ಭಾರತದಲ್ಲಿ ದಾಳಿಂಬೆಯು ಆಯುರ್ವೇದೀಯ ಔಷಧಗಳಲ್ಲಿ ಸಾವಿರಾರು ವರ್ಷಗಳಿಂದ ಬಳಕೆಯಾಗುತ್ತಿದೆ. ಇದರಲ್ಲಿ ವಿಟಮಿನ್ ಬಿ,ಸಿ,ಇ ಹಾಗೂ ಫಾಸ್ಫರಸ್ ಅಂಶ ಹೇರಳವಾಗಿವೆ. ಇದು ಶಕ್ತಿವರ್ಧಕವಾಗಿಯೂ ಕೆಲಸ ಮಾಡುತ್ತದೆ.

ದಾಳಿಂಬೆಯ ಲಾಭಗಳು: ದಾಳಿಂಬೆ ಹಣ್ಣಿನ ರಸವನ್ನು ದಿನವೂ ಸೇವಿಸುವುದರಿಂದ ಪಿತ್ತ ನಿವಾರಣೆಯಾಗುತ್ತದೆ. ದಾಳಿಂಬೆ ಹಣ್ಣಿನ ಸಿಪ್ಪೆಯ ಕಷಾಯ ತಯಾರಿಸಿ ಕುಡಿಯುವುದರಿಂದ ಆಮ ಶಂಕೆಯು ನಿವಾರಣೆಯಾಗುತ್ತದೆ. ದಾಳಿಂಬೆ ಹೂಗಳನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಒಣಕೆಮ್ಮು ವಾಸಿಯಾಗುತ್ತದೆ.

ದಾಳಿಂಬೆ ಎಲೆಯ ರಸ ತೆಗೆದು ಸಕ್ಕರೆ ಬೆರೆಸಿ ಕುಡಿಯುವುದರಿಂದ ಬಿಕ್ಕಳಿಕೆ ಶಮನವಾಗುತ್ತದೆ. ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು ಸುಟ್ಟ ಗಾಯಗಳಿಗೆ ಲೇಪಿಸುವುದರಿಂದ ಉರಿಶಮನವಾಗುತ್ತದೆ. ದಾಳಿಂಬೆ ಗಿಡದ ಬೇರಿನ ಪುಡಿಯ ಕಷಾಯ ತಯಾರಿಸಿ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಜಂತು ಹುಳು ನಾಶವಾಗುತ್ತವೆ.

ದಾಳಿಂಬೆಯ ಚಿಗುರೆಲೆಗಳ ರಸದೊಂದಿಗೆ ಅತ್ತಿಮರದ ಚಿಗುರೆಲೆಗಳ ರಸ ಬೆರೆಸಿ ಮೂಗಿಗೆ ಬಿಡುವು­ದರಿಂದ ಮೂಗಿ­ನಿಂದಾ­ಗುವ ರಕ್ತಸ್ರಾವ ನಿಲ್ಲುತ್ತದೆ. ವಸಡಿನ ರಕ್ತಸ್ರಾವವನ್ನು ತಡೆಯಲೂ ಇದನ್ನು ಬಳಸಲಾಗುತ್ತದೆ. ದಾಳಿಂಬೆ ಹೂ ಹಾಗೂ ಚಿಗುರೆಲೆಗಳ ಕಷಾಯದಿಂದ ಆಗಾಗ ಬಾಯಿ ಮುಕ್ಕಳಿಸುತ್ತಿದ್ದರೆ ಬಾಯಿಹುಣ್ಣು, ಗಂಟಲು ನೋವು ಬೇಗನೇ ವಾಸಿಯಾಗುತ್ತದೆ.

ಸ್ತನ ಕ್ಯಾನ್ಸರ್: ದಾಳಿಂಬೆ ಹಣ್ಣುಗಳು ಸ್ತನ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಿ ಆರೋಗ್ಯಕರ ಕೋಶಗಳನ್ನು ಮಾತ್ರ ಉಳಿಸುತ್ತದೆ ಎಂದು ಇಸ್ರೇಲ್ ವೈದ್ಯರು ಕಂಡುಹಿಡಿದಿದ್ದಾರೆ. ಸ್ತನ ಕ್ಯಾನ್ಸರ್ ಆಗುವುದನ್ನು ಕೂಡ ದಾಳಿಂಬೆ ತಪ್ಪಿಸುತ್ತದೆ.

ದಂತಕ್ಷಯ: ದಾಳಿಂಬೆ ಹಣ್ಣಿನ ರಸ ಹಲ್ಲು ಮತ್ತು ವಸಡುಗಳನ್ನು ಆರೋಗ್ಯಕರವಾಗಿ ಇಡಲು ಬಲು ಸಹಕಾರಿ.

ರಕ್ತದೊತ್ತಡ ಎರಡು ವಾರಗಳ ಕಾಲ ದಾಳಿಂಬೆ ಜ್ಯೂಸನ್ನು ಪ್ರತಿದಿನ ಹೀರಿದರೆ ರಕ್ತದೊತ್ತಡ ತಾನಾಗೇ ನಿಯಂತ್ರಣಕ್ಕೆ ಬರುತ್ತದೆ.

ಕೊಬ್ಬು: ದಾಳಿಂಬೆ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸುವ ಗುಣ ಹೊಂದಿದೆ. ಆದ್ದರಿಂದ, ನಿಯಮಿತವಾಗಿ ಸೇವಿಸಿದರೆ ಹೃದಯಾಘಾತ ಸಂಭವಿಸುವ ಅಪಾಯ ಕಡಿಮೆ. ಜೊತೆಗೆ ರಕ್ತನಾಳಗಳಲ್ಲಿ ಆಗುವ ಅಡೆತಡೆಗಳನ್ನು ಕೂಡ ಕಡಿಮೆ ಮಾಡುತ್ತದೆ. ಹೀಗಾಗಿ ರಕ್ತ ಸರಾಗವಾಗಿ ಹರಿಯಲು ಅನುಕೂಲವಾಗುತ್ತದೆ.

ಮೆದುಳು: ದಾಳಿಂಬೆ ಹಣ್ಣು ನರದೌರ್ಬಲ್ಯದಿಂದ ರಕ್ಷಣೆ ನೀಡುತ್ತದೆ. ನಿಯಮಿತವಾಗಿ ಸೇವಿಸಿದರೆ ನರಮಂಡಲವನ್ನು ಸದೃಢವಾಗಿ ಇಡುತ್ತದೆ.

Leave a Reply

Your email address will not be published. Required fields are marked *