ಹೌದು ಈ ಇರುವೆಗಳು ಮನೆಯ ಮೂಲೆ ಮೂಲೆ, ಸಂದಿ ಸಂದಿಗಳು ಮತ್ತು ಗೋಡೆಯ ಮೇಲೆ ಹೀಗೆ ಅನೇಕ ಕಡೆಗಳಲ್ಲಿ ಮನೆಯಲ್ಲಿ ತುಂಬ ಕಾಟ ಕೊಡುತ್ತವೆ ಇದರಿಂದ ಏನ್ ಮಾಡಬೇಕು ಅನ್ನೋದೇ ಎಷ್ಟೋ ಮಂದಿಗೆ ಗೊತ್ತಾಗುವುದಿಲ್ಲ, ಹಾಗಾಗಿ ಈ ಇರುವೆ ಕಾಟ ತಡಿಯಲು ಇಲ್ಲಿದೆ ನೋಡಿ ಸೂಕ್ತ ಪರಿಹಾರ.

ಮನೆಯಲ್ಲಿಯೇ ಸಿಗುವಂತ ಈ ಮನೆಮದ್ದು ಬಳಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ನಿಂಬೆರಸವನ್ನು ತೆಗೆದು ಅದಕ್ಕೆ ಒಂದು ಚಮಚ ಉಪ್ಪು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಂಡು ಇರುವೆಗಳು ಇರುವ ಜಾಗಕ್ಕೆ ಸಿಂಪಡಿಸಿ. ಕೆಲವೇ ಸಮಯದಲ್ಲಿ ಇರುವೆಗಳು ಇಲ್ಲದಂತಾಗುವುದು.

ಅಡುಗೆಗೆ ಬಳಸುವಂತ ದಾಲ್ಚಿನ್ನಿ ಇರುವೆಗಳನ್ನು ಓಡಿಸಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಇರುವೆಗಳು ಇರುವ ಜಾಗಕ್ಕೆ ದಾಲ್ಚಿನಿ ಚಕ್ಕೆ ಹುಡಿಯನ್ನು ರಾತ್ರಿ ಮಲಗುವ ಮೊದಲು ಸಿಂಪಡಿಸಿ, ಬೆಳಿಗ್ಗೆ ನೀವು ಅಡುಗೆ ಮನೆಗೆ ಹೋಗುವಾಗ ಎಲ್ಲಾ ಇರುವೆಗಳು ಮಾಯವಾಗಿರುತ್ತದೆ.

ಅಷ್ಟೇ ಅಲ್ಲದೆ ಒಂದು ಚಮಚ ಕರಿಮೆಣಸಿನ ಪುಡಿಯನ್ನು ಒಂದು ಲೋಟ ಬಿಸಿನೀರಿಗೆ ಹಾಕಿಕೊಳ್ಳಿ. ಇರುವೆಗಳನ್ನು ಕಂಡಾಗ ಇದನ್ನು ನೇರವಾಗಿ ಅದರ ಮೇಲೆ ಸಿಂಪಡಿಸಿ. ಈ ಮದ್ದು ಇರುವೆಗಳಿಂದ ಮುಕ್ತಿ ನೀಡುವುದು. ಈ ರೀತಿಯಾಗಿ ಮಾಡಿ ಇರುವೆ ಕಾಟದಿಂದ ದೂರವಾಗಿ.

Leave a Reply

Your email address will not be published. Required fields are marked *