ನಮಸ್ತೆ ಪ್ರಿಯ ಓದುಗರೇ, ಸ್ನೇಹಿತರೆ ಸನಾತನ ಶ್ಲೋಕಗಳಲ್ಲಿ ಲೋಕಾಭಿರಾಮ ರಣರಂಗ ಧೀರಂ, ರಾಜೀವ ನೇತ್ರಂ ರಘುವಂಶ ನಾಥo, ಕಾರುಣ್ಯ ರೂಪಂ ಕರುಣಾ ಕರಂತಂ, ಶ್ರೀರಾಮ ಚಂದ್ರಮ್ ಶರಣಂ ಪ್ರಪದ್ಯೇ. ಎಂದು ಸ್ತುತಿಸುವ ಶ್ರೀರಾಮ ಪ್ರಭುವು ಭೂಮಿಯ ಮೇಲೆ ಅವತರಿಸಿದ ದಿನವನ್ನು ಶ್ರೀರಾಮ ನವಮಿ ಎಂದು ಆಚರಿಸಲಾಗುತ್ತದೆ. ಈ ಶುಭ ದಿನದಂದು ದೇಶದೆಲ್ಲೆಡೆ ರಾಮನ ವಿಗ್ರಹಕ್ಕೆ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವುದರ ಜೊತೆಗೆ ಪಾನಕ ಕೋಸಂಬರಿ ಹಂಚಲಾಗುತ್ತದೆ. ಬನ್ನಿ ಇವತ್ತಿನ ಲೇಖನದಲ್ಲಿ ರಾಮನವಮಿ ಹಬ್ಬದ ಆಚರಣೆ ಕುರಿತು ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಮಹಾವಿಷ್ಣುವಿನ 7 ನೇ ಅವತಾರವಾದ ಶ್ರೀರಾಮನು ಸ್ಮಿತಾ ಚೈತ್ರ ಮಾಸದ ಒಂಭತ್ತನೇ ದಿನ ವನ್ನೂ ಶ್ರೀರಾಮ ನವಮಿ ಎಂದು ಆಚರಿಸಲಾಗುತ್ತದೆ. ಧರ್ಮ ಶಾಸ್ತ್ರಗಳ ಪ್ರಕಾರ ಚೈತ್ರ ಮಾಸದ ಪುಷ್ಯ ನಕ್ಷತ್ರದ ಕರ್ಕಾಟಕ ನಕ್ಷತ್ರದಲ್ಲಿ ಶ್ರೀರಾಮಚಂದ್ರನ ಜನನ ಆಯಿತು ಎಂದು ಹೇಳಲಾಗುತ್ತದೆ. ಈ ದಿನ ಯಾರು ಭಕ್ತಿಯಿಂದ ಶ್ರೀರಾಮನನ್ನು ಪೂಜಿಸುತ್ತಾರೆ ಅವರ ಸಂಕಷ್ಟಗಳು ಎಲ್ಲವೂ ದೂರವಾಗಿ ಬದುಕಿನಲ್ಲಿ ಸಂತೋಷ, ಸಮೃದ್ಧಿ ತುಂಬುತ್ತದೆ ಎನ್ನುವ ನಂಬಿಕೆ ಕೂಡ ಇದೆ. ಅಲ್ಲದೆ ಶ್ರೀರಾಮ ನವಮಿಯಂದು ಉಪವಾಸ ಮಾಡಿ ಶ್ರೀರಾಮಚಂದ್ರ ನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಮನದ ಇಷ್ಟಾರ್ಥಗಳು ಎಲ್ಲವೂ ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ.

ಸಾಕಷ್ಟು ಜನ ರಘುನಂದನನ ಜನನದ ಸಂಕೇತವಾಗಿ ಪಾನಕ, ಕೋಸಂಬರಿ ಹಂಚಲಾಗುತ್ತದೆ. ಹಲವಾರು ಕಡೆ ರಾಮನ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆಯನ್ನು ಮಾಡಲಾಗುತ್ತದೆ. ಇನ್ನೂ ರಾಮನವಮಿಯಂದು ಯಾರು ಶ್ರೀರಾಮ ನಾಮವನ್ನು ಬೇರೆಯುತ್ತರೋ, ಅಥವಾ ಸ್ತುತಿಸುತ್ತಾರೆ ಅವರನ್ನು ಶ್ರೀರಾಮ ಎಲ್ಲಾ ಕಾಲದಲ್ಲಿ ರಕ್ಷಿಸುತ್ತಾನೆ ಎಂಬ ರಾಮ ಭಕ್ತರಲ್ಲಿ ಮನೆ ಮಾಡಿದ್ದು, ಈ ದಿನ ಕನಿಷ್ಟ ಒಂಭತ್ತು ಬಾರಿ ಆದರೂ ಶ್ರೀರಾಮ ನಾಮ ಬರೆಯಬೇಕು ಎಂದು ಹೇಳಲಾಗುತ್ತದೆ. ರಾಮ ಎನ್ನುವ ಏರೆಡಕ್ಷರದಲ್ಲಿ ಮಹತ್ವಪೂರ್ಣ ಆರ್ಥವಿದ್ದು, ರಾಮ ನಾಮ ಸ್ಮರಣೆಯಿಂದ ಕಪಿ ಸೈನ್ಯ ಸೇತುವೆಯನ್ನು ಕಟ್ಟಿದರು. ರಾಮ ನಾಮ ಶಕ್ತಿಯಿಂದ ವಾಲ್ಮೀಕಿಗಳು ರಾಮಾಯಣವನ್ನು ರಚಿಸಿದರು. ಶ್ರೀರಾಮ ಸ್ಮರಣೆಯಿಂದ ಶಬರಿಗೂ ಮೋಕ್ಷ ದೊರಕಿತು, ಅಹಲ್ಯೆ ತನ್ನ ಶಾಪದಿಂದ ವಿಮೋಚನೆ ಪಡೆದಳು. ಹೀಗಾಗಿ ಯಾರು ರಾಮನಾಮವನ್ನು ಜಪಿಸುತ್ತರೋ ಅವರ ಪಾಪಗಳು ತೊಳೆದು ಹೋಗುತ್ತವೆ ಎಂದು ಹೇಳಲಾಗುತ್ತದೆ. ರಾಮ ನಾಮ ಸ್ಮರಣೆಯಿಂದ ಎಲ್ಲಾ ನಕಾರಾತ್ಮಕ ತೆ ದೂರವಾಗಿ ಧನಾತ್ಮಕ ಶಕ್ತಿ ಪ್ರವಹಿಸುತ್ತದೆ. ಅಲ್ಲದೆ ನಿತ್ಯವೂ ರಾಮ ನಾಮ ಜಪ ಮಾಡಿದರೆ, ವ್ಯಕ್ತಿಯ ಮಾನಸಿಕ ಒತ್ತಡ ಕಡಿಮೆ ಆಗಿ, ಮನಸ್ಸಿಗೆ ಶಾಂತಿ ದೊರಕುತ್ತದೆ.

ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ರಾಮನಾಮದ ಸ್ಮರಣೆ ಇಂದ ನಮ್ಮ ದೇಹದಲ್ಲಿ ಆಂತರಿಕ ಕಂಪನಗಳು ಉಂಟಾಗಿ ವ್ಯಕ್ತಿಯ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಚಿತ್ತ ಕ್ಲೇಶಗಳು ತೊರೆದು ಮನಸ್ಸು ಶಾಂತಿಯಿಂದ ಆನಂದವನ್ನು ತೆಳೆಯುತ್ತದೆ ಎನ್ನಲಾಗುತ್ತದೆ. ಈ ಹಬ್ಬದಂದು ಪಾನಕ ಕೋಸಂಬರಿ ಹಂಚುವುದರ ಹಿಂದೆ ಧಾರ್ಮಿಕ ಕಾರಣ ಅಲ್ಲದೆ ವೈಜ್ಞಾನಿಕ ಕಾರಣ ಇದೆ. ರಾಮನವಮಿಯು ಚೈತ್ರ ಮಾಸದಲ್ಲಿ ಬರುವುದರಿಂದ ಈ ಸಮಯದಲ್ಲಿ ಬಿಸಿಲಿನ ಝಳ ಹೆಚ್ಚಿರುತ್ತದೆ ಹೀಗಾಗಿ ನಮ್ಮ ದೇಹದ ಉಷ್ಣತೆಯನ್ನು ಹತೋಟಿಯಲ್ಲಿ ಇಡಲು ಪಾನಕ ಕೋಸಂಬರಿ ಅಂತಹ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂಬ ಕಾರಣದಿಂದ ನಮ್ಮ ಪೂರ್ವಿಕರು ಹಬ್ಬದ ದಿನವಾದರೂ ಭಕ್ತಿಯ ಹೆಸರಿನಲ್ಲಿ ಆರೋಗ್ಯಕಾರಿ ಪದಾರ್ಥಗಳನ್ನು ಸೇವಿಸಲಿ ಎಂಬ ಕಾರಣದಿಂದ ರಾಮನವಮಿಗೆ ಪಾನಕ ಕೋಸಂಬರಿ ಹಂಚುವ ಪರಿಪಾಠವನ್ನು ರೂಢಿಸಿಕೊಂಡು ಬಂದಿದ್ದಾರೆ. ದೇಶದೆಲ್ಲೆಡೆ ಯಾವ ಜಾತಿ ಮತ ಭೇದವಿಲ್ಲದೆ ಎಲ್ಲರೂ ರಾಮನವಮಿಯಂದು ಪಾನಕ ಕೋಸಂಬರಿ ಹಂಚುವ ಈ ಹಬ್ಬವು ಸಾಮರಸ್ಯದಿಂದ ಜೊತೆಗಿರುವ ಪರಿಪಾಠ ಸಾರುತ್ತಿದೆ. ನೀವು ಒಂದುವೇಳೆ ರಾಮನಾಮನ ಸನ್ನಿಧಿಗೆ ಹೋಗಲು ಸಾಧ್ಯವಾಗದೆ ಹೋದರೆ, ಕುಳಿತ ಸ್ಥಳದಿಂದ ಶ್ರೀರಾಮನ ನಾಮ ಜಪಿಸಿದರೋ ಶ್ರೀರಾಮನ ಅನುಗ್ರಹ ದೊರಕುತ್ತದೆ ಎನ್ನುವ ನಂಬಿಕೆ ಕೂಡ ಇದೆ. ಸಾಧ್ಯವಾದರೆ ಶ್ರೀರಾಮಚಂದ್ರನು ಜನಿಸಿದ ಈ ಪುಣ್ಯ ದಿನದಂದು ನೀವು ಕೂಡ ರಾಮ ನಾಮವನ್ನು ಜಪಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಿ. ಶುಭದಿನ.

Leave a Reply

Your email address will not be published. Required fields are marked *