ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಬಿಎಂಟಿಸಿ ಯಲ್ಲಿ ಖಾಲಿ ಇರುವ ನಿರ್ವಹಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಪೂರ್ತಿ ವೀಕ್ಷಿಸಿ.ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನೇಮಕಾತಿ ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ಮೂವತೈದು ವರ್ಷ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ ಒಂದು ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮಾಜಿ ಸೈನಿಕ ಹಾಗೂ ಇಲಾಖಾ ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.ವೇತನ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂಪಾಯಿ 18,000 ರಿಂದ 26000 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.ಆಯ್ಕೆ ವಿಧಾನ, ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಲ್ಲಿ ಶೇಕಡಾ 75 ರಷ್ಟು ಅಂಕಗಳನ್ನು ಹಾಗೂ ಸದರಿ ಹುದ್ದೆಗೆ ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಗಳಿಸಿರುವ ಅಂಕಗಳಲ್ಲಿ ಶೇಕಡಾ ಇಪ್ಪತೈದು ರಷ್ಟು ಅಂಕಗಳನ್ನು ಸೇರಿಸಿ ಮೆರಿಟ್ ಆಧಾರದ ಮೇಲೆ.

ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನುಸಾರ ಒಂದಿಷ್ಟು ಅನುಪಾತದಲ್ಲಿ ಅಭ್ಯರ್ಥಿಗಳನ್ನು ಮೂಲ ದಾಖಲೆಗಳ ಪರಿಶೀಲನೆ ಹಾಗೂ ದೇಹದಾರ್ಢ್ಯತೆ ಪರಿಶೀಲನೆಗೆ ಕರೆಯಲಾಗುವುದು.ಪುರುಷ ಅಭ್ಯರ್ಥಿಗಳ ಎತ್ತರ 160 ಸೆಂಟಿಮೀಟರ್ ಮಹಿಳಾ ಅಭ್ಯರ್ಥಿಗಳ ಎತ್ತರ 150 ಸೆಂಟಿ ಮೀಟರ್ ನಿಗದಿಪಡಿಸಲಾಗಿದೆ.ಅರ್ಜಿ ಶುಲ್ಕ, ಸಾಮಾನ್ಯ ವರ್ಗ ಪ್ರವರ್ಗ, ಎರಡು ಎ, ಎರಡು ಬಿ, ಮೂರು ಎ, ಮೂರು ಬಿ ವರ್ಗದ ಅಭ್ಯರ್ಥಿಗಳು 750 ಎಸ್‌ಸಿ ಎಸ್‌ಟಿ ಪ್ರವರ್ಗ ಒಂದು ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳು ₹500 ಅರ್ಜಿ ಶುಲ್ಕ ಪಾವತಿಸಬೇಕು.ಶುಲ್ಕ ಪಾವತಿಸುವ ವಿಧಾನ ಆನ್‌ಲೈನ್ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಹುದ್ದೆ ಹೆಸರು ನಿರ್ವಾಹಕ ಹುದ್ದೆಗಳ ಸಂಖ್ಯೆ ಒಟ್ಟು 2500 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ.ಉದ್ಯೋಗ, ಸ್ಥಳ, ಬೆಂಗಳೂರು.ವಿದ್ಯಾರ್ಹತೆ, ಪಿಯುಸಿ ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಮೂರು ವರ್ಷಗಳ ಡಿಪ್ಲೋಮಾ ಮುಗಿದಿರಬೇಕು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ mybmtc.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಬೇಕಾಗಬಹುದು.BMTC ಖಾಲಿ ಹುದ್ದೆ 2024 ಅಧಿಸೂಚನೆಯ ಪ್ರಕಾರ ತಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

Leave a Reply

Your email address will not be published. Required fields are marked *