ನಮಸ್ತೆ ಪ್ರಿಯ ಓದುಗರೇ, ಫಲವತ್ತತೆ ಸಮಸ್ಯೆಯನ್ನು ಕೇವಲ ಮಹಿಳೆಯರಲ್ಲಿ ಮಾತ್ರ ಕಂಡು ಬರುವುದಲ್ಲದೆ ಇದು ಪುರುಷರಲ್ಲಿ ಕೂಡ ಕಂಡು ಬರುವ ಒಂದು ದೊಡ್ಡ ಸಮಸ್ಯೆ ಆಗಿದೆ ಮಿತ್ರರೇ. ಇದಕ್ಕೆಲ್ಲ ಕಾರಣ ನಾವು ಅಳವಡಿಸಿಕೊಳ್ಳುವ ಜೀವನ ಶೈಲಿ ಮತ್ತು ಆಹಾರ ಪದ್ಧತಿ. ಇದು ಪುರುಷರ ವೀರ್ಯಾಣುಗಳ ಸಂಖ್ಯೆಯ ಮೇಲೆ ಬಹಳ ಪರಿಣಾಮವನ್ನು ಬೀರುತ್ತದೆ. ಅಷ್ಟೇ ಅಲ್ಲದೇ ಧೂಮಪಾನ ಮದ್ಯಪಾನ ಸ್ನಾಯುಗಳನ್ನು ಬಲ ಪಡಿಸಲು ತೆಗೆದುಕೊಳ್ಳುವ ಸ್ಟೀರಾಯ್ಡ್ ಗಳು ಇದಕ್ಕೆ ಮುಖ್ಯ ಕಾರಣಗಳಾಗಿವೆ.

ಸಾಮಾನ್ಯವಾಗಿ ಪುರುಷರಲ್ಲಿ ಈ ಸಮಸ್ಯೆ ಕಂಡು ಬಂದರೆ ಅವರು ವೈದ್ಯರ ಮೊರೆಯನ್ನು ಹೋಗುತ್ತಾರೆ ಹೀಗಾಗಿ ಅವರು ಮಾತ್ರೆಗಳನ್ನು ಸೇವನೆ ಮಾಡುವ ಪರಿಸ್ಥಿತಿಯನ್ನು ತಂದೊಡ್ಡಿಕೊಳ್ಳುತ್ತಾರೆ. ಇನ್ನೂ ನವ ದಂಪತಿಗಳು ಮಗು ಪಡೆಯಲು ಇಷ್ಟ ಪಡುತ್ತಿದ್ದರೆ ನೀವು ನಿಮ್ಮ ಸಂಗಾತಿಯ ಜೊತೆಗೆ ಸೇರುವಾಗ ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆ ಆದರೆ ನೀವು ಮಾತ್ರೆಗಳ ಮೊರೆ ಹೋಗುವ ಬದಲು ನೀವು ನಿಮ್ಮ ಆಹಾರ ಕ್ರಮದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬಹುದು ಜೊತೆಗೆ ಉತ್ತಮವಾದ ಯೋಗವನ್ನು ವ್ಯಾಯಾಮವನ್ನು ಮಾಡುವುದರಿಂದ ಇದು ನಿಮಗೆ ವೀರ್ಯಾಣುಗಳ ಸಂಖ್ಯೆ ವೃದ್ಧಿ ಮಾಡುವಲ್ಲಿ ನೆರವಾಗುತ್ತದೆ.

ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ವೀರ್ಯಾಣುಗಳ ಗಣತಿಯನ್ನು ವೃದ್ದಿ ಮಾಡಿಕೊಳ್ಳಲು ಕೆಲವೊಂದು ಆಹಾರಗಳನ್ನು ತಿಳಿಸಿಕೊಡುತ್ತೇವೆ ಬನ್ನಿ. ನೀವು ಕೂಡ ಈ ಸಮಸ್ಯೆ ಇಂದ ಮುಕ್ತಿ ಪಡೆಯಲು ಆಸೆ ಪಡುವುದಾದರೆ ಈ ಚಿಕ್ಕ ಲೇಖನವನ್ನು ತಪ್ಪದೇ ಓದಿ ಮರೆಯಬೇಡಿ. ಪುರುಷರಲ್ಲಿ ಬಂಜೆತನ ಕಾಣಿಸಿಕೊಳ್ಳುವುದು ತುಂಬಾನೇ ಅಪರೂಪ ಮತ್ತು ಬೆರಳೆಣಿಕೆಯಷ್ಟು ಅಂತ ಹೇಳಬಹುದು. ಎಲ್ಲರಲ್ಲಿಯೂ ಈ ಸಮಸ್ಯೆ ಕಂಡು ಬರುವುದಿಲ್ಲ ಸ್ನೇಹಿತರೇ.

ಕೇವಲ 40% ಮಾತ್ರ ಈ ಸಮಸ್ಯೆ ಇದೇ ಅಂತ ಪತ್ತೆ ಹಚ್ಚಲಾಗಿದೆ. ಅಂದರೆ ಈ ಸಮಸ್ಯೆ ಮುಖ್ಯವಾಗಿ ಧೂಮಪಾನ ಮಾಡುವವರಿಗೆ, ಆಲ್ಕೋಹಾಲ್ ಸೇವನೆ ಮಾಡುವವರಿಗೆ, ತುಂಬಾನೇ ದಪ್ಪ ಇರುವವರಿಗೆ, ಇನ್ನೂ ವ್ಯಾಯಾಮ ಮಾಡುವ ಹವ್ಯಾಸ ಇಲ್ಲದೆ ಇರುವವರಿಗೆ, ಹಾಗೆಯೇ ಕಡಿಮೆ ನಿದ್ದೆ ಮಾಡುವುದರಿಂದ ಕೆಲಸದ ಒತ್ತಡದಿಂದ ಮತ್ತೆ ಹೆಚ್ಚಾಗಿ ಕಂಪ್ಯೂಟರ್ ಮತ್ತು ಮೊಬೈಲ್ ಬಳಕೆ ಇಂದ ಈ ಪುರುಷರಲ್ಲಿ ಸಂತಾನೋತ್ಪತ್ತಿ ಅನ್ನುವುದು ಕಡಿಮೆ ಸಾಮರ್ಥ್ಯವನ್ನು ಹೊಂದುವ ಅವಕಾಶಗಳು ಅಧಿಕವಾಗಿ ಇರುತ್ತದೆ ಮುಖ್ಯವಾಗಿ ಇನ್ನೂ ನೀವು ನಿಮ್ಮ ಸಂಗಾತಿಯ ಜೊತೆಗೆ ಮಗು ಮಾಡಿಕೊಳ್ಳುವ ಆಲೋಚನೆಯಲ್ಲಿ ಇದ್ದರೆ ಮಧ್ಯಪಾನ ಧೂಮಪಾನ ಎಲ್ಲವನ್ನು ಬಿಟ್ಟು ಬಿಡಬೇಕು.

ಹಾಗೆಯೇ ನೀವು ಡ್ರಗ್ಸ್ ಗೆ ಮಾರು ಹೋಗಿದ್ದರೆ ಅದನ್ನು ಕೂಡ ಕಡ್ಡಾಯವಾಗಿ ತ್ಯಜಿಸಬೇಕು. ಇನ್ನೂ ನಿಮ್ಮ ದೇಹದ ತೂಕವನ್ನು ಸರಿಯಾಗಿ ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಜೊತೆಗೆ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ವೃದ್ಧಿ ಮಾಡಲು ಯಾವೆಲ್ಲ ಆಹಾರಗಳನ್ನು ಸೇವನೆ ಮಾಡಬೇಕು ಅಂತ ನಾವು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ. ಮೊದಲಿಗೆ ಬಾಳೆಹಣ್ಣು, ಮೊಟ್ಟೆ.

ಈ ಎರಡು ಪದಾರ್ಥಗಳಲ್ಲಿ ಅಧಿಕವಾದ ಕ್ಯಾಲ್ಸಿಯಂ, ವಿಟಮಿನ್, ಪೊಟ್ಯಾಶಿಯಂ ಮಿನರಲ್ಸ್ ಎಲ್ಲ ಬಗೆಯ ಅಂಶಗಳನ್ನು ಹೊಂದಿದ್ದು ಇದು ಪುರುಷರಲ್ಲಿ ಸ್ಪರ್ಮ್ ಕೌಂಟ್ ಅನ್ನು ಹೆಚ್ಚಿಸುತ್ತದೆ ಜೊತೆಗೆ ಇದು ಆರೋಗ್ಯಕ್ಕೆ ಒಳ್ಳೆಯದು. ಇನ್ನೂ ಪಾಲಕ್ ಸೊಪ್ಪು, ಬಸಳೆ ಸೊಪ್ಪು, ಇವುಗಳನ್ನು ತಿನ್ನುವುದರಿಂದ ಪುರುಷರ ದೇಹದಲ್ಲಿ ವೀರ್ಯಾಣುಗಳ ಸಂಖ್ಯೆ ಮಟ್ಟವನ್ನು ಹೆಚ್ಚಿಸುತ್ತದೆ ಅತಿ ಬೇಗನೆ ಫಲವತ್ತತೆಯನ್ನು ನೀಡುತ್ತದೆ. ಇನ್ನೂ ಬೆಳ್ಳುಳ್ಳಿ , ಅರಿಶಿಣ, ಮೆಂತ್ಯೆ, ಡಾರ್ಕ್ ಚಾಕೋಲೇಟ್ ಮತ್ತೆ ಡ್ರೈ ಫ್ರೂಟ್ಸ್ ಹೆಚ್ಚಾಗಿ ಸೇವನೆ ಮಾಡುತ್ತಾ ಬನ್ನಿ.

ಇದರಿಂದ ಆರೋಗ್ಯವಾಗಿ ನಿಮ್ಮ ವೀರ್ಯಾಣುಗಳ ಸಂಖ್ಯೆ ಅಧಿಕ ಮಾಡಿಕೊಳ್ಳಬಹುದು. ನೋಡಿದ್ರಲಾ ಮಿತ್ರರೇ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ತುಂಬಾನೇ ಸರಳವಾಗಿ ಸುಲಭವಾಗಿ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ನಿಮ್ಮ ಸ್ಪರ್ಮ್ ವ್ಯಾಲ್ಯೂಮ್ ಅನ್ನು ಹೆಚ್ಚಿಸಿಕೊಳ್ಳಬಹುದು. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *