ನಮಸ್ತೆ ಪ್ರಿಯ ಓದುಗರೇ, ಲಕ್ಷಾಂತರ ಜನರಿಗೆ ನೆಲೆಯನ್ನು ಕಲ್ಪಿಸಿರುವ ಬೆಂಗಳೂರನ್ನು ಉದ್ಯಾನ ನಗರಿ, ಸಿಲಿಕಾನ್ ಸಿಟಿ ಎಂಬೆಲ್ಲ ಹೆಸರಿನಿಂದ ಕರೆಯಲಾಗುತ್ತದೆ. ಉದ್ಯಾನ ನಗರಿ ಇಂದ ತಕ್ಷಣ ನೆನ್ಪಾಗೋದು ಐಟಿ ಬಿಟಿ ಕಂಪನಿಗಳು ಎತ್ತರವಾದ ಕಟ್ಟಡಗಳು . ಆದ್ರೆ ಕೆಂಪೇಗೌಡರು ನಿರ್ಮಿಸಿದ ಬೆಂದ ಕಾಳೋರಿನಲ್ಲಿ ಕೇವಲ ಕಟ್ಟಡಗಳು ಮಾತ್ರ ಇಲ್ಲ. ಈ ಊರಿನಲ್ಲಿ ಅದೆಷ್ಟೋ ದೇವಾಲಯ ಕೂಡ ಇದಾವೆ. ಬನ್ನಿ ಹಾಗಾದರೆ ಇವತ್ತಿನ ಲೇಖನದಲ್ಲಿ ಬೆಂಗಳೂರಿನ ಐತಿಹಾಸಿಕ ಕ್ಷೇತ್ರದ ದರ್ಶನ ಮಾಡಿ ಕೃತಾರ್ಥ ಆಗೋಣ. ಆರ್ ಆರ್ ನಗರ ಅಥವ ರಾಜರಾಜೇಶ್ವರಿ ನಗರ ಎಂಬ ಹೆಸರಿನಿಂದ ಕರೆಯುವ ಸ್ಥಳದಲ್ಲಿ ಆದಿ ಶಕ್ತಿ ಜಗನ್ಮಾತೆ ರಾಜರಾಜೇಶ್ವರಿ ಆಗಿ ಪ್ರತಿಷ್ಠಾಪನೆ ಆಗಿರುವ ಸುಂದರವಾದ ಆಲಯ ಇದ್ದು, ಈ ದೇಗುಲವನ್ನು ತಿರುಚಿ ಎಂಬ ಸ್ವಾಮಿಗಳು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಗೋಪುರ, ಕಮಾನು, ಪ್ರದಕ್ಷಿಣಾ ಪಥ, ಮುಖ ಮಂಟಪ, ಗರ್ಭ ಗೃಹ ಒಳಗೊಂಡಿರುವ ಈ ಸುಂದರವಾದ ಆಲಯವನ್ನು ಸಂಪೂರ್ಣವಾಗಿ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇಗುಲದ ಪ್ರಮುಖ ಆಕರ್ಷಣೆ ಆಗಿ ರಾಜರಾಜೇಶ್ವರಿ ದೇವಿಯು ಕಂಗೊಳಿಸುತ್ತಿ ದ್ದಾಳೆ.

ಸುಮಾರು 6 ಅಡಿ ಉದ್ದವಿರುವ ಅಮ್ಮನವರು ಕಪ್ಪು ವರ್ಣದ ಶಿಲೆಯಲ್ಲಿ ಸಿಂಹ ವಾಹನದ ಮೇಲೆ ಕುಳಿತು ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ. ಈ ದೇಗುಲದಲ್ಲಿ ಆದಿಶಕ್ತಿ ಜಗನ್ಮಾತೆ ಜೊತೆಗೆ ನಾಗನಾಥನ ಮೂರ್ತಿಯನ್ನು ಸಹ ಪ್ರತಿಷ್ಠಾಪನೆ ಮಾಡಿದ್ದು, ಅರಿಶಿನ ಕುಂಕುಮ ದಲ್ಲಿ ಕಂಗೊಳಿಸುವ ನಾಗ ದೇವರ ವಿಗ್ರಹ ನೋಡ್ತಾ ಇದ್ರೆ ಮನಸ್ಸು ಧನ್ಯ ಆಗುತ್ತೆ. ವಿದ್ಯಾಭ್ಯಾಸ ಸಮಸ್ಯೆ, ವಿವಾಹ ವಿಳಂಬ ಸಮಸ್ಯೆ ಇಂದ ಬಳಲುವವರು ಈ ದೇಗುಲಕ್ಕೆ ಬಂದು ತಾಯಿಗೆ ರಾಹು ಕಾಲದಲ್ಲಿ ನಿಂಬೆ ಹಣ್ಣಿನ ದೀಪವನ್ನು ಬೆಳಗಿ ಪೂಜೆ ಮಾಡಿಸುವುದರಿಂದ ಅವರ ಸಮಸ್ಯೆಗಳು ಶೀಘ್ರವಾಗಿ ದೂರವಾಗಿ ಬದುಕಿನಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಅದ್ರಲ್ಲಿ ಮಂಗಳವಾರ ಶುಕ್ರವಾರ ದಿನದಂದು ಈ ದೇವಿಗೆ ರಾಹು ಕಾಲದಲ್ಲಿ ನಿಂಬೆ ಹಣ್ಣಿನ ದೀಪವನ್ನು ಬೆಳಗುವುದರ ರಿಂದ ವಿಶೇಷ ಫಲಗಳು ದೊರೆಯುತ್ತವೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ಅಚಲವಾದ ನಂಬಿಕೆ ಆಗಿದೆ. ಇನ್ನೂ ಈ ದೇಗುಲದ ಗೋಪುರದ ಮೇಲೆ ಚಿತ್ರಿಸಿರುವ ದೇವ ದೇವತೆಗಳ ಉಬ್ಬು ಶಿಲ್ಪಗಳು ದೇಗುಲದ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತದೆ. ವಿಶೇಷ ಸಂದರ್ಭದಲ್ಲಿ ದೇಗುಲವನ್ನು ದೀಪಗಳಿಂದ ಅಲಂಕಾರ ಮಾಡಲಾಗುತ್ತದೆ. ಪ್ರತಿ ವರ್ಷ ದೇವಿಯ ವರ್ದಂತಿ ಮಹೋತ್ಸವ ವನ್ನಾ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಚಂಡಿಕಾ ಹೋಮ ಕೂಡ ನಡೆಸಲಾಗುತ್ತದೆ.

ಇವಿಷ್ಟೂ ಮಾತ್ರವಲ್ಲದೆ ನವರಾತ್ರಿಯ ಒಂಭತ್ತು ದಿನಗಳು ದೇವಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಿ ದೇವಿಯನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ. ತನ್ನ ಬಳಿ ಯಾರೇ ಬಂದು ಏನನ್ನೇ ಬೇಡಿದರೂ ರಾಜರಾಜೇಶ್ವರಿ ನೆರವೇರಿಸುತ್ತಾರೆ ಎನ್ನುವುದು ಈ ದೇಗುಲದ ಪ್ರಖ್ಯಾತಿಗೆ ಕಾರಣ ಆಗಿದೆ. ನಿತ್ಯ ಶೈವಾಗಮನ ಪದ್ಧತಿಯಲ್ಲಿ ಪೂಜೆಯನ್ನು ಮಾಡಲಾಗುತ್ತದೆ. ಪ್ರತಿ ದಿನ ಸಾರ್ವಂಕೃತ ಭೋಷಿಥೆ ಆಗಿ ಕಂಗೊಳಿಸುವ ಈ ದೇವಿಯನ್ನು ನೋಡ್ತಾ ಇದ್ರೆ ಮನದಲ್ಲಿ ಭಕ್ತಿಯ ಸಿಂಚನ ಆಗುತ್ತೆ. ಇನ್ನೂ ಅತ್ಯಂತ ವಿಶಾಲ ಹಾಗೂ ಪ್ರಶಾಂತವಾದ ವಾತಾವರಣದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವನ್ನು ಬೆಳಿಗ್ಗೆ 10.30 ರಿಂದ ಮಧ್ಯಾನ 12.30 ಸಂಜೆ 6 ರಿಂದ ರಾತ್ರಿ 7.30 ರ ವರೆಗೆ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವಿಗೆ ನಂದಾದೀಪ ಸೇವೆ, ಕುಂಕುಮಾರ್ಚನೆ, ಅಲಂಕಾರ ಸೇವೆ, ಚಂಡಿಕಾ ಹೋಮ, ಸರ್ವ ಪೂಜೆಗಳನ್ನು ಮಾಡಿಸಬಹುದು. ಆದಿಶಕ್ತಿ ಜಗನ್ಮಾತೆ ರಾಜರಾಜೇಶ್ವರಿ ಎನ್ನುವ ಹೆಸರಿನಿಂದ ನೆಲೆ ನಿಂತ ಈ ಪುಣ್ಯ ಕ್ಷೇತ್ರವೂ ಬೆಂಗಳೂರಿನ ಹೊರ ವಲಯದ ರಾಜರಾಜೇಶ್ವರಿ ಬಡಾವಣೆ ಅಲ್ಲಿದೆ. ಮೆಜೆಸ್ಟಿಕ್ ಇಂದ ಈ ದೇವಾಲಯವು ಕೇವಲ 10 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ಅನೇಕ ರೀತಿಯ ವೈಶಿಷ್ಟ್ಯ ಇರುವ ಈ ದೇವಿಯ ದರ್ಶನ ಮಾಡಿ ಪುನೀತರಾಗಿ. ಶುಭದಿನ

Leave a Reply

Your email address will not be published. Required fields are marked *