ಹೌದು ಮೀನು ಅಂದರೆ ಎಲ್ಲರಿಗು ಇಷ್ಟ ಆದರೆ ತಿನ್ನಲು ಕಷ್ಟ ಯಾಕೆಂದರೆ ಅದರಲ್ಲಿ ಮುಳ್ಳುಗಳಿರುತ್ತವೆ ಅದನ್ನು ಬಿಡಿಸಿ ತಿನ್ನೋದು ಕೆಲವರಿಗಂತೂ ಅಲರ್ಜಿ ಆದ್ದರಿಂದ ಅದನ್ನು ತಿನ್ನೋದು ಬೇಡ ಅನ್ನೋರೆ ತುಂಬಾ ಜನ, ಆದರೆ ಅದರಲ್ಲಿರುವ ಆರೋಗ್ಯಕಾರಿ ಅಂಶಗಳನ್ನು ತಿಳಿದರೆ ಖಂಡಿತ ತಪ್ಪದೆ ತಿನ್ನುತ್ತಿರಾ.

ಬುದ್ದಿ ಶಕ್ತಿಯನ್ನು ಚುರುಕುಗೊಳಿಸುತ್ತದೆ: ಮೀನು ತಿನ್ನುವುದರಿಂದ ನಮ್ಮ ಬುದ್ದಿ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ, ಅದರಲ್ಲಿ ಮಕ್ಕಳಿಗೆ ತಿನ್ನಿಸುವುದರಿಂದ ಮಕ್ಕಳು ಒಳ್ಳೆಯ ಬುದ್ದಿವಂತರಾಗುತ್ತಾರೆ ಮತ್ತು ಜ್ಞಾಪಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯುತ್ತದೆ: ಫಿಶ್​ನಲ್ಲಿರುವ ಒಮೆಗಾ 3 ಫ್ಯಾಟಿ ಆ್ಯಸಿಡ್​ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಜೊತೆಗೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವುದರ ಜೊತೆಗೆ ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ. ಇದರಿಂದ ಹೃದಯದ ಸಮಸ್ಯೆಗಳನ್ನು ಮೀನು ತಡೆಗಟ್ಟುತ್ತದೆ.

ಖಿನ್ನತೆಯನ್ನು ಕಡಿಮೆ ಮಾಡುತ್ತದೆ: ಮೆದುಳಿನ ಕೆಲವು ರಾಸಾಯನಿಕಗಳು ಹಾಗೂ ಹಾರ್ಮೋನ್ಸ್​ಗಳು ಖಿನ್ನತೆಯಂತಹ ಮಾನಸಿಕ ಸಮಸ್ಯೆ ಕಂಡುಬರುತ್ತದೆ. ಫಿಶ್​ ಅಹಾರದಲ್ಲಿ ಸಿಗುವ ಎಣ್ಣೆಯಂಶ ಮೆದುಳಿನಲ್ಲಿರುವ ಸೆರೊಟೊನಿನ್​ ಎಂಬ ಹಾರ್ಮೋನ್​ ಮಟ್ಟವನ್ನು ಉತ್ತಮಗೊಳಿಸಿ ಖಿನ್ನತೆಯ ಲಕ್ಷಣವನ್ನು ಕಡಿಮೆ ಮಾಡುತ್ತದೆ.

ಆರ್ಥರೈಟಿಸ್​ಗೆ ಉತ್ತಮ ಆಹಾರ: ಫಿಶ್​ನಲ್ಲಿ ವಿಟಮಿನ್​ ಎ ಮತ್ತು ಒಮೆಗಾ ಫ್ಯಾಟಿ ಆ್ಯಸಿಡ್​ ಇರುವುದರಿಂದ ಇದು ಅರ್ಥರೈಟಿಸ್​ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ.

ಮೂಳೆಗಳನ್ನು ಆರೋಗ್ಯವಾಗಿಡುತ್ತದೆ: ಫಿಶ್​ನಲ್ಲಿ ವಿಟಮಿನ್​ ಡಿ ಅಂಶ ಸಮೃದ್ಧವಾಗಿರುವುದರಿಂದ ಮೂಳೆಗಳನ್ನು ಗಟ್ಟಿಯಾಗಿಸಿ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಮತ್ತು ರಿಕೆಟ್ಸ್ ರೋಗ ಬರದಂತೆ ತಡೆಗಟ್ಟುತ್ತದೆ. ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ, ಫಿಶ್​ನಲ್ಲಿರುವ ಮಿಟಮಿನ್ ಎ ಕಣ್ಣಿನ ಆರೋಗ್ಯಕಕ್ಕೂ ಒಳ್ಳೆಯದು. ಇದು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ.

Leave a Reply

Your email address will not be published. Required fields are marked *