ನಮಸ್ತೇ ಆತ್ಮಿಯ ಪ್ರಿಯ ಓದುಗರೇ ದೇಹದ ಎಲ್ಲಾ ಭಾಗಗಳಲ್ಲಿ ಕಿಡ್ನಿ ಕೂಡ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಇದು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ದೇಹದಲ್ಲಿ ಶೇಖರಣೆ ಆದ ವಿಷಕಾರಿ ಅಂಶಗಳನ್ನು ಹೊರಗೆ ಹಾಕದೆ ಹೋದಲ್ಲಿ ವಿಷಕಾರಿ ಅಂಶಗಳು ಶೇಖರಣೆ ಆಗಿ ಅನೇಕ ಬಗೆಯ ರೋಗ ರುಜಿನಗಳು ಬಂದು ಸೇರುತ್ತವೆ.

ನುಗ್ಗೆಕಾಯಿ ಸೇವನೆ ಮಾಡುವುದರಿಂದ ಏನೆಲ್ಲ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಅಂತ ತಿಳಿಯೋಣ ಬನ್ನಿ. ನುಗ್ಗೆ ಕಾಯಿ ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಮುಂತಾದ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಫೈಬರ್, ವಿಟಮಿನ್ ಎ, ಬಿ, ಸಿ, ಡಿ, ಕ್ಯಾಲ್ಸಿಯಂ, ಪ್ರೋಟೀನ್, ಕಾರ್ಬೋಹೈಡ್ರೇಟ್, ರಂಜಕ, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ತಾಮ್ರ, ಮ್ಯಾಂಗನೀಸ್, ಸೋಡಿಯಂ, ಸತು, ಸೆಲೆನಿಯಮ್ ಇತ್ಯಾದಿ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ನುಗ್ಗೆಕಾಯಿ ಒಂದು ವರದಾನ ಅಂತ ಹೇಳಬಹುದು. ಮಧುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆಯ ಅಂಶವು ಹೆಚ್ಚು ಇರುತ್ತದೆ ಆದರೆ ನುಗ್ಗೆಕಾಯಿ ಸೇವನೆ ಮಾಡುವುದರಿಂದ ಖಂಡಿತವಾಗಿ ಡಯಾಬಿಟೀಸ್ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ನುಗ್ಗೆ ಕಾಯಿ ನಲ್ಲಿ ರಿಬೋಫ್ಲಾವಿನ್ ಸಮೃದ್ಧವಾಗಿದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ರಿಬೋಫ್ಲಾವಿನ್ ನಮಗೆ ಸಹಾಯ ಮಾಡುತ್ತದೆ.

ನುಗ್ಗೆ ಕಾಯಿ ಅನ್ನು ಯಾವುದೇ ರೂಪದಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು. ಇದು ಮಧುಮೇಹ ರೋಗಿಗಳಿಗೆ ಯಾವುದೇ ಔಷಧಕ್ಕಿಂತ ಕಡಿಮೆಯಿಲ್ಲ. ವೈದ್ಯರ ಸಲಹೆ ಪಡೆದ ನಂತರ, ತಿನ್ನಬಹುದು.ಕೇವಲ ಆರೋಗ್ಯವಷ್ಟೇ ಅಲ್ಲ, ಚರ್ಮವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಅಗತ್ಯ. ನಿಮ್ಮ ಚರ್ಮವು ನಿಮ್ಮ ಒಳ್ಳೆಯ ಮತ್ತು ಕೆಟ್ಟ ಆರೋಗ್ಯದ ಬಗ್ಗೆ ಸಂಕೇತಗಳನ್ನು ನೀಡುತ್ತದೆ. ಚರ್ಮದಲ್ಲಿ ಯಾವುದೇ ಹೊಳಪು ಇಲ್ಲದಿದ್ದರೆ, ನಿಮ್ಮ ಚರ್ಮವು ಆರೋಗ್ಯಕರವಾಗಿಲ್ಲ ಎಂದು ಅರ್ಥ.

ಈ ರೀತಿಯ ಇಂತಹ ಪರಿಸ್ಥಿತಿಯಲ್ಲಿ, ನುಗ್ಗೆ ಕಾಯಿ ಅಥವಾ ನುಗ್ಗೆ ಕಾಯಿ ಎಲೆಗಳನ್ನು ಸೇವಿಸುವುದರಿಂದ, ನೀವು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಸಬಹುದು. ಹಾಗೆಯೇ ಕಿಡ್ನಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಕಿಡ್ನಿ ಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.ನಿಮ್ಮ ರಕ್ತದಲ್ಲಿ ಇರುವ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ. ನುಗ್ಗೆಕಾಯಿ ಸೊಪ್ಪು ಸಿಗದೆ ಇದ್ದರೆ ಅದರ ರಸವನ್ನು ಕುದಿಸಿ ಕುಡಿಯಿರಿ. ಇದರಿಂದ ಮತ್ತಷ್ಟು ಉತ್ತಮ ಆಗುತ್ತದೆ. ಕಿಡ್ನಿಯಲ್ಲಿ ವಿಷಕಾರಿ ಅಂಶಗಳು ಸೇರಿದರೆ ದೇಹದ ಇನ್ನಿತರ ಭಾಗಗಳಿಗೆ ಹಾನಿ ಉಂಟಾಗುತ್ತದೆ.ಕಿಡ್ನಿ ಗಳಿಗೆ ಸಹಾಯ ಮಾಡುವುದಲ್ಲದೆ ಮೂಳೆಗಳಿಗೆ ಕೂಡ ಉತ್ತಮವಾದ ಔಷಧ ಅಂತ ಹೇಳಬಹುದು.

ಮೂಳೆಗಳನ್ನು ಗಟ್ಟಿ ಮಾಡುತ್ತದೆ. ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ನುಗ್ಗೆ ಕಾಯಿ ಯಲ್ಲಿರುವ ಔಷಧೀಯ ಗುಣಗಳು ಕ್ಯಾನ್ಸರ್ ನಂತಹ ಅಪಾಯಕಾರಿ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಾಸ್ತವವಾಗಿ, ನುಗ್ಗೆ ಕಾಯಿ ತೊಗಟೆ ಮತ್ತು ನುಗ್ಗೆ ಕಾಯಿ ಎಲೆಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ.

ಇದರ ಜೊತೆಯಲ್ಲಿ, ನುಗ್ಗೆ ಕಾಯಿ ಎಲೆಗಳು ಪಾಲಿಫಿನಾಲ್ ಮತ್ತು ಪಾಲಿಫ್ಲವೊನೈಡ್ಗಳಿಂದ ಸಮೃದ್ಧವಾಗಿವೆ, ಇವುಗಳು ಆಂಟಿಆಕ್ಸಿಡೆಂಟ್ ಮತ್ತು ಕ್ಯಾನ್ಸರ್ ವಿರೋಧಿ ಸಂಯುಕ್ತಗಳಾಗಿವೆ, ಇದು ಈ ಮಾರಕ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಡ್ರಮ್ ಸ್ಟಿಕ್ ನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ಚರ್ಮದ ದದ್ದುಗಳು, ಚರ್ಮದ ಸೋಂಕುಗಳು ಅಥವಾ ಇತರ ಚರ್ಮ ರೋಗಗಳ ಅಪಾಯದಿಂದ ರಕ್ಷಿಸುತ್ತದೆ. ಶುಭದಿನ.

Leave a Reply

Your email address will not be published. Required fields are marked *