ನಮಸ್ತೇ ಪ್ರಿಯ ಓದುಗರೇ, ಜೀವನದಲ್ಲಿ ಏನೇ ಕಷ್ಟಗಳು ಬರಲಿ ದೇವರು ಇದ್ದಾನೆ ಅಂತ ನಂಬಿಕೆಯಿಂದ ಇರುತ್ತೇವೆ. ಅದಕ್ಕಾಗಿ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ನಿತ್ಯವೂ ನಾವು ಮನೆಯಲ್ಲಿ ಪೂಜೆಯನ್ನು ಮಾಡುತ್ತೇವೆ. ಆದರೆ ಕೆಲವು ಜನರು ಮನೆಯಲ್ಲಿ ಪೂಜೆಯನ್ನು ಮಾಡಿ ಕೂಡ ದೇವಸ್ಥಾನಕ್ಕೆ ಭೇಟಿ ಮಾಡಲು ಹೋಗುತ್ತಾರೆ. ದೇವರಲ್ಲಿ ಪ್ರಾರ್ಥನೆ ಮಾಡಿ ನಮಸ್ಕರಿಸಿ ತಮ್ಮ ಕಷ್ಟಗಳನ್ನು ಹೇಳಿ ದೇವರ ದರ್ಶನವನ್ನು ಪಡೆದುಕೊಂಡು ಬರುತ್ತಾರೆ. ಇನ್ನೂ ಕೆಲವರು ದೇವರಿಗೆ ಅಥವಾ ದೇವಾಲಯಕ್ಕೆ ಹೋಗದೆ ಇದ್ದರೆ ಏನೇನೋ ಕಷ್ಟಗಳು ತೊಂದರೆಗಳು ಬರುತ್ತವೆ ಅಂತ ಹೆಸರಿಗೆ ಮಾತ್ರ ದೇವಸ್ಥಾನಕ್ಕೆ ಹೋಗುತ್ತಾರೆ. ಇನ್ನೂ ಕೆಲವರು ದೇವರಲ್ಲಿ ಸಂಪೂರ್ಣವಾದ ನಂಬಿಕೆ ಭಕ್ತಿ ಶ್ರದ್ಧೆ ಪ್ರೀತಿ ಭಾವನೆಯಿಂದ ದೇವಾಲಯಕ್ಕೆ ದೇವರ ದರ್ಶನಕ್ಕಾಗೀ ಹೋಗುತ್ತಾರೆ. ಇನ್ನೂ ಕೆಲವರು ದೇವಾಲಯ ಕಡೆಗೆ ತಿರುಗಿ ಕೂಡ ನೋಡುವುದಿಲ್ಲ. ಅವರಿಗೆ ದೇವರಲ್ಲಿ ನಂಬಿಕೆಯೇ ಇರುವುದಿಲ್ಲ. ತಮ್ಮ ಪಾಡಿಗೆ ತಮ್ಮ ಕೆಲಸವೇನೋ ತಾವೇನೂ ಎಂದು ಇದ್ದು ಬಿಡುತ್ತಾರೆ. ಆದರೆ ನಿಮಗೆ ಗೊತ್ತೇ ನಿಮ್ಮ ಹತ್ತಿರವಿರುವ ಯಾವುದೇ ದೇವಸ್ಥಾನಕ್ಕೆ ನೀವೂ ಪದೇ ಪದೇ ಹೋಗುತ್ತಿರಬೇಕು.
ಸತತವಾಗಿ ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ಆರೋಗ್ಯಕ್ಕೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಲವಾರು ಪ್ರಯೋಜನಗಳು ದೊರೆಯುತ್ತವೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಅವುಗಳ ಬಗ್ಗೆ ಕುರಿತು ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ಮೊದಲಿಗೆ, ಸಕಾರಾತ್ಮಕ ಶಕ್ತಿಗಳು ಹೆಚ್ಚುತ್ತವೆ.

ಸಾಮಾನ್ಯವಾಗಿ ದೇವಾಲಯದಲ್ಲಿ ಗರ್ಭಗುಡಿ ಇರುತ್ತದೆ. ಅದರ ಮೇಲ್ಛಾವಣಿಯನ್ನು ತಾಮ್ರದಿಂದ ಮಾಡಿರುತ್ತಾರೆ. ಈ ತಾಮ್ರದ ಹೊದಿಕೆಯಲ್ಲಿ ಧನಾತ್ಮಕ ಚಿಂತನೆಗಳು ಪ್ರವಹಿಸುತ್ತಲೇ ಇರುತ್ತವೆ. ಗರ್ಭಗುಡಿಯ ಒಂದೇ ಒಂದು ಬಾಗಿಲು ತೆರೆದಿರುತ್ತದೆ. ಆಗ ನಾವು ಗರ್ಭಗುಡಿಯನ್ನು ಪ್ರದಕ್ಷಿಣೆ ಹಾಕುವಾಗ ಮತ್ತು ದೇವರ ಮುಂದೆ ನಿಂತು ಕಣ್ಣು ಮುಚ್ಚಿ ಪ್ರಾರ್ಥನೆ ಮಾಡುವಾಗ ಆ ಒಳಗಿನ ಎಲ್ಲ ಸಕಾರಾತ್ಮಕ ಶಕ್ತಿಗಳು ನಮ್ಮಲ್ಲಿ ತುಂಬುತ್ತವೆ. ಹಾಗಾಗಿ ನಾವು ದೇವರನ್ನು ನಾವು ಎಷ್ಟು ಹೊತ್ತು ನೋಡುತ್ತೇವೆ ಅಷ್ಟೇ ಮನಸ್ಸಿಗೆ ಸಮಾಧಾನ ಸಂತಸ ಆನಂದ. ಇದಷ್ಟೇ ಅಲ್ಲದೇ ದೇವಾಲಯದಲ್ಲಿ ಇರುವ ಗಂಟೆಯ ಶಬ್ದ, ದೀಪದಿಂದ ಬೆಳಗಿದ ಶಕ್ತಿ ಕರ್ಪೂರ ಊದುಬತ್ತಿ ಎಲ್ಲವೂ ನಮ್ಮ ಮೆದುಳನ್ನು ಶಾಂತಗೊಳಿಸುತ್ತದೆ. ಮನಸ್ಸಿನ ಎಲ್ಲ ದುಃಖ ದುಮ್ಮಾನಗಳು ದುಗುಡಗಳು ಕಳೆದು ಹೋಗುತ್ತವೆ. ತೀರ್ಥದ ಲಾಭ. ನಾವು ದೇವಾಲಯಕ್ಕೆ ಹೋದರೆ ಅಲ್ಲಿ ಅರ್ಚಕರು ಖಂಡಿತವಾಗಿ ನಮಗೆ ಪ್ರಸಾದದ ರೂಪದಲ್ಲಿ ನಮಗೆ ತೀರ್ಥವನ್ನು ನೀಡುತ್ತಾರೆ. ತೀರ್ಥವನ್ನು ತುಳಸಿ, ಏಲಕ್ಕಿ, ಲವಂಗ, ಗಂಧ, ಚಂದನ ಮುಂತಾದವನ್ನು ನೀರಿಗೆ ಹಾಕಿ ತಯಾರಿಸುತ್ತಾರೆ. ಮನಸ್ಸನ್ನು ಶಾಂತಗೊಳಿಸುವ ಶಕ್ತಿ ಸಾಮರ್ಥ್ಯವನ್ನು ಈ ತೀರ್ಥವು ಹೊಂದಿದೆ.

ಔಷಧೀಯ ಗುಣಗಳನ್ನು ಹೊಂದಿರುವ ಈ ತೀರ್ಥವನ್ನು ನಾವು ಎಂದಿಗೂ ನಿರಕರಿಸಬಾರದು. ದೇವಾಲಯದಲ್ಲಿ ಸಿಕ್ಕ ಪ್ರಸಾದ ಅಥವಾ ತೀರ್ಥವನ್ನು ಬೇಡವೆಂದು ಅವಮಾನ ಮಾಡಬಾರದು. ಇದನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನಮಗೆ ಏನು ಬೇಕು ಎಂಬ ಸ್ಪಷ್ಟನೆ ದೊರೆಯುತ್ತದೆ. ಸಾಮಾನ್ಯವಾಗಿ ದೇವರಲ್ಲಿ ಎಲ್ಲರೂ ಸುಖ ಶಾಂತಿ ನೆಮ್ಮದಿ ಹಣ ಕೆಲಸ ಆರೋಗ್ಯ ಐಶ್ವರ್ಯ ಇವುಗಳನ್ನೇ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಆಗ ನಮಗೆ ಏನು ಬೇಕು ನಾವು ಏನು ಸಾಧನೆಯನ್ನು ಮಾಡಬೇಕು ಅಂತ ನಮಗೆ ಅರಿವು ಆಗುತ್ತದೆ ಅದನ್ನು ದೇವರಲ್ಲಿ ಕೇಳಿಕೊಳ್ಳುತ್ತೇವೆ. ಹೀಗಾಗಿ ಅದರ ಕಡೆಗೆ ನಾವು ಗಮನ ಹರಿಸಬಹುದು. ದೇವರಲ್ಲಿ ನಿತ್ಯವೂ ಪ್ರಾರ್ಥನೆ ಮಾಡುತ್ತಾ ಬಂದರೆ ನಮ್ಮ ಗುರಿ ನಿಶ್ಚಲವಾಗುತ್ತದೆ. ಗುರುಗಳ ಕಡೆಗೆ ಮನಸ್ಸು ಸಾಗುತ್ತದೆ. ಭರವಸೆ ನೀಡುವ ಸ್ಥಳ. ಹೌದು ಜೀವನದಲ್ಲಿ ಕಷ್ಟ ಅಂತ ಬಂದಾಗ ನಮಗೆ ಮೋದಲಿಗೆ ನೆನಪು ಬರುವುದು ದೇವರು. ಜೀವನದಲ್ಲಿ ನೋವು ಕಷ್ಟ ದುಃಖಗಳು ಹತಾಶೆ ಹಿಂಸೆ ಕಾಟ ಜರಗುತ್ತಲೇ ಇದ್ದರೆ ಆಗ ನಾವು ದೇವರಲ್ಲಿ ತೆರಳಿ ಪ್ರಾರ್ಥನೆ ಮಾಡುವುದರಿಂದ ನಮ್ಮ ಎಲ್ಲ ಕಷ್ಟಗಳು ನಿವಾರಣೆ ಆಗುತ್ತದೆ ಹಾಗೂ ಮನಸ್ಸಿಗೆ ನೆಮ್ಮದಿ ಸಿಗುತ್ತದೆಹಾಗೂ ಮಾನಸಿಕ ಬಲ ಹೆಚ್ಚುತ್ತದೆ. ಬದುಕಿಗೆ ದಾರಿ ದೀಪವಾಗುತ್ತದೆ. ದೇವರಿಗೆ ಕಾಣಿಕೆ ರೂಪದಲ್ಲಿ ಹುಂಡಿಯಲ್ಲಿ ದುಡ್ಡು ಹಾಕುವುದರಿಂದ ಹಸಿದು ಬಂದವರಿಗೆ ಹೊಟ್ಟೆ ತುಂಬುತ್ತದೆ. ಆದ್ದರಿಂದ ನಾವು ಪ್ರತಿದಿನವೂ ದೇವಾಲಯಕ್ಕೆ ಭೇಟಿ ನೀಡಬೇಕು. ಇದು ಇದರ ಉದ್ದೇಶವಾಗಿದೆ.

Leave a Reply

Your email address will not be published. Required fields are marked *