ಒಬ್ಬ ಸಾಮಾನ್ಯ ಮಹಿಳೆ ತಾನು ಕಷ್ಟ ಪಟ್ಟು ಸತತವಾಗಿ ಸೋಲು ಹಾಗೂ ನಷ್ಟದ ಜೀವನವನ್ನು ನಡೆಸಿ ನಂತರ ಒಂದೊಳ್ಳೆಯ ಯಶಸ್ಸಿನ ದಾರಿಯನ್ನು ಕಂಡು ಕೊಂಡಿದ್ದಾರೆ, ಇವರ ಕತೆ ಬೇರೆಯವರಿಗೂ ಮಾದರಿಯಾಗೋದ್ರಲ್ಲಿ ಅನುಮಾನವಿಲ್ಲ. ಹೆಸರು ಹರ್ಷಲ ಎಂಬುದಾಗಿ ತುಮಕೂರಿನ ಜಿಲ್ಲೆಯ ಸಿರಾ ನಗರದ ಬನ್ನಿಕಟ್ಟೆಯ ವಾಸಿ, ಹಪ್ಪಳ ಸಂಡಿಗೆಯ ಬ್ಯುಸಿನೆಸ್ ಮಾಡುತ್ತಿದ್ದಾರೆ.

ಹಪ್ಪಳ ಸಂಡಿಗೆ ಬ್ಯುಸಿನೆನ್ಸ್ ಗೆ ಇಳಿಯುವ ಮುನ್ನ ಇವರ ಪತಿಯವರು ಅಗರಬತ್ತಿಯ ಪ್ಯಾಕ್ಟರಿ ನಡೆಸುತ್ತಿದ್ದರು, ಇದರಿಂದ 20 ಲಕ್ಷ ರು. ಗಳ ನಷ್ಟ ಅನುಭವಿಸಿ ಜೀವನದಲ್ಲಿ ಪಡಬಾರದ ಕಷ್ಟಗಳನ್ನು ಅನುಭವಿಸಿದ್ದಾರೆ, ಈ ಹೆಣ್ಣು ಮಗಳು ಈ ಕಷ್ಟಗಳಿಗೆಲ್ಲ ಕುಗ್ಗದೆ ಜೀವನದಲ್ಲಿ ಏನನ್ನಾದರೂ ಮಾಡಿ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಹಂಬಲದಿಂದ ಈ ಹಪ್ಪಳ ಸಂಡಿಗೆಯನ್ನು ಮಾಡುವ ಕಾರ್ಯಕ್ಕೆ ಬ್ಯುಸಿನೆನ್ಸ್ ಗೆ ಕೈ ಹಾಕುತ್ತಾರೆ.

ಪ್ರಾರಂಭದಲ್ಲೇ ಹಪ್ಪಳ ಸಂಡಿಗೆಯನ್ನು ಮಾಡುವ ಕಾರ್ಯಕ್ಕೆ ಮುಂದಾಗುವ ಇವರು ಕೆಲಸವನ್ನು ಚಿಕ್ಕದಾಗಿ ನಡೆಸುತ್ತಾರೆ ಅದರಲ್ಲಿ ಕಾಲಾನುಕ್ರಮೇಣ ಲಾಭ ಬರುವುದನ್ನು ಕಂಡು ದೊಡ್ಡ ಮಟ್ಟದಲ್ಲಿ ತಮ್ಮ ಬ್ಯುಸಿನೆನ್ಸ್ ಪ್ರಾರಂಭಿಸುತ್ತಾರೆ. ಇವರ ಆರ್ಥಿಕ ಸಹಾಯಕ್ಕೆ ಸ್ಥಳೀಯ ಸಂಘ ಸಂಸ್ಥೆಗಳು ಅಂದರೆ ಧರ್ಮಸ್ಥಳ ಸಂಘ ಇವುಗಳ ಮೂಲಕ ಹಣಕಾಸಿನ ನೆರವು ಪಡೆದು ತಮ್ಮ ಬ್ಯುಸಿನೆನ್ಸ್ ಗೆ ಅನುಕೂಲತೆಯನ್ನು ಮಾಡಿಕೊಳ್ಳುತ್ತಾರೆ.

ದೇಶೀಯ ಅಂದರೆ ಹಳ್ಳಿ ರುಚಿಯಲ್ಲಿ ಸ್ವಾದಿಷ್ಟವಾದ ಹಾಗು ರುಚಿಯಾದ ಹಪ್ಪಳ ಸಂಡಿಗೆಯನ್ನು ಮಾಡಿ ಜನಪ್ರಿಯತೆಯನ್ನು ಪಡೆದಿದ್ದರೆ ಸಿರಾ ತುಮಕೂರು ಹಿರಿಯೂರು ಚಳ್ಳಕೆರೆ ಹೀಗೆ ಹಲವು ಸಿಟಿಗಳಿಗೆ ಇವರ ಹಪ್ಪಳ ಸಂಡಿಗೆಗೆ ಬೇಡಿಕೆ ಇದೆ, ಇದರ ಜತೆಗೆ ಹಪ್ಪಳ ಹಾಗೂ ಚಿಪ್ಸ್ ಜೊತೆಗೆ ಎಳ್ಳು, ಮಾವು ಹಾಗೂ ನಿಂಬೆಯ ಉಪ್ಪಿನಕಾಯಿಯನ್ನೂ ಸಿದ್ಧಪಡಿಸುತ್ತಾರೆ.

ಬೆಳಗ್ಗೆಯೆಲ್ಲಾ ಉತ್ಪಾದನಾ ಕಾರ್ಯದಲ್ಲಿ ತೊಡಗುವ ಇವರ ತಂಡ ಮಧ್ಯಾಹ್ನದ ನಂತರ ಅವುಗಳನ್ನು ಪ್ಯಾಕೆಟ್ ಮಾಡಿ ಮಾರುಕಟ್ಟೆಗೆ ಕಳುಹಿಸಲು ಸಿದ್ಧಪಡಿಸುತ್ತಾರೆ. ಈ ಉತ್ಪನ್ನಗಳನ್ನು ತಮ್ಮದೇ ಸ್ವಂತ ವಾಹನದಲ್ಲಿ ಖುದ್ದು ಕೊಂಡೊಯ್ದು ಸಿರಾ ನಗರದ ಎಲ್ಲಾ ಪ್ರಮುಖ ಅಂಗಡಿಗಳಿಗೂ ತಲುಪಿಸುವ ಹೊಣೆ ಹರ್ಷಲಾ ಪತಿ ಹೇಮಣ್ಣ ಅವರದ್ದು.

ಇಂದು ಇವರ ಕೆಲಸಕ್ಕೆ ಇವರು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ, ಇವರ ಮಾಸಿಕ ಆದಾಯ ೨ ರಿಂದ ೩ ಲಕ್ಷ ರು.ಗಳು ಇವರ ಬಳಿ 15 ಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ನಿಮಗೂ ಕೂಡ ಇದೆ ರೀತಿಯಲ್ಲಿ ಬ್ಯುಸಿನೆನ್ಸ್ ಮಾಡುವ ಆಸಕ್ತಿ ಇದ್ರೆ ಸಂಪರ್ಕಿಸಿ ಸಲಹೆಗಾಗಿ ೯೧೪೮೪೦೮೨೨೩

Leave a Reply

Your email address will not be published. Required fields are marked *