ಜೀವನದಲ್ಲಿ ಎಷ್ಟು ಕಷ್ಟಗಳು ಎದರಾಗುತ್ತವೆ ಎಂದರೆ ಕೆಲವೊಮ್ಮೆ ಜೀವನದ ಮೇಲೆ ಜಿಗುಪ್ಸೆ ಬಂದುಬಿಡುತ್ತದೆ ಆದರೆ ಇವೆಲ್ಲವನ್ನು ಹಿಂದಿಕ್ಕಿ ಮುಂದೆ ಬರುವುದೇ ಜೀವನದ ಪಯಣ ಬುಡಕಟ್ಟು ಜನಾಂಗದ ಬಡ ಕುಟುಂಬದಿಂದ ಬಂದ ಒಬ್ಬ ಹೆಣ್ಣು ಮಗಳು ಐಎಎಸ್ ಅಧಿಕಾರಿ ಆಗುವುದು ಸಾಮಾನ್ಯದ ಮಾತಲ್ಲ. ಯುಪಿಎಸ್‌ಸಿ ಪರೀಕ್ಷಾ ಸಾಧಕರ ಬಗ್ಗೆ ಈಗಾಗಲೇ ನಿಮಗೆ ಹೇಳಿದ್ದೇವೆ ಇವತ್ತಿನ ಸಾಧಕಿ ಶ್ರೀ ಧನ್ಯ ಸುರೇಶ್ ಅವರು. ಅವರದ್ದು ಕೇವಲ ಯಶಸ್ಸಿನ ಕತೆಯಲ್ಲ. ಅವರ ಬದುಕೇ ಒಂದು ಹೋರಾಟ. ಶ್ರೀಧನ್ಯಾ ಆರ್ಥಿಕವಾಗಿ ತೀರಾ ಬಡ ಕುಟುಂಬದಿಂದ ಬಂದವರು. ಅವರ ತಂದೆ ಕೂಲಿ ಕೆಲಸ ಮಾಡುತ್ತಿದ್ದರು.

ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದರಿಂದ ಬಿಲ್ಲು ಮತ್ತು ಬಾಣಗಳನ್ನು ಮಾರಿ ಜೀವನ ನಡೆಸುತ್ತಿದ್ದರು. ಶ್ರೀಧನ್ಯಾ ಅವರ ಮನೆಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಸರ್ಕಾರದಿಂದ ನಿವೇಶನ ಪಡೆದರು. ಕುಟುಂಬಕ್ಕೆ ಮನೆ ಕಟ್ಟಲು ಸಾಧ್ಯವಾಗಿರಲಿಲ್ಲ.ಇಂತಹ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಶ್ರೀಧನ್ಯಾ ಸುರೇಶ್ 2018 ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. 410 ನೇ ರ‌್ಯಾಂಕ್ ಗಳಿಸುವ ಮೂಲಕ ಐಪಿಎಸ್ ಅಧಿಕಾರಿ ಆದರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಕೇರಳದ ಮೊದಲ ಬುಡಕಟ್ಟು ಯುವತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಅದು ವೀಕ್ಷಕರಿಗೆ ಕೆಲವೊಬ್ಬರಿಗೆ ಎಲ್ಲಾ ಸೌಕರ್ಯಗಳು ಇದ್ದರೂ ಕೂಡ ಓದುವುದಕ್ಕೆ ಹಿಂದೇಟು ಹಾಕುತ್ತಾರೆ ಇನ್ನು ಸ್ವಲ್ಪ ಜನ ನಮ್ಮ ಬಡ ಪರಿಸ್ಥಿತಿಯನ್ನು ನೋಡಿ ಹಗಲು ರಾತ್ರಿ ಎನ್ನದೆ ಬಹಳಷ್ಟು ಕಷ್ಟಪಟ್ಟು ಓದುತ್ತಾ ಇರುತ್ತಾರೆ ಅಂತವರೇ ಮುಂದಿನ ದಿನಗಳಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ. ಶ್ರೀ ಧನ್ಯ ಅವರಿಗೆ ಕೆಲವೊಮ್ಮೆ ಊಟಕ್ಕೂ ಕೂಡ ಹಣ ಇರುತ್ತಿರಲಿಲ್ಲ ಅಂತಹ ಕಡೂರ್ ಪರಿಸ್ಥಿತಿಯಲ್ಲಿ ಬೆಳೆದು ಬಂದಿರುವಂತಹ ವ್ಯಕ್ತಿ ಇವರು.ಶ್ರೀಧನ್ಯ ಅವರು ಯುಪಿಎಸ್‌ಸಿ ಪರೀಕ್ಷೆ ಬರೆಯುವ ಮುನ್ನ ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯಲ್ಲಿ ಗುಮಾಸ್ತರಾಗಿಯೂ ಕೆಲಸ ಮಾಡಿದ್ದರು. ಇದಾದ ನಂತರ ಅವರು ವಯನಾಡಿನ ಬುಡಕಟ್ಟು ವಸತಿ ನಿಲಯದಲ್ಲಿ ವಾರ್ಡನ್ ಆಗಿ ಕೆಲಸ ಮಾಡಿದ್ದರು.

ಶ್ರೀಧನ್ಯ ಅವರು 2016 ಮತ್ತು 2017 ರಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಎರಡು ಪ್ರಯತ್ನಗಳಲ್ಲಿ ವಿಫಲರಾದರು ಸೋಲಿನಿಂದ ಕಂಗೆಡದೆ ಚಲದಿಂದ ಪರಿಶ್ರಮಪಟ್ಟು 2018 ರಲ್ಲಿ 410 ನೇ ರ‌್ಯಾಂಕ್ ಪಡೆದು ಯಶಸ್ಸು ಗಳಿಸಿದರು. ತಮ್ಮ ಸಾಧನೆಯ ಮೂಲಕ ತಮ್ಮ ಕುಟುಂಬ ಹಾಗೂ ಸಮಾಜಕ್ಕೆ ಹೆಮ್ಮೆ ತಂದಿದ್ದಾರೆ. ಒಬ್ಬ ಬುಡಕಟ್ಟು ಐಪಿಎಸ್ ಅಧಿಕಾರಿಯೂ ಇಲ್ಲದ ರಾಜ್ಯದ ಅತ್ಯಂತ ಹಿಂದುಳಿದ ಅ ಜಿಲ್ಲೆಯಿಂದ ಬಂದವರು. ಶ್ರೀಧನ್ಯ ಸಂದರ್ಶನವೊಂದರಲ್ಲಿ ಹೇಳಿದ್ದರು. ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಮುಂಬರುವ ಪೀಳಿಗೆಗೆ ಸ್ಪೂರ್ತಿಯಾಗಬೇಕೆಂದು ಅವರು ಬಯಸುತ್ತಾರೆ. ಶ್ರೀಧನ್ಯಾ ಸುರೇಶ್ ಅವರು ಪ್ರಸ್ತುತ ಪರಿಣತ ಕಂದಾಯ ವಿಭಾಗೀಯ ಕಚೇರಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಇವಾಗಲು ಕೂಡ ಹಲವಾರು ವ್ಯಕ್ತಿಗಳಿಗೆ ಇವರು ಮಾರ್ಗದರ್ಶಕವಾಗಿದ್ದಾರೆ.

Leave a Reply

Your email address will not be published. Required fields are marked *