ಇರುವ ತರಕಾರಿಗಳಲ್ಲಿ ಅತ್ಯಂತ ಕಹಿಯಾದ ಒಂದು ತರಕಾರಿ ಎಂದರೆ ಅದು ಹಾಗಲಕಾಯಿ. ಕರೆಲಾ ಎನ್ನುವುದು ಇದಕ್ಕಿರುವ ಇನ್ನೊಂದು ಹೆಸರು. ಹಲವಾರು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಇದು ಒಳಗೊಂಡಿದೆ. ಇದರಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಸಿಗುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ಮಧುಮೇಹ ಸಮಸ್ಯೆ ಇರುವವರು ಹಾಗಲಕಾಯಿ ರಸ ಸೇವನೆ ಮಾಡಿದರೆ ತುಂಬಾ ಪ್ರಯೋಜನವಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವ ಜೊತೆಗೆ ದೇಹದ ಕೊಲೆಸ್ಟ್ರಾಲ್ ಮಟ್ಟ ಕೂಡ ನಿಯಂತ್ರಣ ವಾಗುತ್ತದೆ. ದೇಹದ ತೂಕ ಕಡಿಮೆ ಮಾಡುವಲ್ಲಿ ಹಾಗಲಕಾಯಿ ಪಾತ್ರವನ್ನು ಮರೆಯುವಂತಿಲ್ಲ. ಕೇವಲ ನಮ್ಮ ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹಾಗಲಕಾಯಿಯನ್ನು ಬೆಳೆಯುತ್ತಾರೆ. ನಮ್ಮ ಏಷ್ಯಾ ಖಂಡದ ವಿವಿಧ ದೇಶಗಳಲ್ಲಿ ಹಾಗಲಕಾಯಿಯನ್ನು ತಮ್ಮ ಮುಖ್ಯ ಆಹಾರ ಪದ್ಧತಿಯಾಗಿ ಗಣನೆಗೆ ತೆಗೆದುಕೊಂಡಿದ್ದಾರೆ. ಬನ್ನಿ ಈ ತರಕಾರಿ ಕೇವಲ ಮಧುಮೇಹ ಮಾತ್ರ ಕಂಟ್ರೋಲ್ ಮಾಡುವುದಲ್ಲದೆ, ಇತರ ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿದೆ, ಅವು ಯಾವುದು ಎಂಬುದನ್ನು ನೋಡೋಣ.

ಇದು ರೋಗನಿರೋಧಕ ಶಕ್ತಿಯನ್ನು ಉತ್ತಮಪಡಿಸುವುದು ಹಾಗೂ ಹಲವಾರು ಕಾಯಿಲೆಗಳಿಂದ ರಕ್ಷಣೆ ನೀಡುವುದು. ಇದು ಮೊಡವೆ ದೂರವಿಡುವುದು ಮಾತ್ರವಲ್ಲದೆ, ಬೊಕ್ಕೆ, ಶಿಲೀಂಧ್ರ ಸೋಂಕು ಇತ್ಯಾದಿಗಳಿಂದಲೂ ರಕ್ಷಣೆ ಒದಗಿಸುವುದು. ಹಾಗಾಗಿ ಆದಷ್ಟು ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಹಾಗಲಕಾಯಿಯನ್ನು ಸೇರಿಸಿಕೊಳ್ಳಿ. ಆಲ್ಕೋಹಾಲ್ ಸೇವನೆ ಮಾಡಿ ರಾತ್ರಿಯ ನಶೆ ಏರಿದ್ದರೆ, ಆಗ ಇದನ್ನು ನಿವಾರಣೆ ಮಾಡಲು ಹಾಗಲಕಾಯಿ ಬಳಸಬಹುದು. ಇದು ಆಲ್ಕೋಹಾಲ್ ನಿಂದ ಯಕೃತ್ ಗೆ ಆಗುವ ಹಾನಿ ತಪ್ಪಿಸುವುದು ಮತ್ತು ಯಕೃತ್ ನ್ನು ಸರಿಪಡಿಸುವುದು. ಇದು ಯಕೃತ್ ಗೆ ಪೋಷಣೆ ನೀಡುವುದು. ಅದೇ ರೀತಿಯಲ್ಲಿ ರಾತ್ರಿಯ ನಶೆ ದೂರ ಮಾಡುವುದು.ಹಾಗಲಕಾಯಿ ಸೇವನೆ ಮಾಡಿದರೆ, ಅದು ರಕ್ತವನ್ನು ಶುದ್ಧೀಕರಿಸಿ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವುದು. ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ ಮತ್ತು ಸೂಕ್ಷ್ಮಾಣು ವಿರೋಧಿ ಅಂಶಗಳು ಇದಕ್ಕೆ ಕಾರಣವಾಗಿದೆ. ಇದು ರಕ್ತ ಸಂಚಾರವನ್ನು ಉತ್ತಮಪಡಿಸುವುದು ಮತ್ತು ರಕ್ತದಲ್ಲಿನ ಕಾಯಿಲೆಗಳನ್ನು ದೂರವಿಡುವುದು. ಮೊಡವೆ, ದದ್ದು ಮತ್ತು ಬೊಕ್ಕೆಯನ್ನು ಇದು ದೂರ ಮಾಡುವುದು.

Leave a Reply

Your email address will not be published. Required fields are marked *