ನಮಸ್ತೇ ಆತ್ಮೀಯ ಪ್ರಿಯ ಓದುಗರೇ ನಮ್ಮ ಭಾರತೀಯರು ಬಳಕೆ ಮಾಡುವ ಸಾಂಬಾರ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಕೂಡ ಒಂದು. ಬೆಳ್ಳುಳ್ಳಿ ಕಡು ವಾಸನೆಯನ್ನು ಹೊಂದಿದ್ದರೂ ಭಾರತೀಯ ಅಡುಗೆಗಳಲ್ಲಿ ವಿಶೇಷ ರುಚಿಯನ್ನು ನೀಡುತ್ತದೆ. ವೈದ್ಯರು ಒಂದು ಸೇಬು ಹಣ್ಣು ತಿಂದು ಆರೋಗ್ಯವಾಗಿ ಇರಿ ಎಂದು ಹೇಳುತ್ತಾರೆ. ಹಾಗೆಯೇ ಆಯುರ್ವೇದ ಶಾಸ್ತ್ರದಲ್ಲಿ ಬೆಳ್ಳುಳ್ಳಿ ತಿಂದು ಆರೋಗ್ಯವಾಗಿ ಅಂತ ಹೇಳಲಾಗುತ್ತದೆ.

ಕೆಲವರು ಬೆಳ್ಳುಳ್ಳಿ ಸೇವನೆ ಮಾಡುವುದಿಲ್ಲ. ಆದರೆ ನೀವು ಹೀಗೇ ಮಾಡುವುದು ತಪ್ಪು. ಇದರಿಂದ ಆಗುವ ಲಾಭಗಳ ಬಗ್ಗೆ ನಿಮಗೆ ಗೊತ್ತಾದರೆ ನೀವು ಇದರ ಸೇವನೆ ಮಾಡುವುದನ್ನು ಪ್ರಾರಂಭಿಸುವಿರಿ. ಹಾಗಾದರೆ ಬನ್ನಿ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ಏನೆಲ್ಲ ಲಾಭಗಳು ಉಂಟಾಗುತ್ತವೆ ಅಂತ ತಿಳಿಯೋಣ.ಪ್ರತಿದಿನ ಬೆಳಿಗ್ಗೆ ಒಂದು ಲೋಟ ನೀರಿನಿಂದ ಬೆಳ್ಳುಳ್ಳಿ ಎಸಳನ್ನು ತಿನ್ನುವವರ ಜೀರ್ಣಕ್ರಿಯೆ ಯಾವಾಗಲೂ ಉತ್ತಮವಾಗಿರುತ್ತದೆ.

ಜೀರ್ಣಕಾರಿ ಅಸ್ವಸ್ಥತೆಗಳು ಸಹ ಅದರಿಂದ ದೂರವಿರುತ್ತವೆ. ಈ ವಿಧಾನವು ತೂಕ ನಷ್ಟಕ್ಕೂ ಸಹ ಪ್ರಯೋಜನಕಾರಿಯಾಗಿದೆ.ಬೆಳ್ಳುಳ್ಳಿಯೊಂದಿಗೆ ನೀರು ಕುಡಿಯುವುದರಿಂದ ನೆಗಡಿ ಮತ್ತು ನೆಗಡಿಯಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ. ಈ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬೆಳ್ಳುಳ್ಳಿ ಒಂದು ಸಾಮಾನ್ಯ ಪರಿಹಾರವಾಗಿದೆ. ಬೆಳ್ಳುಳ್ಳಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ, ಹಸಿ ಬೆಳ್ಳುಳ್ಳಿಯನ್ನು ಅಗಿಯಬೇಕು ಮತ್ತು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಬೇಕು. ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿ ಉಳಿಯಬಹುದು.

ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಆರೋಗ್ಯಕರ. ಆಂಟಿವೈರಲ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ಫಂಗಲ್, ಆಂಟಿ ಪ್ಯಾರಸಿಟಿಕ್, ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ 6, ಸಿ, ಫೈಬರ್ ಮತ್ತು ಮ್ಯಾಂಗನೀಸ್ ಕೂಡ ಇದೆ. ಬೆಳ್ಳುಳ್ಳಿ ಅನೇಕ ರೋಗಗಳಿಂದ ರಕ್ಷಿಸುತ್ತದೆ. ಹೊಟ್ಟೆ ಸಮಸ್ಯೆಗಳನ್ನು ತೆಗೆದು ಹಾಕುತ್ತದೆ. ಅದೇ ರೀತಿ, ದಿನವಿಡೀ ಸಾಕಷ್ಟು ನೀರು ಕುಡಿಯುವುದರಿಂದ ಆರೋಗ್ಯಕ್ಕೂ ಅನೇಕ ಪ್ರಯೋಜನಗಳಿವೆ. ಈ ಎರಡನ್ನು ಒಟ್ಟಿಗೆ ಸೇವಿಸಿದಾಗ ಆರೋಗ್ಯದ ಪ್ರಯೋಜನಗಳು ದ್ವಿಗುಣಗೊಳ್ಳುತ್ತವೆ.

ಶೀತ, ಜ್ವರದಿಂದ ದೂರವಿರಿಸುತ್ತದೆಬೆಳ್ಳುಳ್ಳಿ ಪ್ರತಿ ಜೀವಕ, ಶಿಲೀಂಧ್ರ ವಿರೋಧಿ ಗುಣಗಳಿಂದ ಕೂಡಿದ ಒಂದು ಸಸ್ಯ. ಇದರಲ್ಲಿ ಹಲವು ಬಗೆಯ ಪದಾರ್ಥಗಳಿವೆ, ಇದು ಬ್ಯಾಕ್ಟೀರಿಯಾದ ಸೋಂಕಿನಿಂದ ರಕ್ಷಿಸುತ್ತದೆ.ಋತುಸ್ರಾವದ ದಿನಗಳಲ್ಲಿ ಸಾಕಷ್ಟು ಹೊಟ್ಟೆ ನೋವು ಇದ್ದರೆ, ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತಿಂದು, ನೀರು ಕುಡಿಯಿರಿ. ಇದನ್ನು ಮಾಡುವುದರಿಂದ ದೇಹದಲ್ಲಿನ ಈಸ್ಟ್ರೊಜೆನ್ ಮಟ್ಟವೂ ಸರಿಯಾಗಿರುತ್ತದೆ.ಬೆಳ್ಳುಳ್ಳಿ ಎಸಳುಗಳು ಆರೋಗ್ಯದ ದೃಷ್ಟಿಯಿಂದ ನಮ್ಮ ದೇಹಕ್ಕೆ ಅತ್ಯಂತ ಪ್ರಯೋಜಕಾರಿ.

ಹೃದ್ರೋಗ, ಹೃದಯಾಘಾತ, ಕ್ಯಾನ್ಸರ್ ಮತ್ತು ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತವೆ.ನಮ್ಮ ದೇಹದಲ್ಲಿ ಮೆದುಳು ಬಹಳ ಮುಖ್ಯ. ಆಮ್ಲಜನಕದ ಮೂಲಕ ವಿಷಕಾರಿ ವಸ್ತುಗಳನ್ನು ತಲುಪುವ ಅಪಾಯವಿದೆ. ಮೆದುಳನ್ನು ಸ್ವಚ್ಛಗೊಳಿಸಲು ಬೆಳ್ಳುಳ್ಳಿ ತಿನ್ನಬೇಕು.ನೀವು ಎದ್ದ ತಕ್ಷಣ ನಾಲ್ಕು ಅಥವಾ ಐದು ಬೆಳ್ಳುಳ್ಳಿ ಎಸಳುಗಳನ್ನು ಜಗಿಯಿರಿ.

ರುಚಿ ಕಹಿಯಾಗಿ ಕಂಡರೂ ಪರವಾಗಿಲ್ಲ. ಅದ್ಭುತವಾದ ಆರೋಗ್ಯವನ್ನು ಹೊಂದುತ್ತೀರಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ನಮಗೆ ಹಸಿವು ಜಾಸ್ತಿಯಾಗುತ್ತದೆ ಜೊತೆಗೆ ನಮ್ಮ ಜೀರ್ಣಕ್ರಿಯೆ ಕೂಡ ತುಂಬಾ ಸರಿಯಾಗಿರುತ್ತದೆ ಒಂದು ಬೆಳ್ಳುಳ್ಳಿಯು ನಮ್ಮ ಅಸ್ತಮ ಕ್ಯಾನ್ಸರ್ ಅಂತಹ ದೊಡ್ಡ ಕಾಯಿಲೆಗಳಿಂದ ನಿವಾರಣೆ ಮಾಡುತ್ತದೆ. ಶುಭದಿನ.

Leave a Reply

Your email address will not be published. Required fields are marked *