ಹತ್ತನೇ ತರಗತಿ ಹಾಗೂ ಪಿಯುಸಿ ಪಾಸಾಗಿರುವ ಅಭ್ಯರ್ಥಿಗಳಿಂದ ಆಡಳಿತ ತರಬೇತಿ ಸಂಸ್ಥೆ ಮೈಸೂರಿನಲ್ಲಿ ಅಗತ್ಯವಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಪೂರ್ತಿ ವೀಕ್ಷಿಸಿ. ಆಡಳಿತ ತರಬೇತಿ ಸಂಸ್ಥೆ ಮೈಸೂರು ನೇಮಕಾತಿ ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.

ವೇತನ, ಬೆರಳಚ್ಚುಗಾರರು ಹುದ್ದೆಗೆ ಮಾಸಿಕ ರೂಪಾಯಿ 21,400 ರಿಂದ 42,000 ಗ್ರೂಪ್ ಡಿ ಹುದ್ದೆಗೆ ಮಾಸಿಕ ರೂಪಾಯಿ ಹದಿನೈದು ಸಾವಿರದಿಂದ 20,900 ಐವತ್ತರ ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.ಆಯ್ಕೆ ವಿಧಾನ, ಬೆರಳಚ್ಚುಗಾರ ಹುದ್ದೆಗೆ ಅರ್ಹತಾದಾಯಕ ಪರೀಕ್ಷೆಗಳಲ್ಲಿ ಪಡೆದಿರುವ ಶೇಕಡವಾರು ಅಂಕಗಳ ಆಧಾರದ ಮೇಲೆ ಕೌಶಲ್ಯ ಪರೀಕ್ಷೆ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು.ಗ್ರೂಪ್ ಡಿ ಹುದ್ದೆಗೆ ಅರ್ಹತಾದಾಯಕ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಲಿಂಕ್ https://karnatakajobinfo.com/ati-mysore-recruitment-2024-apply-online-for-2-typist-group-d-posts/

ಹುದ್ದೆಯ ಹೆಸರು, ಬೆರಳಚ್ಚುಗಾರರು ಹಾಗೂ ಗ್ರೂಪ್ ಡಿ.ಹುದ್ದೆಗಳ ಸಂಖ್ಯೆ ಒಟ್ಟು ಎರಡು ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಅದರಲ್ಲಿ ಬೆರಳಚ್ಚುಗಾರರು ಹುದ್ದೆ ಗ್ರೂಪ್ ಡಿ ಹುದ್ದೆ ಖಾಲಿ ಇದೆ.ಉದ್ಯೋಗ, ಸ್ಥಳ, ಮೈಸೂರು. ವಿದ್ಯಾರ್ಹತೆ, ಬೆರಳಚ್ಚುಗಾರರು ಹುದ್ದೆಗೆ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ ಹಿರಿಯ ಬೆರಳಚ್ಚು ಪರೀಕ್ಷೆಯನ್ನು ಅಥವಾ ತತ್ಸಮಾನ ವಿದ್ಯಾರ್ಥಿಯನ್ನು ಅಥವಾ ಕನ್ನಡ ಬೆರಳಚ್ಚಿನೊಂದಿಗೆ ಡಿಪ್ಲೋಮ ಇನ್ ಕಮರ್ಷಿಯಲ್ ಪ್ರಾಕ್ಟಿಸ್ ಅಥವಾ ತತ್ಸಮಾನ ವಿದ್ಯಾರ್ಹತೆ ತೇರ್ಗಡೆಯಾಗಿರತಕ್ಕದ್ದು.

ಗ್ರೂಪ್ ಡಿ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯನ್ನು ತೇರ್ಗಡೆಯಾಗಿರತಕ್ಕದ್ದು. ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜನವರಿ 16, 202ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ 15, 2024 ಈ ಮೇಲ್ಗಡೆ ಕೊಟ್ಟಿರುವಂತಹ ಲಿಂಕನ್ನು ಓಪನ್ ಮಾಡಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದು ಆದರೆ ಏನು ಬೇಡಿ ಫೆಬ್ರವರಿ 15ರ ಒಳಗೆ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಆದನಂತರ ನಿಮಗೆ ಅರ್ಜಿಯನ್ನು ಹಾಕಲು ಆಗುವುದಿಲ್ಲ. ಈ ಮಾಹಿತಿಯನ್ನು ಉದ್ಯೋಗ ಹುಡುಕುವವರಿಗೆ ಶೇರ್ ಮಾಡಿ.

Leave a Reply

Your email address will not be published. Required fields are marked *