ನಮ್ಮ ಹಿಂದೂ ಧರ್ಮದಲ್ಲಿ ನಾವು ಕುಂಕುಮ ಹಚ್ಚಿಕೊಳ್ಳುವುದನ್ನು ಬಹಳಷ್ಟು ಶ್ರೇಷ್ಠ ಎಂದು ಹೇಳುತ್ತೇವೆ. ಆದರೆ ಕೆಲವೊಮ್ಮೆ ನಮ್ಮಲ್ಲಿ ನಿಮ್ಮಲ್ಲಿ ಕೆಲವಿಷ್ಟು ಗೊಂದಲಗಳು ಇರುತ್ತವೆ, ಕುಂಕುಮವನ್ನು ಯಾವ ಬೆರಳಿನಿಂದ ಹಚ್ಚಿಕೊಳ್ಳಬೇಕು ಎಂಬುದು ನಮ್ಮಲ್ಲಿ ನಿಮ್ಮಲ್ಲಿ ಇರುವಂತಹ ಕುತೂಹಲಗಳು ಗೊಂದಲಗಳು ನಮ್ಮ ಸನಾತನಯಲ್ಲಿ ಕುಂಕುಮವನ್ನು ಹಣೆಗೆ ಇಟ್ಟುಕೊಳ್ಳುವುದು ನಮ್ಮ ಸಂಪ್ರದಾಯವಾಗಿದೆ.

ಮಹಿಳೆಯರು ತನ್ನ ಗಂಡನ ಕ್ಷೇಮಕ್ಕಾಗಿ ಹಣದ ಸೌಭಾಗ್ಯಕ್ಕಾಗಿ ಕುಂಕುಮವನ್ನು ಹಚ್ಚುತ್ತಾರೆ ಇನ್ನು ಸಾಮಾನ್ಯವಾಗಿ ಭಕ್ತರು ಪೂಜೆಯನ್ನು ಆರಾಧಿಸುತ್ತಾರೆ ಹಾಗೂ ತಪ್ಪದೆ ಹಣೆಗೆ ಕುಂಕುಮವನ್ನು ಹಚ್ಚುತ್ತಾರೆ ಇನ್ನು ನಮ್ಮ ಧರ್ಮದಲ್ಲಿ ದೇವರಿಗೆ ಕುಂಕುಮವನ್ನು ಮತ್ತು ಅರಿಶಿಣದ ಅರ್ಚನೆಯನ್ನು ಮಾಡಿಸಿ ಪೂಜೆಯನ್ನು ಮಾಡಿಸಿ ದೇವಾಲಯದಲ್ಲಿ ದೇವರ ದರ್ಶನವನ್ನು ಮಾಡುತ್ತಾರೆ.

ಇದು ನಮಗೂ ನಿಮಗೂ ತಿಳಿದುಬಂದುವಂತಹ ಸಂಗತಿ. ನಾವು ಯಾವುದೇ ಒಂದು ದೇವಸ್ಥಾನಕ್ಕೆ ಭೇಟಿ ನೀಡಿದರು ಸಹ ಅಲ್ಲಿ ನಾವು ಕುಂಕುಮವನ್ನು ಅರ್ಚನೆ ಮಾಡುವುದು ಹಾಗೆ ಆ ಕುಂಕುಮವನ್ನು ನಮ್ಮ ಹಣೆಯ ಮೇಲೆ ಇಟ್ಟುಕೊಳ್ಳುವುದು ಸರ್ವೇಸಾಮಾನ್ಯ ಇದನ್ನು ನಮ್ಮ ಇಡೀ ಭಾರತ ಜನರೇ ಪಾಲಿಸುತ್ತಾರೆ ಇನ್ನೂ ಶಿವಭಕ್ತರು ಇದನ್ನು ಧರಿಸಿದರೆ ಕೆಲವು ನಾವುಗಳನ್ನು ಧರಿಸುತ್ತಾರೆ ಸಾಮಾನ್ಯವಾಗಿ ಕುಂಕುಮವನ್ನು ಉಂಗುರದ ಬೆರಳಿನಿಂದ ಹಚ್ಚುತ್ತಾರೆ.

ಅದು ನಿಮಗೂ ನಮಗೂ ಗೊತ್ತು ಆದರೆ ಯಾವ ಬೆರಳಿನಿಂದ ತಿಲಕವನ್ನು ಇಟ್ಟುಕೊಂಡರೆ ಏನು ಫಲಿತಾಂಶ ಸಿಗುತ್ತವೆ ಎನ್ನುವುದನ್ನು ತಿಳಿಸಿಕೊಳ್ಳುತ್ತೇವೆ. ಮೊದಲನೆಯದಾಗಿ ಹಿಂದೂ ಶಾಸ್ತ್ರದ ಪ್ರಕಾರ ಮಧ್ಯದ ಬೆರಳು ಇದು ಶನಿ ಗ್ರಹದ ಸ್ಥಾನವಾಗಿದೆ ಈ ಗ್ರಹ ನಮಗೆ ಯಶಸ್ಸನ್ನು ಕೊಡುತ್ತದೆ ಮಧ್ಯದ ಬೆರಳಿನಿಂದ ತಿಲಕವನ್ನು ಹಚ್ಚಿಕೊಳ್ಳುವುದರಿಂದ ನಮ್ಮ ಆಯಸ್ಸು ವೃದ್ಧಿ ಆಗುತ್ತದೆ.

ಹಾಗಾಗಿ ಮಧ್ಯದ ಬೆರಳಿನಿಂದ ಕುಂಕುಮವನ್ನು ಇಟ್ಟುಕೊಳ್ಳುವುದು ಉತ್ತಮ ಇದರಿಂದ ಶನಿ ಗ್ರಹದ ದೋಷ ಸ್ವಲ್ಪಮಟ್ಟಿಗಾದರೂ ಕಡಿಮೆಯಾಗುತ್ತದೆ ಇದರಿಂದ ಶನಿ ಸಂತುಷ್ಟನಾಗುತ್ತಾರೆ ಹಾಗಾಗಿ ಮಧ್ಯದ ಬೆರಳಿನಿಂದ ಕುಂಕುಮವನ್ನು ಹಚ್ಚಿಕೊಳ್ಳಬೇಕು ಎಂದು ಹೇಳಲಾಗುತ್ತದೆ ಇನ್ನು ಎರಡನೆಯದಾಗಿ ಉಂಗುರದ ಬೆರಳು ಉಂಗುರದ ಬೆರಳಿನಲ್ಲಿ ಕುಂಕುಮ ಧರಿಸಿದರೆ ಮಾನಸಿಕ ನೆಮ್ಮದಿ ಸಿಗುತ್ತದೆ.

ಯಾಕೆಂದರೆ ಆ ಬೆರಳಿನ ಸ್ಥಾನ ಸೂರ್ಯ ಅವನು ನಮಗೆ ಮಾನಸಿಕ ನೆಮ್ಮದಿಯನ್ನು ಕೊಡುತ್ತಾನೆ ಆದ ಕಾರಣ ಆ ಬೆರಳಿನಿಂದ ತಿಲಕವನ್ನು ಹಚ್ಚಿಕೊಳ್ಳುವುದರಿಂದ ಮನಸ್ಸು ನೆಮ್ಮದಿಯಾಗಿ ಶಾಂತವಾಗಿ ಇರುತ್ತದೆ ಇದರಿಂದ ಸುರಿದ ಶಕ್ತಿ ನಮ್ಮ ದೇಹಕ್ಕೆ ಲಭಿಸುತ್ತದೆ ಈ ರೀತಿ ಉಂಗುರದ ಬೆರಳಿನಿಂದ ಹಚ್ಚಿಕೊಳ್ಳುವುದರಿಂದ ಮನಸ್ಸು ಮನುಷ್ಯ ಬುದ್ಧಿವಂತನಾಗುತ್ತಾನೆ ಎಂದು ನಮ್ಮ ಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಮೂರನೇದಾಗಿ ಹೆಬ್ಬೆರಳು ಹೆಬ್ಬೆರಳಿನಿಂದ ಕುಂಕುಮವನ್ನು ಹಚ್ಚಿಕೊಳ್ಳುವುದು ದೈಹಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಯಾಕೆಂದರೆ ಈ ಬೆರಳಿನ ಸ್ಥಾನ ಶುಕ್ರ ಅವನು ನಿಮಗೆ ಬೆಟ್ಟದಷ್ಟು ಶಕ್ತಿಯನ್ನು ಕೊಡುತ್ತಾನೆ ಹಾಗೂ ನಿಮಗೆ ಉತ್ತಮವಾದ ಆರೋಗ್ಯವನ್ನು ಉತ್ತರಿಸುತ್ತಾನೆ ಹಾಗಾಗಿ ಕುಂಕುಮವನ್ನು ಇಟ್ಟುಕೊಳ್ಳುವುದರಿಂದ ನಾವು ದೈಹಿಕವಾಗಿ ದೃಢತೆಯನ್ನು ಪಡೆದುಕೊಳ್ಳುತ್ತೀರಾ ಇನ್ನೂ ಕೊನೆಯದಾಗಿ ತೋರುಬೆರಳು ಕುಂಕುಮದರಿಸಿದರೆ ಮೋಕ್ಷ ಪ್ರಾಪ್ತಿ ಎಂದು ಹೇಳಬಹುದು.

ತೋರುಬಿರಲಿನಲ್ಲಿ ಗುರು ಹಾಗೂ ಬ್ರಹ್ಮ ಜ್ಞಾನ ನೀಡುತ್ತಾನೆ ಮತ್ತು ನಿಮಗೆ ಮೋಕ್ಷವನ್ನು ನೀಡುತ್ತಾನೆ ಇದರ ಜೊತೆಗೆ ಅತಿ ಮುಖ್ಯವಾಗಿ ಕಷ್ಟಕರವಾದ ಸಮಸ್ಯೆಗಳು ಸಹ ಪರಿಹಾರವನ್ನು ನೀಡುತ್ತಾರೆ ಹಾಗಾಗಿ ಕುಂಕುಮವನ್ನು ಈ ರೀತಿಯಾಗಿ ಹಚ್ಚಿಕೊಳ್ಳುವುದು ಉತ್ತಮ ಎಂದು ಹೇಳುತ್ತದೆ.

Leave a Reply

Your email address will not be published. Required fields are marked *