ಹಲವು ರೀತಿಯಲ್ಲಿ ಭವಿಷ್ಯವನ್ನು ಹೇಳುತ್ತಾರೆ ಅದೇ ರೀತಿಯಲ್ಲಿ ನಿಮ್ಮ ಬೆರಳಿನ ಉಗುರುಗಳನ್ನು ನೋಡಿ ಭವಿಷ್ಯ ನೋಡುವ ಪದ್ದತಿ ಕೂಡ ಇದೆ ನಾವು ನಿಮಗೆ ಈ ಲೇಖನದ ಮೂಲಕ ನಿಮ್ಮ ಬೆರಳಿನ ಉಗುರಿನಲ್ಲಿ ಈ ರೀತಿಯ ಚಂದ್ರಾಕೃತಿ ಮೂಡಿದರೆ ಅದು ಏನನ್ನು ಸೂಚಿಸುತ್ತದೆ ಅನ್ನೋದರ ಬಗ್ಗೆ ತಿಳಿಸಲಿದ್ದೇವೆ ಮುಂದೆ ನೋಡಿ.

ನಿಮ್ಮ ಕೈಗಳ ತೋರುಬೆರಳಿನ ಉಗುರಿನಲ್ಲಿ ಅರ್ಧಚಂದ್ರ ಮೂಡಿದ್ದರೆ ಅದು ಏನನ್ನು ಸೂಚಿಸುತ್ತದೆ ಗೋತ್ತಾ. ಹೌದು ನಿಮ್ಮ ತೋರುಬೆರಳಿನ ಉಗುರಿನಲ್ಲಿ ಅರ್ಧಚಂದ್ರ ಮೂಡಿದರೆ ನಿಮಗೆ ಕೆಲವೇ ದಿನಗಳಲ್ಲಿ ಶುಭಸುದ್ದಿ ಪಡೆಯುವ ಅಥವಾ ಕೆಲಸದಲ್ಲಿ ಏಳ್ಗೆ ಕಾಣುವ ಸಂಕೇತವಾಗಿದೆ. ಒಂದು ವೇಳೆ ನಿಮ್ಮ ವಾರ್ಷಿಕ ಮೌಲ್ಯಮಾಪನ ನಡೆಯುವುದಿದ್ದರೆ ಮತ್ತು ಇದಕ್ಕೂ ಮುನ್ನಾದಿನಗಳಲ್ಲಿ ತೋರುಬೆರಳಿನಲ್ಲಿ ಈ ಆಕೃತಿ ಮೂಡಿದರೆ ಶುಭಸುದ್ದಿ ಖಂಡಿತಾ ಇದೆ ಎಂದು ಅರ್ಥ.

ನಿಮ್ಮ ಮಧ್ಯದ ಬೆರಳಿನ ಉಗುರಿನಲ್ಲಿ ಅರ್ಧಚಂದ್ರ ಮೂಡಿದರೆ ಅದು ಏನನ್ನು ಸೂಚಿಸುತ್ತದೆ ಗೋತ್ತಾ. ಈ ಬೆರಳು ನಮ್ಮ ಕೈಯ ಉದ್ದದ ಬೆರಳಾಗಿದ್ದು ಈ ಬೆರಳಿನ ಉಗುರಿನಲ್ಲಿ ಅರ್ಧಚಂದ್ರ ಮೂಡಿದ್ದರೆ ಆ ವ್ಯಕ್ತಿಯು ಯಂತ್ರಗಳನ್ನು ಅವಲಂಬಿಸಿದ ಉದ್ಯಮದಲ್ಲಿ ಹೆಚ್ಚಿನ ಫಲವನ್ನು ಪಡೆಯುತ್ತಾನೆ.

ಉಂಗುರ ಬೆರಳಿನ ಉಗುರಿನಲ್ಲಿ ಅರ್ಧಚಂದ್ರ ಮೂಡಿದರೆ: ಈ ಬೆರಳಿನಲ್ಲಿ ಮೂಡಿರುವ ಅರ್ಧಚಂದ್ರದ ಸ್ಪಷ್ಟವಾದ ಅರ್ಥವೆಂದರೆ ಇನ್ನೇನು ಕೆಲವೇ ದಿನಗಳಲ್ಲಿ ಈ ವ್ಯಕ್ತಿಯ ಸಾಮಾಜಿಕ ಸ್ಥಾನಮಾನದಲ್ಲಿ ಏರಿಕೆಯಾಗುತ್ತದೆ ಹಾಗೂ ಜೀವನ ಉತ್ತಮಗೊಳ್ಳುತ್ತದೆ.

ಕಿರು ಬೆರಳಿನ ಉಗುರಿನಲ್ಲಿ ಅರ್ಧಚಂದ್ರ ಮೂಡಿದರೆ: ಯಾವ ವ್ಯಕ್ತಿಯ ಕಿರುಬೆರಳಿನ ಉಗುರಿನಲ್ಲಿ ಅರ್ಧಚಂದ್ರ ಮೂಡಿರುತ್ತದೆಯೋ ಆ ವ್ಯಕ್ತಿ ಶೀಘ್ರದಲ್ಲಿಯೇ ಅತಿ ಹೆಚ್ಚು ಅಂದರೆ ದುಪ್ಪಟ್ಟು ಅಥವಾ ಮೂರುಪಟ್ಟು ಲಾಭವನ್ನು ಪಡೆಯುವ ಘಳಿಗೆಗೆ ಸನ್ನಿಹಿತನಾಗಿದ್ದಾನೆ.

ಹೆಬ್ಬರಳಿನ ಉಗುರಿನಲ್ಲಿ ಅರ್ಧಚಂದ್ರ ಮೂಡಿದರೆ: ಒಂದು ವೇಳೆ ಹೆಬ್ಬೆರಳಿನ ಉಗುರಿನಲ್ಲಿ ಈ ಗುರುತಿದ್ದರೆ ಶೀಘ್ರವೇ ನಿಮಗೆ ಶುಭಸುದ್ದಿ ಬರಲಿದೆ. ಅಲ್ಲದೇ ಈ ವ್ಯಕ್ತಿಗಳಿಗೆ ಜೀವನದ ನಡುವಯಸ್ಸು ದಾಟಿದ ಬಳಿಕ ಥಟ್ಟನೇ ಹೆಚ್ಚಿನ ಯಶಸ್ಸು ದೊರಕುತ್ತದೆ.ಅಚ್ಚರಿ, ಕುತೂಹಲ ಕೆರಳಿಸುವ ಎಡಗೈ ಹಸ್ತದಲ್ಲಿ ಮೂಡುವ ರೇಖೆ!

ಅರ್ಧಚಂದ್ರಾಕೃತಿ ದೊಡ್ಡದಿದ್ದರೆ ಅಶುಭ: ನಮ್ಮ ಉಗುರು ಬೆಳೆಯುತ್ತಿದ್ದಂತೆ ಈ ಅರ್ಧ ಚಂದ್ರಾಕೃತಿಯೂ ಬದಲಾಗುತ್ತಾ ಹೋಗುತ್ತದೆ. ಹೆಚ್ಚಿನಾಂಶ ಕಾಣೆಯಾಗುತ್ತದೆ. ಆದರೆ ಅಪರೂಪಕ್ಕೊಮ್ಮೆ ಇದು ದೊಡ್ಡದಾಗುತ್ತಾ ಉಗುರಿನ ಅರ್ಧಭಾಗಕ್ಕಿಂತಲೂ ದೊಡ್ಡದಾಗಿರುತ್ತದೆ. ಒಂದು ವೇಳೆ ಈ ಪರಿಯಲ್ಲಿ ಗುರುತು ದೊಡ್ಡದಾಗಿದ್ದರೆ ಇದು ಶುಭಸಂಕೇತವಲ್ಲ. ಬದಲಿಗೆ ಕೆಟ್ಟ ಸುದ್ದಿಯನ್ನು ಕೇಳಬೇಕಾಗಿ ಬರಬಹುದು.

ಒಂದು ವೇಳೆ ನಿಮ್ಮ ಯಾವುದೇ ಉಗುರಿನಲ್ಲಿ ಅರ್ಧಚಂದ್ರಾಕೃತಿ ಇಲ್ಲದ್ದಿದ್ದರೆ ಅದು ಹೇಗೆ.
ಕನಿಷ್ಠ ಒಂದು ಬೆರಳಿನಲ್ಲಾದರೂ, ಚಿಕ್ಕದಾದರೂ ಸರಿ ಈ ಗುರುತು ಇದ್ದರೆ ಆರೋಗ್ಯಕರ ಲಕ್ಷಣವಾಗಿದೆ. ಆದರೆ ಒಂದು ವೇಳೆ ಒಂದು ಇಲ್ಲದೇ ಹೋದರೆ ಇದು ಅನಾರೋಗ್ಯದ ಲಕ್ಷಣವಾಗಿದ್ದು ತಕ್ಷಣವೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಪ್ರಾರಂಭಿಸಬೇಕೆಂದು ಇದರ ಅರ್ಥವಾಗಿದೆ. ಸಂಗ್ರಹ ಮಾಹಿತಿ.

Leave a Reply

Your email address will not be published. Required fields are marked *