ನಮಸ್ತೆ ಗೆಳೆಯರೇ ಅಶ್ವಗಂಧ ಗಿಡ ಮೂಲಿಕೆ ಈ ಗಿಡದ ಹೆಸರೇ ಸೂಚಿಸುವ ಹಾಗೆ ಈ ಗಿಡದ ವಾಸನೆಯೇ ಇದಕ್ಕೆ ಕಾರಣ ಎನ್ನಬಹುದು. ಏಕೆಂದರೆ ಅಶ್ವ ಎಂದರೆ ಕುದುರೆ, ಈ ಗಿಡವು ಕುದುರೆಯ ಮೂತ್ರದ ವಾಸನೆಯನ್ನು ಹೊಂದಿರುವ ಕಾರಣ ಆಯುರ್ವೇದದಲ್ಲಿ ಇದಕ್ಕೆ ಅಶ್ವಗಂಧ ಅಂತ ನಾಮಕಾರಣ ಮಾಡಿದ್ದಾರೆ. ನಿಸರ್ಗ ಅನ್ನುವುದು ಒಂದು ಪ್ರಕೃತಿಯ ಕೊಡುಗೆ ಅಂತಾನೆ ಹೇಳಬಹುದು. ನಾವು ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥಗಳು ಒಂದಲ್ಲ ಒಂದು ಔಷಧೀಯ ಗುಣಗಳನ್ನು ಹೊಂದಿರುತ್ತದೆ.

ಅದರಲ್ಲಿ ಗಿಡಮೂಲಿಕೆ ಅನ್ನುವ ಸಸ್ಯಗಳು ಕೂಡ ಬಹುಮುಖ್ಯವಾಗಿ ಪಾತ್ರವನ್ನು ವಹಿಸುತ್ತದೆ ಅದರಲ್ಲಿ ನಿಮಗೆ ಇಂದಿನ ಲೇಖನದಲ್ಲಿ ತಿಳಿಸುವುದಾದರೆ ಅಶ್ವಗಂಧ ಗಿಡ ಮೂಲಿಕೆಯ ಆರೋಗ್ಯಕರ ಗುಣಗಳನ್ನು ವಿಸ್ತಾರವಾಗಿ ತಿಳಿಸಿಕೊಡುತ್ತೇವೆ ಬನ್ನಿ. ಅಶ್ವಗಂಧ ಗಿಡವನ್ನೂ ಹೀರೆಮದ್ದು ಗಿಡ ಅಂತ ಗುರುತಿಸುತ್ತಾರೆ. ಹಿರಿದಾಗಿ ಎಲ್ಲ ಕಾಯಿಲೆಗಳಿಗೆ ಔಷಧಿಯಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ಅದ ಕಾರಣ ಮದ್ದಿಲ್ಲದ ಕಾಯಿಲೆಗೆ ಅಶ್ವಗಂಧ ಗಿಡ ಉತ್ತಮ ಅನ್ನುವ ವಾಡಿಕೆ ಕೂಡ ಇದೆ. ಈ ಗಿಡದ ಪ್ರತಿಯೊಂದು ಭಾಗವಾದ ಕಾಂಡ ಬೇರು ಹೂವು ಹಣ್ಣುಗಳು ಎಲ್ಲವೂ ಒಂದು ಬಗೆಯಲ್ಲಿ ಔಷಧವಾಗಿ ನಮಗೆ ಪ್ರಯೋಜನವನ್ನು ಒದಗಿಸಿ ಕೊಡುತ್ತದೆ.

ಅಶ್ವಗಂಧದ ಸೇವನೆಯಿಂದ ಪುರುಷರಲ್ಲಿ ಚೈತನ್ಯ, ಪೌರುಷ ಮತ್ತು ಹುರುಪು ಹೆಚ್ಚುತ್ತದೆ. ಅಲ್ಲದೇ ಲೈಂಗಿಕ ಸಾಮರ್ಥ್ಯವೂ ಹೆಚ್ಚುವುದನ್ನು ಗಮನಿಸಲಾಗಿದ್ದು ಈ ಗುಣದಿಂದಾಗಿ ಅಶ್ವಗಂಧವನ್ನು ಕಾಮೋತ್ತೇಜಕವಾಗಿಯೂ ಬಳಸಲಾಗುತ್ತಿದೆ. ಅದು ಹೇಗೆ ಅಂದರೆ ಈ ಗಿಡದ ಬೇರನ್ನು ಹಾಲಿನಲ್ಲಿ ಹಾಕಿಕೊಂಡು ಕುದಿಸಿ ಕುಡಿಯುವುದರಿಂದ ನಿಮಗೆ ಸಂತಾನ ಭಾಗ್ಯ ಅನ್ನುವುದು ಲಭಿಸುತ್ತದೆ. ಇದು ನಿಮಗೆ ಅಚ್ಚರಿ ಮೂಡಿಸುವ ವಿಷಯ ಆದರೂ ಕೂಡ ಇದು ಕಟು ಸತ್ಯ ಆಯುರ್ವೇದದಲ್ಲಿ ಇದನ್ನು ಬಂಜೆತನವನ್ನು ಹೋಗಲಾಡಿಸಲು ತುಂಬಾನೇ ಬಳಕೆ ಮಾಡಲಾಗುತ್ತದೆ.

ಮಹಿಳೆಯರಲ್ಲಿ ಹಾರ್ಮೋನ್ ಗಳ ಅಸಮತೋಲನ ಮತ್ತು ಅಂಡಾಣುಗಳ ಕಡಿಮೆ ಪ್ರಮಾಣದಲ್ಲಿ ಬಿಡುಗಡೆ ಆಗುವುದರಿಂದ ಮತ್ತು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದರಿಂದ ಅವರಲ್ಲಿ ಮಕ್ಕಳಾಗುವುದಿಲ್ಲ. ಹೀಗಾಗಿ ಅವರು ತುಂಬಾನೇ ಈ ಸಮಾಜದಲ್ಲಿ ದೋಷಗಳಿಗೆ, ತೊಂದರೆಗೆ ಒಳಗಾಗುತ್ತಾರೆ. ಇಂಥಹ ಸಮಯದಲ್ಲಿ ಮೊದಲಿನ ಕಾಲದ ಜನರು ಈ ಬಂಜೇತನವನ್ನು ಹೋಗಲಾಡಿಸಲು ಅಶ್ವಗಂಧ ಗಿಡ ಮೂಲಿಕೆಗಳನ್ನು ಬಳಕೆ ಮಾಡುತ್ತಿದ್ದರು.

ಅಂದರೆ ಸ್ತ್ರೀ ಮತ್ತು ಪುರುಷರು ಇಬ್ಬರು ಈ ಅಶ್ವಗಂಧ ಗಿಡದ ಚೂರ್ಣವನ್ನು ತಯಾರಿಸಿಕೊಂಡು ಅದನ್ನು ಹಾಲಿನಲ್ಲಿ ಹಾಕಿ ಮೂರು ತಿಂಗಳ ಕಾಲ ಇಬ್ಬರು ಸೇವನೆ ಮಾಡಬೇಕು. ಇದರಿಂದ ಸಂತಾನ ಭಾಗ್ಯ ಲಭಿಸುವ ಸಾಧ್ಯತೆಗಳು ಇರುತ್ತದೆ. ಇನ್ನೂ ನಿಮಗೆ ತೀರ ತೊಂದರೆಯಾದರೆ ನೀವು ವೈದ್ಯರ ಸಲಹೆ ಮೇರೆಗೆ ಇದನ್ನು ಎಷ್ಟು ಪ್ರಮಾಣದಲ್ಲಿ ಹೇಗೆ ಏನು ಅಂತ ಎಲ್ಲ ಪ್ರಶ್ನೆಗೆ ಉತ್ತರವನ್ನು ಕಂಡುಕೊಂಡು ಸೇವನೆ ಮಾಡಬೇಕು. ಜೊತೆಗೆ ಪೌಷ್ಟಿಕಾಂಶ ಭರಿತವಾದ ಹಣ್ಣುಗಳು ಡ್ರೈ ಫ್ರೂಟ್ಸ್ ಚೆನ್ನಾಗಿ ತಿನ್ನಬೇಕು ಜೊತೆಗೆ ನಿದ್ರೆಯನ್ನು ಮಾಡುವುದು ಊಟವನ್ನು ಮಾಡುವುದು ತುಂಬಾನೇ ಮುಖ್ಯವಾಗಿರುತ್ತದೆ.

ಅಷ್ಟೇ ಅಲ್ಲದೇ ಈ ಗಿಡದ ಇನ್ನಿತರ ಲಾಭಗಳ ಬಗ್ಗೆ ಹೇಳುವುದಾದರೆ ಇದು ಖಿನ್ನತೆಯನ್ನು ದೂರ ಮಾಡುತ್ತದೆ. ನಿಮಗೆ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಅಶ್ವಗಂಧವನ್ನು ಸೇವನೆ ಮಾಡುತ್ತಾ ಬನ್ನಿ. ಮಾನಸಿಕ ಒತ್ತಡದಿಂದ ನಿಮ್ಮ ದೇಹವು ತಣಿದಿದ್ದರೆ ಅದನ್ನು ವಿರೋಧಿಸುವ ದೇಹದ ಶಕ್ತಿಯನ್ನು ಸಾಮರ್ಥ್ಯವನ್ನು ಹೆಚ್ಚಿಸುವ ಗುಣವನ್ನು ಈ ಅಶ್ವಗಂಧ ಹೊಂದಿದೆ. ಈ ಚಿಕ್ಕ ಅಶ್ವಗಂಧ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *