ಮಾವಿನಕಾಯಿ ಅಂದರೆ ತಟ್ಟನೆ ಬಾಯಿಯಲ್ಲಿ ನೀರು ಬರುತ್ತದೆ. ಮಾವಿನಕಾಯಿ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಮಕ್ಕಳಿಂದ ಹಿಡಿದು ವಯಸ್ಕರ ತನಕ ಇಷ್ಟ ಪಡುತ್ತಾರೆ. ಬಹಳಷ್ಟು ಜನ ಇದರ ಸೇವನೆಯಿಂದ ಹಲವು ಆರೋಗ್ಯಕಾರಿ ಲಾಭಗಳನ್ನು ಪಡೆದುಕೊಳ್ಳುತ್ತಾರೆ. ಅದರಲ್ಲೂ ಬಸರಿಯಲ್ಲಿ ಬಯಕೆ ಎಂದು ಗರ್ಭಿಣಿ ಮಹಿಳೆಯರು ಹುಳಿ ಮಾವಿನಕಾಯಿ ಸೇವನೆ ಮಾಡಲು ಬಯಸುತ್ತಾರೆ.

ಈ ಹುಳಿ ಮಾವಿನಕಾಯಿಯಲ್ಲಿ ವಿಟಮಿನ್‌ ಸಿ ಹೇರಳವಾಗಿದೆ. ನಾರಿನಂಶ ಹೆಚ್ಚಾಗಿದೆ ಹಾಗು ನೀರಿನಂಶ ಇದೆ. ಅನೇಕ ಖನಿಜಾಂಶಗಳಿವೆ ಆದ್ದರಿಂದ ಮನುಷ್ಯನ ಜೀರ್ಣಕ್ರಿಯೆಗೆ ಈ ಹುಳಿ ಮಾವಿನಕಾಯಿ ಹೆಚ್ಚು ಸಹಕಾರಿ.

ಮತ್ತೊಂದು ವಿಶೇಷತೆ ಏನೆಂದರೆ ಹುಳಿಮಾವಿನ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್‌ ಸಿ ಹಾಗೂ ಎಎಚ್‌ಎ ಮತ್ತು ಅಸ್ಟ್ರಿಜಂಟ್‌ ಇರುವುದರಿಂದ ಇದನ್ನು ಸೌಂದರ್ಯವರ್ಧಕವಾಗಿ ಮತ್ತು ನುಣ್ಣಗೆ ಅರೆದು ತಲೆಹೊಟ್ಟಿಗೆ ಔಷಧವಾಗಿಯೂ ಉಪಯೋಗಿಸಬಹುದು.

ಚರ್ಮ ರೋಗ ನಿವಾರಣೆ ಹಾಗು ಬೆವರಿನ ವಾಸನೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿ, ಹೌದು ಮಾವಿನ ಹಣ್ಣಿನ ಗೊರಟನ್ನು ಸ್ನಾನ ಮಾಡುವಾಗ ಮೈ ಉಜ್ಜಲು ಬಳಸಿದರೆ ಅನೇಕ ಚರ್ಮ ರೋಗ ನಿವಾರಣೆಯಾಗುತ್ತದೆ ಹಾಗೂ ಬೆವರಿನ ವಾಸನೆಯೂ ಕಡಿಮೆಯಾಗುತ್ತದೆ. ಮಾವಿನಕಾಯಿ ರಸ ಗಜಕರ್ಣ ಹಾಗು ಇಸಬು ಸಮಸ್ಯೆಗೆ ಉಪಯೋಗಕಾರಿ, ಮಾವಿನ ಹಣ್ಣನ್ನು ಮರದಿಂದ ಕಿತ್ತ ತಕ್ಷಣ ಬರುವ ಅಂಟು ದ್ರವವನ್ನು ಗಜಕರ್ಣ ಹಾಗೂ ಇಸುಬಿಗೆ ಔಷಧಿಯಾಗಿ ಬಳಸಬಹುದು.

ವಸಡಿನಲ್ಲಿ ರಕ್ತ ಬರುತ್ತಿದ್ದರೆ ಆಗ ವಿಟಮಿನ್ ಸಿ ಕೊರತೆ ಇಂದ ಬರುತ್ತದೆ. ಅದಕ್ಕೆ ಮಾವಿನಕಾಯಿಯ ವಿಟಮಿನ್ ಸಿ ಹೆಚ್ಚಾಗಿರುತ್ತದೆ. ಆಗ ಹುಳಿ ಮಾವಿನಕಾಯಿ ತಿನ್ನುವುದರಿಂದ ವಿಟಮಿನ್ ಸಿ ಹೆಚ್ಚಾಗಿ ವಸಡಿನಲ್ಲಿ ರಕ್ತ ಬರುವ ಸಮಸ್ಯೆ ನಿಂತು ಹೋಗುತ್ತದೆ.

ಕತ್ತಿನ ಸುತ್ತಲು ಇರುವ ಕಪ್ಪು ಕಲೆಯನ್ನು ಹೋಗಲಾಡಿಸಲು ಹುಳಿ ಮಾವಿನ ಹಣ್ಣಿನ ಗೊರಟಿಗೆ ಸ್ವಲ್ಪ ಉಪ್ಪು ಹಚ್ಚಿ ಲಘುವಾಗಿ ಗೊರಟಿನಿಂದ ಮಸಾಜ್‌ ಮಾಡಿದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ. ಮೊಣಕೈ ಹಾಗೂ ಕಾಲಿನ ಮಂಡಿಯ ಬಳಿ ಕಪ್ಪು ಕಲೆ ಹಾಗೂ ಚರ್ಮ ಒರಟಾಗಿದ್ದರೆ ಹುಳಿ ಮಾವಿನ ತಿರುಳಿಗೆ ಸ್ವಲ್ಪ ಬೆಣ್ಣೆ ಸೇರಿಸಿ ಮಸಾಜ್‌ ಮಾಡಿ ನೋಡಿ.

ಮಕ್ಕಳಲ್ಲಿ ಕಾಡುವ ತುರಿಕೆಗೆ ಹುಳಿ ಮಾವಿನ ರಸವನ್ನು ಲೇಪಿಸುವುದರಿಂದ ಉತ್ತಮ ಫಲ ದೊರೆಯುತ್ತದೆ. ಕೇವಲ ಹುಳಿ ಮಾವಿನ ರಸ ಮತ್ತು ಗೊರಟಲ್ಲ. ಇದನ್ನು ಬೇಯಿಸಿ ಕೂಡ ಚರ್ಮ ಹಾಗೂ ಕೂದಲಿಗೆ ಲೇಪಿಸಬಹುದು. ಇದರಿಂದ ಚರ್ಮ ಹಾಗೂ ಕೂದಲು ನಯವಾಗುತ್ತದೆ. ಕೇವಲ ಚರ್ಮಕ್ಕೆ ಮಾತ್ರವಲ್ಲ, ಮಾವಿನ ಸೇವನೆಯಿಂದ ರಕ್ತಹೀನತೆ, ರೋಗ ನಿರೋಧಕ ಶಕ್ತಿ, ಜೀರ್ಣಶಕ್ತಿ, ಮಲಬದ್ಧತೆ ಹೀಗೆ ಇನ್ನೂ ಅನೇಕ ರೋಗಗಳಿಗೆ ಪರಿಹಾರ ಕಾಣಬಹುದು.

Leave a Reply

Your email address will not be published. Required fields are marked *