ಮಕ್ಕಳು ದೇವರು ಎಂಬುದಕ್ಕೆ ಈ ಘಟನೆ ಒಂದು ಸಾಕ್ಷಿಯಾಗಿದೆ. ಈ ಹುಡುಗ ಒಂದು ರೈಲನ್ನು ತಡೆಯದೆ ಇದ್ದಲ್ಲಿ ಪ್ರಪಂಚದಲ್ಲೇ ಅತಿ ದೊಡ್ಡ ದುರಂತ ನಮ್ಮ ಕರ್ನಾಟಕದಲ್ಲಿ ಸಂಭವಿಸುತ್ತಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ 850 ಪ್ರಯಾಣಿಕರ ಪ್ರಾಣ ನಿಮಿಷದಲ್ಲಿ ಹಾರಿ ಹೋಗುತ್ತಿತ್ತು. ಈ ಘಟನೆ ನಡೆದಿರೋದು ಯಾವುದೋ ಬೇರೆ ರಾಜ್ಯದಲ್ಲಿ ಅಲ್ಲ ಬೇರೆ ದೇಶದಲ್ಲಿ ಇಲ್ಲ. ಈ ಘಟನೆ ಸಂಭವಿಸಿರುವುದು ನಮ್ಮ ಕರ್ನಾಟಕದ ದಾವಣಗೆರೆಯ ಅವರ್ಗೆರೆ ಹಳ್ಳಿಯಲ್ಲಿ. ದಾವಣಗೆರೆಯಿಂದ ನಾಲ್ಕು ಕಿಲೋ ಮೀಟರ್ ಪ್ರಯಾಣ ಮಾಡಿದರೆ ಹಳ್ಳಿ ಸಿಗುತ್ತೆ. ಈ 10 ವರ್ಷದ ಬಾಲಕ ಇರಲಿಲ್ಲದಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹೆ ಏನು ಮಾಡೋಕೆ ಸಾಧ್ಯವಿಲ್ಲ.

ಮಾರ್ಚ್ ಹದಿನೈದನೇ ತಾರೀಖು ಸಿದ್ದೇಶ್ ಮಂಜುನಾಥ್ ಎಂಬ 10 ವರ್ಷದ ಬಾಲಕ 850 ರೈಲು ಪ್ರಯಾಣಿಕರನ್ನು ಕಾಪಾಡಿ ದೇವರಾಗಿದ್ದಾನೆ. ಅಂದಿನಿಂದ ಇಲ್ಲಿಯವರೆಗೂ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಆರಾಧಿಸುತ್ತಾ ಬರುತ್ತಿದ್ದಾರೆ. ಮಾರ್ಚ್ ಹದಿನೈದನೇ ತಾರೀಖು ಚಿತ್ರದುರ್ಗ ಪ್ಯಾಸೆಂಜರ್ ಎಕ್ಸ್‌ಪ್ರೆಸ್ ರೈಲು ಹರಿಹರ ನಗರಕ್ಕೆ ಬರುತ್ತೇ ಕರ್ನಾಟಕದಲ್ಲಿ ಅತಿ ಉದ್ದವಾದ ರೈಲು ಮತ್ತು ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವ ರೈಲು ಅಂದರೆ ಅದು ಹರಿಯರ ಎಕ್ಸ್ಪ್ರೆಸ್ ಪ್ಯಾಸೆಂಜರ್ ರೈಲು ಹರಿಹರ ನಗರದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಟ ರೈಲು 14 ಕಿಲೋಮೀಟರ್ ಕ್ರಮಿಸಿ ದಾವಣಗೆರೆಗೆ ಬರುತ್ತೆ.

ದಾವಣಗೆರೆಯಿಂದ ಅತಿಹೆಚ್ಚು ಪ್ರಯಾಣಿಕರು ಈ ರೈಲಿನಲ್ಲಿ ಓಡಾಡುತ್ತಾರೆ. ಹರಿಹರ ನಗರ ಮತ್ತು ದಾವಣಗೆರೆಯಿಂದ ಒಟ್ಟು ಪ್ರಯಾಣಿಕರು ಈ ರೈಲಿನಲ್ಲಿ ಇದ್ದದ್ದು 850 ಎಂದು ಹೇಳಲಾಗಿದೆ. ಅವರಲ್ಲಿ ನೆಲೆಸಿರುವ ಸಿದ್ದೇಶ್ ಮಂಜುನಾಥ್ ಬೆಳಗ್ಗೆ ಮನೆಯಲ್ಲಿ ತಿಂಡಿ ತಿಂದು ತನ್ನ ತಂದೆ ಅಂಗಡಿಗೆ ಹೊರಡಲು ಸಿದ್ಧನಾಗುತ್ತಾನೆ. ಸಿದ್ದೇಶ್ ಮಂಜುನಾಥ್ ಅವರ ತಂದೆ ಒಂದು ಸಣ್ಣ ಟೀ ಅಂಗಡಿ ಇಟ್ಟುಕೊಂಡಿರುತ್ತಾರೆ.ತನ್ನ ತಂದೆಯ ಟೀ ಅಂಗಡಿಗೆ ಮಂಜುನಾಥ್ ಹೋಗಬೇಕು. ಅಂದರೆ ರೈಲು ಹಳಿ ದಾಟಿ ಹೋಗಬೇಕು. 10 ವರ್ಷದ ಸಿದ್ದೇಶ್ ಬಾಲಕನಿಗೆ ರೈಲಿನ ಹಳಿ ದಾಟಿ ಹೋಗೋದು ಏನು ಕಷ್ಟ ಅಲ್ಲ.

ಸಣ್ಣ ವಯಸ್ಸಿನಿಂದಲೇ ಪ್ರತಿದಿನ ರೈಲಿನ ಹಳಿಯನ್ನು ದಾಟಿ ಹೋಗುವ ಅಭ್ಯಾಸ ಇರುತ್ತೆ. ಈ ಬಾಲಕ ರೈಲಿನ ಬಗ್ಗೆ ಎಷ್ಟು ಪರಿಣಿತನಾಗಿರುತ್ತಾನೆ ಅಂದರೆ ಕಣ್ಣು ಮುಚ್ಚಿಕೊಂಡು ರೈಲಿನ ಶಬ್ದವನ್ನು ಕೇಳಿ ರೈಲಿನ ಹೆಸರು ಮತ್ತು ರೈಲು ಯಾವ ಕಡೆ ಹೋಗುತ್ತಿದೆ ಎಂಬುದನ್ನು ಹೇಳುತ್ತಾನೆ. ಮಾರ್ಚ್ ಹದಿನೈದನೇ ತಾರೀಖು ರೈಲಿನ ಹಳಿ ಹತ್ತಿರ ಬಂದು ನಿಲ್ಲುತ್ತಾನೆ. ರೈಲು ಬಾಲಕನ ಕಣ್ಣಮುಂದೆ ಪಾಸ್ ಆಗುತ್ತೆ ಆ ರೈಲಿನ ಹಳಿಯಲ್ಲಿ ಒಂದು ಶಬ್ಧ ಕೇಳಿ ಬರುತ್ತೆ ಈ ರೀತಿ ಒಂದು ಶಬ್ದ ನಾನು ಏಂದು ಕೇಳಿಲ್ಲ ಎಂದು ಯೋಚನೆ ಮಾಡಿ ರೈಲಿನ ಹಳಿಯ ಮೇಲೆ 100 ಮೀಟರ್ ನಡೆದುಕೊಂಡು ಹೋಗುತ್ತಾನೆ.

ರೈಲಿನ ಹಳಿ ಎರಡು ಅಡಿ ತನಕ ಮುರಿದುಕೊಂಡು ಹೋಗಿರುವುದು ಬೆಳಕಿಗೆ ಬರುತ್ತೆ. ಈಗ ತಾನೇ ಹೋದ ರೈಲು ನಂತರವೇ ಈ ಹಳಿ ಮುರಿದಿದೆ ಎಂದು ಬಾಲಕನಿಗೆ ಗೊತ್ತಾಗುತ್ತೆ ಕೇವಲ 20 ನಿಮಿಷಕ್ಕೆ ಹರಿಹಾರ ಚಿತ್ರದುರ್ಗ ರೈಲು ಇದೆ. ಹಳಿಯ ಮೇಲೆ ಬರುತ್ತೆ ಎಂದು ಗೊತ್ತಾಗಿ ತಕ್ಷಣ ಬಾಲಕ ತನ್ನ ತಂದೆ ಹತ್ತಿರ ಓಡಿ ಹೋಗಿ ಎಲ್ಲ ವಿಚಾರ ತಿಳಿಸುತ್ತಾನೆ. ಬಾಲಕನ ತಂದೆ ಅಂಗಡಿಯ ಅಕ್ಕಪಕ್ಕದಲ್ಲಿದ್ದ ಜನರನ್ನು ಕರೆದುಕೊಂಡು ರೈಲಿನ ಹಳಿ ಹತ್ತಿರ ಬಂದು ಪರಿಶೀಲನೆ ಮಾಡುತ್ತಾರೆ. ಇರುವುದು ಕಂಡುಬರುತ್ತೆ ರೈಲ್ವೆ ಸ್ಟೇಷನ್ಗೆ ಹೋಗಿ ಹೇಳಬೇಕು. ಅಂದರೆ ಒಂದು ಕಿಲೋಮೀಟರ್ ದೂರ ಇದೆ.

ಇನ್ನೇನು ರೈಲ್ವೆ ಸ್ಟೇಷನ್ಗೆ ಹೋಗಿ ವಿಚಾರ ಮುಟ್ಟಿಸೋಣ ಎನ್ನುವಷ್ಟರಲ್ಲಿ ಚಿತ್ರದುರ್ಗ ಎಕ್ಸ್‌ಪ್ರೆಸ್ ರೈಲು ಬಂದೇ ಬಿಡುತ್ತೆ ತಕ್ಷಣ ಬಾಲಕ ಒಂದು ಗಟ್ಟಿ ನಿರ್ಧಾರ ಮಾಡಿ ತಾನು ಹಾಕಿಕೊಂಡಿದ್ದ ಕೆಂಪು ಬಣ್ಣದ ಶರ್ಟ್ ಅನ್ನು ಬಿಚ್ಚಿ ಶರ್ಟ್ ತಿರುಗಿಸುತ್ತಾ ರೈಲಿನ ಹತ್ತಿರ ಓಡಿ ಹೋಗುತ್ತಾನೆ. ಇದನ್ನು ಗಮನಿಸಿದ ರೈಲು ಚಾಲಕ ತಕ್ಷಣ ಬ್ರೇಕ್ ಹಾಕಿ ರೈಲನ್ನು ನಿಲ್ಲಿಸುತ್ತಾನೆ. ರೈಲು ಚಾಲಕ ಮತ್ತು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಕೆಳಗಿಳಿದಿದ್ದಾರೆ. ಬಾಲಕ ಮತ್ತು ತನ್ನ ತಂದೆ ಯಾಕೆ ರೈಲನ್ನು ನಿಲ್ಲಿಸಿದ್ದೆವು ಎಂಬುದನ್ನು ಸ್ಪಷ್ಟವಾಗಿ ವಿವರಿಸುತ್ತಾರೆ. ಎಲ್ಲ ಪ್ರಯಾಣಿಕರು ಸೆಲ್ಯೂಟ್ ಮಾಡುತ್ತಾರೆ. ಬಾಲಕನಿಗೆ ಮಕ್ಕಳ ದಿನಾಚರಣೆಯ ದಿನ ಕರ್ನಾಟಕ ಸರ್ಕಾರ ಶೌರ್ಯ ಪ್ರಶಸ್ತಿಯನ್ನು ಕೊಡುತ್ತಾರೆ.

Leave a Reply

Your email address will not be published. Required fields are marked *