ಹಿಮೋಗ್ಲೋಬಿನ್ ಕೊರತೆ ಆಗುವುದು ಕೊರತೆ ಆಗುವುದಕ್ಕೆ ಕಬ್ಬಿನಾಂಶ ಕೊರತೆ ಆಗಿರಿತ್ತೆ. ಯಾವ ಯಾವ ಸೀಸನ್ಗಳಲ್ಲಿ ಯಾವ ಯಾವ ಹಣ್ಣು ತರಕಾರಿಗಳು ಸಿಗುತ್ತವೆ ಅವುಗಳನ್ನು ನಾವು ಮಿಸ್ ಮಾಡದೆ ತಿನ್ನಲೇಬೇಕಾಗುತ್ತದೆನಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು, ಅದರಲ್ಲಿ ನಾವು ಹೇಳುತ್ತಿರುವಂಥದ್ದು ಹಣ್ಣು ಸೀತಾಫಲ ತುಂಬಾನೇ ಬೆಸ್ಟ್ ಇದು ನಮ್ಮ ಆರೋಗ್ಯಕ್ಕೆ ಆದರೆ ಯಾವ ರೀತಿಯಲ್ಲಿ ಇದು ನಮ್ಮ ಆರೋಗ್ಯಕ್ಕೆ ಸಹಕಾರಿ ಎನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಿದ್ದೇನೆ.

ಈ ಸೀತಫಲ ಹಣ್ಣುಗಳಲ್ಲಿ ವಿಟಮಿನ್ ಎ ವಿಟಮಿನ್ ಸಿ ಕ್ಯಾಲ್ಸಿಯಂ ನಾರಿನ ಅಂಶ ಎಲ್ಲವೂ ಕೂಡ ನಮಗೆ ಹೇರಳವಾಗಿ ಸಿಗುತ್ತದೆ ಸೋ ನಮಗೆ ಆರೋಗ್ಯ ಸಮಸ್ಯೆಗಳಿಂದ ದೂರ ಇಡುವುದಕ್ಕೆ ತುಂಬಾನೇ ಸಹಕಾರಿ ಇದು. ಮೊದಲನೆಯದು ಹೇಳಬೇಕು ಎಂದರೆ ರಕ್ತದ ಸಮಸ್ಯೆ ಇರುವವರಿಗೆ ತುಂಬಾನೇ ಒಳ್ಳೆಯದು. ಇದರಿಂದ ಕಬ್ಬಿನಾಂಶ ನಮಗೆ ಹೇರಳವಾಗಿ ಸಿಗುವುದರಿಂದ ದೇಹದಲ್ಲಿ ಯಾವತ್ತಿಗೂ ರಕ್ತದ ಕೊರತೆ ಆಗುವುದಿಲ್ಲ

ಇದು ಗರ್ಭಿಣಿ ಸ್ತ್ರೀಯರಿಗೂ ಕೂಡ ಬೆಸ್ಟ್ ಅಂತಾನೆ ಹೇಳಬಹುದು ನಾರ್ಮಲ್ ಆಗಿ ಗರ್ಭಿಣಿ ಸ್ತ್ರೀಯರಲ್ಲಿ ತುಂಬಾ ಜನರಲ್ಲಿ ಕಾಣುವಂತಹ ಒಂದು ಸಮಸ್ಯೆ ಅಂತ ಹೇಳಿದರೆ ಹಿಮೋಗ್ಲೋಬಿನ್ ಕೊರತೆ ಆಗುವುದು. ಸೊ ಈ ಹಿಮೋಗ್ಲೋಬಿನ್ ಕೊರತೆ ಆಗುವುದಕ್ಕೆ ಕಬ್ಬಿನಾಂಶ ಕೊರತೆ ಕೂಡ ಕಾರಣ ಆಗಿರುತ್ತದೆ. ಸೊ ಅದಕ್ಕಾಗಿ ಸೀತಾಫಲ ಹಣ್ಣನ್ನು ನಾವು ತಿನ್ನುವುದರಿಂದ ದೇಹದಲ್ಲಿ ಕಬ್ಬಿನಾಂಶದ ಕೊರತೆ ಆಗುವುದಿಲ್ಲ ಹಾಗೇನೆ ಹಿಮೋಗ್ಲೋಬಿನ್ ಕೂಡ ಹೆಚ್ಚಾಗುವುದಕ್ಕೆ ಇದು ಸಹಾಯವಾಗುತ್ತದೆ.

ಇನ್ನು ಕೆಲವೊಬ್ಬರಿಗೆ ತೂಕ ಹೆಚ್ಚು ಮಾಡಿಕೊಳ್ಳುವ ಹೇಗೆ ಅಂತ ಟೆನ್ಶನ್ ಇರುತ್ತದೆ ಅಲ್ವಾ. ತೂಕ ಹೆಚ್ಚು ಮಾಡಿಕೊಳ್ಳುವುದಕ್ಕೆ ಕೂಡ ಸೀದಾ ಫಲ ಹಣ್ಣು ತುಂಬಾ ಒಳ್ಳೆಯದು ಇದರ ಕ್ಯಾಲೋರಿ ತುಂಬಾನೆ ಜಾಸ್ತಿ ಇರುತ್ತದೆ. ಹಾಗಾಗಿ ನಮ್ಮ ದೇಹಕ್ಕೆ ಎನರ್ಜಿ ಕೂಡ ಕೊಡುತ್ತದೆ ಇದು ತೂಕ ಹೆಚ್ಚಿಸಿಕೊಳ್ಳುವವರಿಗೆ ಕೂಡ ಇದು ತುಂಬಾನೇ ಒಳ್ಳೆಯದು. ಇನ್ನು ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೂ ತುಂಬಾ ಸಹಕಾರಿ ಇದು ಇದರಲ್ಲಿ ಇರುವಂತಹ ವಿಟಮಿನ್ ಸಿ ನಮ್ಮ ದೇಹದಲ್ಲಿ ಯುಮಿನಿಟಿಯನ್ನು ಜಾಸ್ತಿ ಮಾಡುತ್ತದೆ.

ಹಾಗೂ ಇದರಲ್ಲಿ ಇರುವಂತಹ ವಿಟಮಿನ್ ಎ ನಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಕಣ್ಣುಗಳು ಆರೋಗ್ಯವಾಗಿರಬೇಕು ಎಂದರೆ ನಾವು ಸೀತಾಫಲ ಹಣ್ಣನ್ನು ಯಾವಾಗ ಸಿಗುತ್ತದೆ ಅವಾಗ ಬಳಸಬಹುದು.ನಿಮ್ಮ ಕಣ್ಣಿನ ದೃಷ್ಟಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಸೀತಾಫಲ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ. ಮುಖ್ಯವಾಗಿ ಚರ್ಮದ ಮೇಲ್ಭಾಗದಲ್ಲಿ ಕಂಡುಬರುವ ಚರ್ಮದ ದದ್ದುಗಳಿಗೆ ಇದು ಪರಿಹಾರ ಎಂದು ಹೇಳಬಹುದು.

ಸೀತಾಫಲ ಹಣ್ಣಿನ ಸಿಪ್ಪೆ ಕೂಡ ಹುಳುಕು ಹಲ್ಲು ಮತ್ತು ವಸಡುಗಳ ಸಮಸ್ಯೆಗೆ ಪರಿಹಾರ ರೂಪದಲ್ಲಿ ಕೆಲಸ ಮಾಡುತ್ತದೆ. ಸೀತಾಫಲ ಹಣ್ಣು ದೇಹದಲ್ಲಿ ಹೆಚ್ಚಿನ ಶಕ್ತಿಯನ್ನು ಒಮ್ಮೆಲೆ ಉಂಟು ಮಾಡುವ ಗುಣ ಲಕ್ಷಣವನ್ನು ಪಡೆದುಕೊಂಡಿದೆ.

Leave a Reply

Your email address will not be published. Required fields are marked *