ನಮಸ್ತೆ ಪ್ರಿಯ ಓದುಗರೇ, ಸನಾತನ ಧರ್ಮದಲ್ಲಿ ದೇಗುಲದಲ್ಲಿ ಪ್ರತಿಷ್ಠಾಪಿಸುವ ಶ್ರೀ ಚಕ್ರಗಳಿಗೆ ವಿಶೇಷವಾದ ಶಕ್ತಿ ಇದೆ ಎಂದು ನಂಬಲಾಗಿದೆ. ಸಾಕ್ಷಾತ್ ಪಾರ್ವತಿ ದೇವಿಯು ಶ್ರೀ ಚಕ್ರದಲ್ಲಿ ವಾಸವಾಗಿರುತ್ತಾಳೆ ಎಂದು ಹೇಳಲಾಗುತ್ತದೆ. ಹೀಗಾಗಿ ಶ್ರೀ ಚಕ್ರವನ್ನು ಪೂಜಿಸುವ ಭಕ್ತರಿಗೆ ಜಗನ್ಮಾತೆ ಯ ಕೃಪಾ ಕಟಾಕ್ಷ ದೊರಕುತ್ತದೆ ಎನ್ನುವ ನಂಬಿಕೆ ಇದೆ. ಸಾಮಾನ್ಯವಾಗಿ ಜಗನ್ಮಾತೆಯ ಸನ್ನಿಧಾನದಲ್ಲಿ ಶ್ರೀ ಚಕ್ರವನ್ನು ಇಟ್ಟು ಪೂಜೆ ಮಾಡುವುದನ್ನು ನೋಡಿರುತ್ತೇವೆ ಆದ್ರೆ ಯಾವತ್ತಾದರೂ ಶ್ರೀ ಚಕ್ರವನ್ನು ಶಿವನ ಲಿಂಗದ ಮೇಲೆ ಕೆತ್ತಿ ಪೂಜೆ ಮಾಡುವುದನ್ನು ನೋಡಿದ್ದೀರಾ? ಬನ್ನಿ ಇವತ್ತಿನ ಲೇಖನದಲ್ಲಿ ಶ್ರೀ ಚಕ್ರದ ಮಂತ್ರಗಳಿಂದ ಪೂಜೆಗೊಳ್ಳುತ್ತಿರುವ ಶಿವನ ಅಪರೂಪದ ಸನ್ನಿಧಾನವನ್ನು ದರ್ಶನ ಮಾಡಿ ಪುನೀತರಾಗೊಣ. ಪುರಾಣ ಹಾಗೂ ಇತಿಹಾಸದ ಗತ ವೈಭವದ ಕುರುಹು ಆಗಿರುವ ಆನೆಗುಂದಿಯಲ್ಲಿ ಪುರಾತನವಾದ ಶಿವನ ಆಲಯ ಇದ್ದು, ಈ ದೇಗುಲವನ್ನು ತುಂಗಭದ್ರಾ ನದಿಯ ತಟದ ಮೇಲೆ ನಿರ್ಮಿಸಲಾಗಿದೆ.

 

ರಾಮಾಯಣ ಕಾಲದಲ್ಲಿ ಕಿಷ್ಕಿಂಧೆ ಎಂದು ಕರೆಯುತ್ತಿರುವ ಈ ಸ್ಥಳದಲ್ಲಿ ಮಹರ್ಷಿ ಒಬ್ಬರು ಶಿವನ ಲಿಂಗವನ್ನು ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ. ಶಿವ ಹಾಗೂ ಶಕ್ತಿ ಒಂದೇ ಎನ್ನುವ ಸಂದೇಶವನ್ನು ಈ ಆಲಯವು ಜಗತ್ತಿಗೆ ಸಾರುತ್ತಾ ಇದೆ. ಇಲ್ಲಿರುವ ಶಿವನ ಲಿಂಗದ ಮೇಲೆ ಶ್ರೀ ಚಕ್ರವನ್ನು ಕೆತ್ತಿರು ವೂದು ಈ ಕ್ಷೇತ್ರದ ಖ್ಯಾತಿಗೆ ಕಾರಣವಾಗಿದೆ. ತಾಯಿ ಅನ್ನಪೂರ್ಣೇಶ್ವರಿ, ಪರಮೇಶ್ವರ ಹಾಗೂ ನಂದಿಯನ್ನು ಒಂದೇ ಕಡೆ ಪ್ರತಿಷ್ಠಾಪಿಸಲಾಗಿದೆ. ಇಲ್ಲಿಗೆ ಹೋದರೆ ಪಾರ್ವತಿ ಪರಮೇಶ್ವರ ರನ್ನು ಒಟ್ಟಿಗೆ ಕಣ್ಣು ತುಂಬಿಕೊಳ್ಳಬಹುದು. ಸಾಮಾನ್ಯವಾಗಿ ಶಿವನ ಆಲಯದಲ್ಲಿ ಕಪ್ಪು ವರ್ಣದ ಶಿವನ ಲಿಂಗವನ್ನು ಪ್ರತಿಷ್ಠಾಪಿಸಿರುವ ದನ್ನೂ ನೋಡಿರುತ್ತೇವೆ ಆದ್ರೆ ಈ ಸ್ಥಳದಲ್ಲಿ ಲಿಂಗದ ಮೇಲೆ ಶ್ರೀ ಚಕ್ರವನ್ನು ಕೆತ್ತಿರುವ ಧನ್ನು ಅತ್ಯಂತ ಹತ್ತಿರದಿಂದ ನೋಡಬಹುದು. ಇಲ್ಲಿಗೆ ಬಂದು ಭಗವಂತನನ್ನು ಭಕ್ತಿಯಿಂದ ಬೇಡಿಕೊಂದರೆ ಸಕಲವೂ ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಇಲ್ಲಿನ ಶ್ರೀ ಚಕ್ರ ರಾಜಯೋಗ, ಕರ್ಮಯೋಗ, ಭಕ್ತಿಯೋಗ ಹಾಗೂ ಬೀಜಾಕ್ಷರ ಮಂತ್ರಗಳಿಂದ ಕೆತ್ತಲಾಗಿದೆ. ಈ ರೀತಿಯ ಶ್ರೀ ಚಕ್ರವನ್ನು ಕೆತ್ತಿರುವ ಶಿವಲಿಂಗವನ್ನು ಬೇರೆಲ್ಲೂ ನೋಡುವುದಕ್ಕೆ ಸಾಧ್ಯವಿಲ್ಲ ಎಂದೇ ಹೇಳಬಹುದು. ಇಲ್ಲಿನ ದೇವರಿಗೆ ನಿತ್ಯ ಅಭಿಷೇಕ ಸಹಿತ ಪೂಜೆಯನ್ನು ಮಾಡಲಾಗುತ್ತದೆ. ಕಲ್ಲಿನಿಂದ ನಿರ್ಮಿಸಿರುವ ದೇಗುಲದ ಒಳಗಡೆ ಬಗೆ ಬಗೆಯ ಉಬ್ಬು ಶಿಲ್ಪಗಳ ಕೆತ್ತನೆಯನ್ನು ನೋಡಬಹುದು.

 

ಅಲ್ಲದೆ ಈ ದೇವಾಲಯದ ಸಮೀಪದಲ್ಲಿ ರಾಮಾಯಣ ಕಾಲದ ಶ್ರೀರಾಮನು ಹನುಮಂತ ಸುಗ್ರೀವನನ್ನು ಭೇಟಿಯಾದ ಸ್ಥಳ, ಶ್ರೀರಾಮನು ವಾಲಿಯನ್ನು ಕೊಂದ ಗುಹೆಯನ್ನು ನೋಡಬಹುದು. ಪ್ರತಿ ವರ್ಷ ಶಿವರಾತ್ರಿಯಂದು ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಈ ಪುಣ್ಯ ಸ್ಥಳವನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ತಮ್ಮ ಇಷ್ಟಾನುಸಾರ ಪೂಜೆಯನ್ನು ಮಾಡುತ್ತಾರೆ. ಈ ಪುಣ್ಯ ಕ್ಷೇತ್ರವೂ ಕೊಪ್ಪಳ ಜಿಲ್ಲೆಯ ಆನೆಗುಂದಿ ಎಂಬ ಸ್ಥಳದಲ್ಲಿದೆ. ಪುರಾತನವಾದ ಈ ಆಲಯವು ರಾಜಧಾನಿ ಬೆಂಗಳೂರಿನಿಂದ 357 ಕಿಮೀ, ಬಳ್ಳಾರಿಯಿಂದ 67 ಕಿಮೀ, ಹೊಸಪೇಟೆ ಇಂದ 27 ಕಿಮೀ, ಕೊಪ್ಪಳದಿಂದ 41 ಕಿಮೀ ದೂರದಲ್ಲಿದೆ. ಹೊಸಪೇಟೆ ಉತ್ತಮವಾದ ರಸ್ತೆ ಹಾಗೂ ರೈಲ್ವೇ ಸಂಪರ್ಕವನ್ನು ಹೊಂದಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಅಪರೂಪದ ದೇಗುಲವನ್ನು ದರ್ಶನ ಮಾಡಿ ಕೃತಾರ್ಥ ಆಗಿ. ಶುಭದಿನ.

Leave a Reply

Your email address will not be published. Required fields are marked *