ಹೌದು ನಿಜಕ್ಕೂ ಈ ಆಸ್ಪತ್ರೆ ಬಡವರ ಪಾಲಿನ ಆಸ್ಪತ್ರೆ ಅಂತಾನೆ ಹೇಳಬಹುದು, ಯಾಕಂದರೆ ಪ್ರಸ್ತುತ ದಿನಗಳಲ್ಲಿ ಉದ್ಯವಾಗಿ ಮಾರ್ಪಾಡಾಗಿರುವ ಆಸ್ಪತ್ರೆ ಹಾಗು ವೈದ್ಯರ ಮುಂದೆ, ಈ ಆಸ್ಪತ್ರೆ ಬಡವರಿಗಾಗಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣ ಮಟ್ಟದ ಚಿಕಿಸ್ಥೆಯನ್ನು ಕೊಡುತ್ತಿದೆ.

ಮಾನವೀಯತೆ ಮರೆತು ಹೆಣನ ಮುಂದೆ ಇಟ್ಟುಕೊಂಡು ಹಣ ಕೀಳುವ ಅದೆಷ್ಟೂ ಆಸ್ಪತ್ರೆಗಳು ಇಂತಹ ಆಸ್ಪತ್ರೆಯನ್ನು ಹಾಗು ವೈದ್ಯರನ್ನು ನೋಡಿ ಕಲಿಯಬೇಕಾಗಿದೆ. ಅಷ್ಟಕ್ಕೂ ಈ ಬಡವರ ಪಾಲಿನ ಆಸ್ಪತ್ರೆ ಎಲ್ಲಿದೆ ಈ ಆಸ್ಪತ್ರೆಯ ವಿಶೇಷತೆ ಏನು.? ಅನ್ನೋ ಸಂಪೂರ್ಣ ಮಾಹಿತಿಯನ್ನು ಮುಂದೆ ತಿಳಿಸಲಾಗಿದೆ ನೋಡಿ.

ತಮಿಳುನಾಡಿನ ಮದುರೈಯಲ್ಲಿ ವೇಲಮ್ಮಾಳ್ ಮೆಡಿಕಲ್ ಕಾಲೇಜ್ ಅಂಡ್ ರೀಸರ್ಚ್ ಇನ್ಸ್ಟಿಟ್ಯೂಟ್ ಅಂತ. ವಕೀಲರೊಬ್ಬರು ತಮ್ಮ ಸ್ನೇಹಿತರನ್ನು ಇಲ್ಲಿ ಚಿಕಿತ್ಸೆಗೆ ಕರೆದೊಯ್ದಿದ್ದರಂತೆ. 5 ಸ್ಟಾರ್ ಗುಣಮಟ್ಟದ ಆಸ್ಪತ್ರೆ. ಎಲ್ಲಾ ಕಡೆಯೂ ಕ್ಲೀನ್, ನೀಟ್‌. ಪ್ರತಿ ಡಿಪಾರ್ಟ್ಮೆಂಟ್ ನಲ್ಲೂ ನಾಲ್ವರು ವೈದ್ಯರು ಇದ್ದಾರಂತೆ.

ಇಲ್ಲಿ ಡಾಕ್ಟರ್ ಫೀಸ್ ಇಲ್ಲ. ಅಡ್ಮಿಷನ್ ಫೀಸ್ ಇಲ್ಲ.ರೋಗಿ ದಾಖಲಾಗಿ ಡಿಸ್ಚಾರ್ಜ್ ಆಗುವವರೆಗೂ ಉತ್ತಮ ಗುಣಮಟ್ಟದ ಊಟ, ತಿಂಡಿ ಉಚಿತ. ಎಕ್ಸ್ ರೇ – 50% ಡಿಸ್ಕೌಂಟ್ಡಿ ಜಿಟಲ್ ಇಸಿಜಿ – 50% ಡಿಸ್ಕೌಂಟ್; ವಿಡಿಯೋ ಎಂಡೋಸ್ಕೊಪಿ- 2000 ರೂಪಾಯಿ. ಆಪರೇಷನ್ ಚಾರ್ಜ್ ಇಲ್ಲ. ೬. ಔಷಧಿಗಳು 8% ಡಿಸ್ಕೌಂಟ್

ಅಲ್ಲಿದ್ದ ನಾಲ್ಕು ದಿನಗಳಲ್ಲಿ ಅವರಿಗೆ ಚಿಕಿತ್ಸೆಗೆ, ಸ್ಕಾನಿಂಗ್, ಇಸಿಜಿ, ಔಷಧ ಎಲ್ಲಾ ಸೇರಿ ಖರ್ಚಾಗಿದ್ದು ಕೇವಲ 13,500 ಯಂತೆ.

ಇದೇ ಚಿಕಿತ್ಸೆಗೆ ಅಪೋಲೋ ಆಸ್ಪತ್ರೆ 1,50,000 ಖರ್ಚಾಗುತ್ತದೆ ಅಂದಿದ್ದರೆ ರಾಮಕೃಷ್ಣ ಮಿಷನ್ ಆಸ್ಪತ್ರೆ 84000, ಮತ್ತೊಂದು ಮಾಮೂಲಿ ಆಸ್ಪತ್ರೆ 45,000 ಆಗುತ್ತದೆ ಅಂದಿದ್ದರಂತೆ.

ದುಡ್ಡು ಮಾಡೋಕೆ ಅಂತಾನೆ ನಿಂತಿರುವ ಆಸ್ಪತ್ರೆಗಳ ಮುಂದೆ ಈ ಆಸ್ಪತ್ರೆ ನಿಜಕ್ಕೂ ಗ್ರೇಟ್ ಅಲ್ವ.? ಈ ಮಾಹಿತಿಯನ್ನು ಹೆಚ್ಚಿನದಾಗಿ ಹಂಚಿಕೊಳ್ಳಿ. ಇದರಿಂದ ಅದೆಷ್ಟೂ ಬಡವರಿಗೆ ಉಪಯೋಗವಾಗಲಿದೆ ಅನ್ನೋದೇ ನಮ್ಮ ಬಯಕೆ.

ಈ ಆಸ್ಪತ್ರೆಯ ವಿಳಾಸ:
Velammal Medical College and Research Centre, Annappanadi, Near Chinthamani Toll Gate Madurai, TN 625009 (0452) 7113333.

Leave a Reply

Your email address will not be published. Required fields are marked *