ನಮ್ಮ ಜಗತ್ತಿನಲ್ಲಿ ನಾವು ಸಾಕಷ್ಟು ಜನಗಳನ್ನು ನೋಡಿರುತ್ತೇವೆ ಕೆಲವೊಬ್ಬರಿಗೆ ಯಾವುದೇ ಒಂದು ಸೌಕರ್ಯ ಇಲ್ಲದಿದ್ದರೂ ಕೂಡ ತಮ್ಮ ಜೀವನದಲ್ಲಿ ಎಷ್ಟು ಯಶಸ್ಸನ್ನು ಕಾಣುತ್ತಾರೆ ಎಂಬುದಕ್ಕೆ ನಾವು ಹಲವಾರು ಸಾಕ್ಷಿಗಳನ್ನು ನೋಡಿದ್ದೇವೆ ಇವತ್ತಿನ ಮಾಹಿತಿ ಕೂಡ ಅದೇ ರೀತಿ ಆಗಿದೆ ತಮ್ಮ ತಂದೆ ಎಷ್ಟು ಕಷ್ಟ ಪಡುತ್ತಿದ್ದಾರೆ ಎಂಬುದು ತಮ್ಮ ಮಕ್ಕಳಿಗೆ ಅರ್ಥವಾದರೆ ಅಲ್ಲಿಗೆ ಜೀವನದಲ್ಲಿ ಏನನ್ನು ಮಾಡಬೇಕು ಎಂಬುದನ್ನು ಮಕ್ಕಳು ಅರಿವು ಮಾಡಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮಗಳಲ್ಲಿ ಸಾಕಷ್ಟು ಯಶೋಗಾಥೆಗಳ ಬಗ್ಗೆ ಓದಿರುತ್ತೇವೆ.

ಐಎಎಸ್ ಪರೀಕ್ಷೆ ಕ್ಲಿಯರ್ ಮಾಡುವುದೆಂದರೆ ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ಯುಪಿಎಸ್ಸಿ ಪಾಸ್ ಮಾಡಲು ಸಾಕಷ್ಟು ಪರಿಶ್ರಮ ಹಾಗೂ ಅವಿರತವಾದ ಓದಿನ ಅಗತ್ಯವಿರುತ್ತದೆ. ಕುಟುಂಬದ ಬೆಂಬಲ ಮತ್ತು ಆರ್ಥಿಕ ಭದ್ರತೆ ಇಲ್ಲದವರು ಈ ಪರೀಕ್ಷೆಯ ಬಗ್ಗೆ ಯೋಚಿಸುವುದಿಲ್ಲ. ಏಕೆಂದರೆ ಪುಸ್ತಕಗಳು ಮತ್ತು ಸಾಮಗ್ರಿಗಳಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ರಾಜಸ್ಥಾನದ ಬೀದಿ ಬದಿ ವ್ಯಾಪಾರಿಯೊಬ್ಬರ ಮಗನಾದ ದೀಪೇಶ್ ಕುಮಾರಿ ಇಂತಹ ಹಲವು ಅಡೆತಡೆಗಳನ್ನು ದಾಟಿಸಿ ಪರೀಕ್ಷೆಯಲ್ಲಿ 93 ನೇ ಶ್ರೇಯಾಂಕ ಮಾಡಿದ್ದಾರೆ.

ರಾಜಸ್ಥಾನದ ಭರತಪುರದ ಪ್ರದೇಶದವರಾದ ಗೋವಿಂದ ಅವರು ಕಳೆದ ಇಪ್ಪತೈದು ವರ್ಷಗಳಿಂದ ಬೀದಿಗಳಲ್ಲಿ ತಿಂಡಿಗಳನ್ನು ಸಣ್ಣ ಮಾರಾಟಗಾರರು ಮಾರಾಟ ಮಾಡುತ್ತಿದ್ದಾರೆ.ಅವರಿಗೆ ಐವರು ಮಕ್ಕಳಿದ್ದಾರೆ. ಕುಟುಂಬದ ಏಕೈಕ ಆಸರೆಯೆಂದರೆ ಅವರ ವ್ಯಾಪಾರ ಮಾತ್ರ. ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದಿದ್ದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಗೋವಿಂದ್ ಯಾವುದೇ ರಾಜಿ ಮಾಡಿಕೊಳ್ಳಲಿಲ್ಲ. ಹೌದು ಯಾವ ತಂದೇನೂ ಕೂಡ ತಮ್ಮ ಮಕ್ಕಳಿಗೆ ಎಷ್ಟು ಕಷ್ಟಗಳು ಬಂದರೂ ಕೂಡ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವುದನ್ನು ನಿಲ್ಲುಸುವುದಿಲ್ಲ.

ಎಷ್ಟೇ ಕಷ್ಟ ಆದರೂ ಕೂಡ ತಮ್ಮ ಮಕ್ಕಳನ್ನು ಒದಗಿಸಬೇಕು ಅವರ ದೊಡ್ಡ ವ್ಯಕ್ತಿಗಳನ್ನು ಮಾಡಬೇಕು ಎಂಬ ಅವರ ಆಸೆ ಯಾವಾಗಲೂ ಇರುತ್ತೆ. ಗೋವಿಂದ ಅವರ ಐದು ಮಕ್ಕಳಲ್ಲಿ ದೀಪೇಶ್ ಕುಮಾರಿ ಹಿರಿಯ ಮಗಳು. ಅವಳು ಬಾಲ್ಯದಿಂದಲೂ ತುಂಬಾ ಬುದ್ಧಿವಂತೆ ಮತ್ತು ಕ್ರಿಯಾಶೀಲ ವಿದ್ಯಾರ್ಥಿಯಾಗಿದ್ದರು. ತಮ್ಮ ಶಾಲೆಯಲ್ಲಿ ನಡೆಸಿದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಾವುದೇ ಒಂದು ಪ್ರಶಸ್ತಿ ಇಟ್ಟರೂ ಕೂಡ ಇವರಿಗೆ ಒಂದು ಪ್ರಶಸ್ತಿ ಬರುವುದು ಗ್ಯಾರಂಟಿ.

ಅಷ್ಟು ಓದುವುದರಲ್ಲಿ ಚುರುಕಾಗಿದ್ದರು ಮುಂದೆ ಇವರು ಆಫೀಸರಿಗೆ ಸೆಲ್ಯೂಟ್ ಹೊಡೆಯುವುದನ್ನು ನೋಡಿ ಅವರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಂಡಾಗ ಅವರಿಗೂ ಕೂಡ ಅದೇ ರೀತಿ ಆಗಬೇಕು ಎಂಬ ಆಸೆ ಹುಟ್ಟುತ್ತೆ ಅಂದಿನಿಂದ ಐಎಎಸ್ ಆಗಬೇಕು ಎಂಬ ಕನಸು ಹುಟ್ಟಿಕೊಳ್ಳುತ್ತದೆ ಎಷ್ಟೇ ಕಷ್ಟ ಬಂದರೂ ಕೂಡ ಯಾವುದೇ ಕಷ್ಟಕ್ಕುಬಕ್ಕದೆ ತಮ್ಮ ಗುರಿಯನ್ನು ಸಾಧಿಸಬೇಕು ಎಂಬ ಛಲ ಹೊಂದಿದ ದೀಪೇಶ್ ಕುಮಾರಿಎರಡು ಸಲ ಫೇಲ್ ಆದರೂ ಕೂಡ ಮೂರನೇ ಸಲಸಂದರ್ಶನದಲ್ಲಿ ಪಾಸಾಗಿ ಐಎಎಸ್ ಆಫೀಸರ್ ಆಗಿದ್ದಾರೆ.

Leave a Reply

Your email address will not be published. Required fields are marked *