ನಮ್ಮ ಭಾರತ ದೇಶ ಹೇಳಿ ಕೇಳಿ ಮಸಾಲೆ ಪದಾರ್ಥಗಳನ್ನು ಹೆಚ್ಚಾಗಿ ಬೆಳೆಯುವ ಪ್ರದೇಶ. ಇಡೀ ಏಷ್ಯಾ ಖಂಡದಲ್ಲೇ ನಮ್ಮ ಭಾರತಕ್ಕೆ ಇದರಿಂದ ಸಾಕಷ್ಟು ಒಳ್ಳೆಯ ಹೆಸರು ಬಂದಿದೆ. ಆದರೆ ನಮ್ಮ ಹಣೆಬರಹಕ್ಕೆ ಅವುಗಳ ಮೌಲ್ಯವೇ ನಮಗೆ ಇದುವರೆಗೂ ತಿಳಿದಿಲ್ಲ. ಹಾಗಾಗಿ ಮನೆಯಲ್ಲಿ ನಮ್ಮ ಕಣ್ಣ ಮುಂದಿದ್ದರೂ ಅವುಗಳನ್ನು ನಮ್ಮ ಆರೋಗ್ಯಕ್ಕೆ ಅನುಕೂಲವಾಗುವಂತೆ ಬಳಸುವ ಯೋಚನೆ ನಾವು ಎಂದಿಗೂ ಮಾಡುವುದಿಲ್ಲ. ನಮ್ಮ ಈ ಕೆಟ್ಟ ಅಭ್ಯಾಸದಿಂದ ಕೇವಲ ನಮ್ಮ ಆರೋಗ್ಯ ಮಾತ್ರ ಹಾಳಾಗುತ್ತಿರುವುದಲ್ಲದೆ ನಮ್ಮ ಮಕ್ಕಳ ಆರೋಗ್ಯ ಸಹ ಹದಗೆಡುತ್ತಿದೆ.

ಕೆಟ್ಟ ಆಹಾರದ ಅಭ್ಯಾಸಗಳನ್ನು ನಮ್ಮ ಜೊತೆಗೆ ನಮ್ಮ ಮಕ್ಕಳಿಗೂ ರೂಡಿ ಮಾಡಿ ಅವರ ಆರೋಗ್ಯದ ಜೊತೆ ಇಂದು ನಾವೇ ಚೆಲ್ಲಾಟವಾಡುತ್ತಿದ್ದೇವೆ. ಮಕ್ಕಳನ್ನು ಬೆಳೆಸುವುದು, ಅವರ ಆರೋಗ್ಯದ ಬಗ್ಗೆ ಗಮನ ವಹಿಸುವುದು ನಿಜಕ್ಕೂ ಒಂದು ಅದ್ಭುತ ಕಲೆ. ಇದನ್ನು ಎಲ್ಲಾ ಪೋಷಕರು ಮೊದಲು ತಿಳಿದುಕೊಳ್ಳಬೇಕು. ಬೇಸಿಗೆ ಕಾಲದಲ್ಲಿ, ಮಳೆಗಾಲದಲ್ಲಿ ಹಾಗೂ ಚಳಿಗಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಸೂಕ್ತವಾಗುವ ಆಹಾರಗಳನ್ನು ಮಾತ್ರ ಮಕ್ಕಳಿಗೆ ತಿನ್ನಲು ಕೊಡಬೇಕು. ಏಕೆಂದರೆ ಎಲ್ಲಾ ಸಮಯವೂ ಒಂದೇ ರೀತಿ ಇರುವುದಿಲ್ಲವಾದ್ದರಿಂದ ಎಲ್ಲಾ ಆಹಾರಗಳು ಸಹ ಎಲ್ಲಾ ಕಾಲದಲ್ಲೂ ತಿನ್ನುವವರ ಆರೋಗ್ಯದ ಮೇಲೆ ಒಂದೇ ರೀತಿಯ ಪ್ರಭಾವ ಬೀರುವುದಿಲ್ಲ.ಈ ಲೇಖನದಲ್ಲಿ ಮಳೆಗಾಲದ ಈ ಸಮಯದಲ್ಲಿ ಮಕ್ಕಳಿಗೆ ಯಾವ ಯಾವ ಆಹಾರಗಳನ್ನು ಸೇವಿಸಲು ಕೊಡಬಾರದು ಮತ್ತು ನಿಮ್ಮ ಮಕ್ಕಳನ್ನು ಹುಷಾರು ತಪ್ಪುವುದರಿಂದ ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿ ಕೊಡಲಾಗಿದೆ.

ಸಾಧಾರಣವಾಗಿ ಮಕ್ಕಳಿಗೆ ಕುರುಕಲು ತಿಂಡಿಯೆಂದರೆ ತುಂಬಾ ಇಷ್ಟ. ಅದರಲ್ಲೂ ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳು ಮಕ್ಕಳನ್ನು ಕೈ ಬೀಸಿ ಕರೆಯುತ್ತವೆ. ಮಳೆಗಾಲ ಬೇರೆ ಆಗಿರುವುದರಿಂದ ಬೋಂಡಾ, ಬಜ್ಜಿ, ಪಕೋಡಾ ಮಾಡಿಕೊಂಡು ತಿನ್ನಬೇಕೆಂಬ ಮನಸ್ಸು ಮನೆಯಲ್ಲಿನ ದೊಡ್ಡವರಿಗೂ ಸಹ ಇರುತ್ತದೆ. ಆದರೆ ಅತಿಯಾದ ಎಣ್ಣೆಯ ಅಂಶ ಯಾರಿಗೇ ಆದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಇದು ನಿಮ್ಮ ದೇಹದ ಜೀರ್ಣ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರ ಜೊತೆಗೆ ನಿಮ್ಮ ಹೃದಯಕ್ಕೆ ಕೂಡ ಎಣ್ಣೆಯಿಂದ ಕರಿದ ತಿಂಡಿಗಳಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಆದಷ್ಟು ಮಳೆಗಾಲದಲ್ಲಿ ಎಣ್ಣೆಯಿಂದ ಕರಿದ ಆಹಾರ ಪದಾರ್ಥಗಳನ್ನು ಅವಾಯ್ಡ್ ಮಾಡಿ

Leave a Reply

Your email address will not be published. Required fields are marked *