮಾರುಕಟ್ಟೆಗೆ ಬಂದ ಮೊದಲ ಚಿಕನ್ ಮಸಾಲ ಇದಾಗಿದೆ. ಅವಗಿನ ಜನ ಇವರಿಗೆ ನೀವು ಏನು ಮಾಡುತ್ತಿದ್ದೀರಿ ನಿಮ್ಮ ಕೈಯಿಂದ ಇದು ಆಗುವುದಿಲ್ಲ. ಇದರಿಂದ ನಿಮಗೆ ತುಂಬಾ ನಷ್ಟವಾಗುತ್ತದೆ ಎಂದು ಹೀಯಾಳಿಸಿದ್ದರಂತೆ.ಜಯರಾಮ್ ಹೇಳೋ ಪ್ರಕಾರಇವರು ಕಾಪಾಡಿಕೊಳ್ಳುವ ಸ್ವಚ್ಛತೆಯೇ ಇವರನ್ನು ಇಲ್ಲಿವರೆಗೆ ತಂದಿದೆ ಎಂದು ಹೇಳುತ್ತಾರೆ. ಇವರು ಸುಮಾರು 10ಕ್ಕೂ ಹೆಚ್ಚು ಕೆ ರಾಜ್ಯಗಳಲ್ಲಿ ಸರಬರಾಜು ಹೊಂದಿದ್ದಾರೆ.

ಇವರ ಕಂಪನಿಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಅವಕಾಶವನ್ನು ಒದಗಿಸಿಕೊಟ್ಟಿದ್ದಾರಂತೆ ಅವರಿಗೆ ಯಾವುದೇ ತರಹದ ತೊಂದರೆಗಳು ಎದುರಾದರೆ ಅವರನ್ನು ಇವರೇ ನೋಡಿಕೊಳ್ಳುತ್ತಾರೆ ಅಂತೆ. ಅಷ್ಟರ ಮಟ್ಟಿಗೆ ಇವರು ಉದ್ಯೋಗಿಗಳ ಮೇಲೆ ಕಾಳಜಿ ವಹಿಸುತ್ತಾರಂತೆ. ಇನ್ನು ಬಡ ಕುಟುಂಬದ ಉದ್ಯೋಗಿಗಳ ಮಕ್ಕಳ ಸಂಪೂರ್ಣ ಖರ್ಚನ್ನು ಕೂಡ ಇವರೇ ವಹಿಸಿಕೊಳ್ಳುತ್ತಾರೆ ಅಂತೆ. ಇವರ ಮಕ್ಕಳು ಓದು ಅಭ್ಯಾಸ ಸಂಪೂರ್ಣ ಜವಾಬ್ದಾರಿಯನ್ನು ಇವರು ಹೊತ್ತುಕೊಂಡಿದ್ದಾರಂತೆ ಇನ್ನೂ ಸರ್ಕಾರದ ವತಿಯಿಂದ ಇವರಿಗೆ ಹಲವಾರು ಪ್ರಶಸ್ತಿಗಳು ಕೂಡ ದೊರಕಿದಾವೆ. ಸಿಂಗಪುರ್ ನಿಂದ ಬೆಸ್ಟ್ ಫುಡ್ ಅವಾರ್ಡ್ ಕೂಡ ಇವರಿಗೆ ದೊರಕಿದೆ. ನಮ್ಮ ಕನ್ನಡದ ಹೆಮ್ಮೆಯನ್ನು ಸಿಂಗಾಪುರ್ ನಲ್ಲಿ ಕೂಡ ಎತ್ತಿ ಹಿಡಿದಿದ್ದಾರೆ.ಇನ್ನು ಮುಂದಿನ ಬರುವ ಪೀಳಿಗೆಗಳಿಗೆ ಇವರು ಮಾದರಿಯಾಗಬೇಕು ಇನ್ನು ಹಲವಾರು ಯಶಸ್ಸಿನ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಇವರ ಮನಸ್ಸಿನಲ್ಲಿ ಇದೆಯಂತೆ ಅದು ನೆರವೇರಲಿ ಎಂದು ಬೇಡಿಕೊಳ್ಳೋಣ.

Leave a Reply

Your email address will not be published. Required fields are marked *