ಮನೆಯಲ್ಲಿ ಕೆಟ್ಟ ಶಕ್ತಿ ಇದ್ದರೆ ಒಂದು ಗ್ಲಾಸ್ ನೀರಿನಿಂದ ಹೀಗೆ ಮಾಡಿ. ನೋಡಿ ಮನೆಗೆ ಯಾರ್ಯಾರೋ ಬರ್ತಾ ಇರ್ತಾರೆ ಹೋಗುತ್ತಾ ಇರುತ್ತಾರೆ. ಯಾರ ಕಣ್ಣು ಹೇಗಿರುತ್ತದೆ ಅಂತ ಗೊತ್ತಾಗುವುದಿಲ್ಲ ಯಾರ ಕೆಟ್ಟ ದೃಷ್ಟಿ ಬೀಳುತ್ತದೆ ಅಂತ ಗೊತ್ತಾಗುವುದಿಲ್ಲ. ಆದ್ದರಿಂದ ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿ ಮನೆಯಿಂದ ಆಚೆ ಹೋಗುತ್ತದೆ. ಹಾಗಾದರೆ ನಾವು ಏನು ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ನಕಾರಾತ್ಮಕ ಶಕ್ತಿ ಎಫೆಕ್ಟ್ ಆಗೋದು ಬೇಗ ಎಫೆಕ್ಟ್ ಆಗುತ್ತೆ. ಆದ್ದರಿಂದ ಅದಕ್ಕೆ ಕೆಲವೊಂದು ತಂತ್ರಗಳನ್ನ ನಾವು ಮಾಡಿಕೊಳ್ಳಬೇಕಾಗುತ್ತದೆ. ನಕಾರಾತ್ಮಕ ಶಕ್ತಿ ಜಾಸ್ತಿ ಆದರೆ ಮನೆಗೆ ಹಾಗೂ ಮನುಷ್ಯನ ಆರೋಗ್ಯಕ್ಕೆ ಕುತ್ತು ಬರುತ್ತದೆ. ಆದ್ದರಿಂದ ನಕಾರಾತ್ಮಕ ಶಕ್ತಿಯನ್ನ ತಡೆ ಹಿಡಿಯುವುದು ಅವಶ್ಯಕ. ತಂತ್ರಗಳ ಶಕ್ತಿ ರಾತ್ರಿ ಜಾಸ್ತಿ ಆಗುತ್ತದೆ.

ನಿಮ್ಮ ಮನೆಯಲ್ಲಿ ಕೂಡ ನಕಾರಾತ್ಮಕ ಶಕ್ತಿಗಳು ಇದೆಯೋ ಇಲ್ಲವೋ ಅಂತ ನೀವು ಒಂದು ಗ್ಲಾಸ್ ನೀರಿನ ಮುಖಾಂತರ ಕಂಡು ಹಿಡಿಯಬಹುದು. ನೀವು ಒಂದನ್ನು ತಿಳಿದುಕೊಳ್ಳಬೇಕು. ನಿಮ್ಮ ಮನೆಯವರು ಯಾರಾದರೂ ಆಕ್ಸಿಡೆಂಟ್ ನಲ್ಲಿ ಅಪಮೃತ್ಯು ಆಗಿದ್ದರೆ ಅಂತಹವರ ಆತ್ಮ ನಿಮ್ಮ ಮನೆಯ ಸುತ್ತ ಸುತ್ತುತ್ತಾ ಇರುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಶತ್ರುಗಳು ನಿಮ್ಮ ಏಳಿಗೆಯನ್ನು ನೋಡಲಾಗದೆ ನಿಮ್ಮ ಮೇಲೆ ಕೆಟ್ಟ ದೃಷ್ಟಿಯನ್ನು ಬೀರುತ್ತಾರೆ. ನಿಮ್ಮ ಮನೆಯಲ್ಲಿ ನೆಗೆಟಿವ್ ಶಕ್ತಿ ಸಂಚಾರ ಇರುತ್ತದೆ. ನಿಮ್ಮ ಮನೆಯಲ್ಲಿ ಆತ್ಮಗಳ ಸಂಚಾರ ನೆಗೆಟಿವ್ ಎನರ್ಜಿ ಇದೆ ಅಂತಾದ್ರೆ ಅವುಗಳ ಸಂಕೇತ ಈ ರೀತಿ ಸಿಗುತ್ತದೆ. ಒಂದೊಂದಾಗಿ ಆ ಸಂಕೇತಗಳು ಯಾವುವು ಅಂತ ತಿಳಿಯೋಣ. ನಿಮ್ಮ ಮನೆಯಲ್ಲಿ ಪ್ರೇತಾತ್ಮಗಳು ನೆಗೆಟಿವ್ ಎನರ್ಜಿ ಇದೆಯಾ ಅನ್ನೋದಕ್ಕೆ ಈ ಗಡಿಯಾರದ ಮೂಲಕ ಕಂಡು ಹಿಡಿಯಬಹುದು.

ನೋಡಿ ನಿಮ್ಮ ಮನೆಯ ಗಡಿಯಾರ ಪದೇಪದೇ ನಿಂತು ಹೋಗ್ತಾ ಇದ್ರೆ ಹಾಳಾಗ್ತಾ ಇದ್ರೆ ಇದು ಒಂದು ಕಾರಣ ಅಂತಾನೆ ಹೇಳಬಹುದು. ನೀವು ಹೊಸ ಬ್ಯಾಟರಿಯನ್ನು ಹಾಕಿದರೂ ಕೂಡ ಗಡಿಯಾರ ಒಪ್ಪದೇ ಪದೇ ನಿಂತು ಹೋಗ್ತಾ ಇದ್ರೆ ನಿಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದರ್ಥ. ನಿಮ್ಮ ಮನೆಯಲ್ಲಿ ಸತ್ತ ವ್ಯಕ್ತಿ ಆತ್ಮ ಇದ್ದರೆ ಗಡಿಯಾರ ಪದೇ ಪದೇ ನಿಂತು ಹೋಗುತ್ತೆ ಅಥವಾ ಪದೇ ಪದೇ ಹಾಳಾಗುತ್ತೆ. ತೀರಿಕೊಂಡ ವ್ಯಕ್ತಿ ನಿಮ್ಮತ್ರ ಏನು ಹೇಳಲಿಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದರ್ಥ ಇನ್ನು ಎರಡನೆಯದಾಗಿ ಮಧ್ಯರಾತ್ರಿಯಲ್ಲಿ ಕೆಲವು ಶಬ್ದಗಳು ಕೇಳಿಸುತ್ತದೆ. ಮಧ್ಯರಾತ್ರಿಲಿ ಯಾರೋ ಬಾಗಿಲು ಬಡಿದ ಹಾಗೆ ಶಬ್ದ ಕೇಳಿಸೋದು. ಯಾರೋ ಕರೆದ ಹಾಗೆ ಅನಿಸುವುದು ಹೆಜ್ಜೆಗಳ ಸದ್ದು ಅಥವಾ ಯಾರೋ ಕೂಗಿದ ಹಾಗೆ ಕೇಳಿಸುವುದು ಇದೆಲ್ಲ ನಿಮ್ಮ ಅನುಭವಕ್ಕೆ ಬಂದರೆ ನಿಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಪ್ರಯತ್ನ ಇದೆ ಎಂದರ್ಥ.

ಇದಕ್ಕೆ ನೀವು ಏನು ಮಾಡಬೇಕು ಅಂದ್ರೆ ಒಂದು ಬಕೆಟ್ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಒಂದು ಅರ್ಧ ಚಮಚ ಉಪ್ಪನ್ನು ಹಾಕಿ ನೆಲವನ್ನ ಒರೆಸಿ. ಗುರುವಾರವನ್ನು ಬಿಟ್ಟು ಉಳಿದ ದಿನ ಈ ರೀತಿ ಮಾಡುವುದರಿಂದ ಯಾವುದೇ ನೆಗೆಟಿವ್ ಎನರ್ಜಿ ಇದ್ರು ಕೂಡ ಖಂಡಿತವಾಗ್ಲೂ ಮನೆಯಿಂದ ಹೊರಗೆ ಹೋಗುತ್ತೆ. ನಮ್ಮ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಮುಂದಿನ ಮತ್ತೊಂದು ಹೊಸ ಮಾಹಿತಿಯೊಂದಿಗೆ ಭೇಟಿಯಾಗೋಣ ಅಲ್ಲಿವರೆಗೂ ನಮಸ್ಕಾರ.

Leave a Reply

Your email address will not be published. Required fields are marked *