ನೀವು ಯಾವುದೇ ಕಾರಣಕ್ಕೂ ಚಿಂತಿಸ ಬೇಡಿ. ನಮಸ್ಕಾರ ನಿಮ್ಮದೇನಾದರೂ ಆಸ್ತಿ ಪತ್ರ ಕಳೆದುಹೋಗಿದ್ಯಾ ಒಂದು ವೇಳೆ ನಿಮ್ಮ ನೋಂದಣಿ ಪತ್ರಗಳು ಕಳೆದು ಹೋಗಿದ್ದರೆ ನೀವು ಯಾವುದೇ ಕಾರಣಕ್ಕೂ ಚಿಂತಿಸ ಬೇಡಿ. ಏಕೆಂದರೆ ಈಗ ಬಹು ಸುಲಭವಾಗಿ ಮತ್ತೊಮ್ಮೆ ಆಸ್ತಿ ಪತ್ರದ ನಕಲನ್ನು ಅಧಿಕೃತವಾಗಿ ಪಡೆಯಬಹುದು. ಇಲ್ಲಿ ನಕಲು ಅಂದ್ರೆ ಮೂಲ ದಾಖಲೆಗಳ ಮತ್ತೊಂದು ಪ್ರತಿ ಎಂದು ತಿಳಿದುಕೊಳ್ಳಬೇಕು. ಹಾಗಾದ್ರೆ ಕಳೆದು ಹೋದ ಆಸ್ತಿ ಪತ್ರ ವನ್ನು ನೋಂದಣಿ ಕಚೇರಿಯಿಂದ ಅಂದ್ರೆ ಸಬ್ ರಿಜಿಸ್ಟರ್ ಆಫೀಸ್ ನಿಂದ ಹೇಗೆ ಪಡೆದುಕೊಳ್ಳಬಹುದು ಮತ್ತು ಅದರ ಕಂಪ್ಲೆಂಟ್ ಪ್ರಕ್ರಿಯೆ ಯಾವ ರೀತಿ ಇರುತ್ತೆ?ಸಂಪೂರ್ಣವಾಗಿ ತಿಳಿದುಕೊಳ್ಳೋಣ ಆಸ್ತಿ ಪತ್ರ ಕಳೆದುಹೋಗಿದೆ ಎಂದು ಖಚಿತವಾಗಿ ಅನಿಸಿದರೆ ನೀವು ಮಾಡಬೇಕಾದ ಕೆಲಸ ಏನೆಂದರೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಅದರಲ್ಲೂ ತೆಗೆದುಕೊಳ್ಳುವುದನ್ನು ಮರೆಯಬೇಡಿ.

ಹಾಗೆ ಪೊಲೀಸ್ ಸ್ಟೇಷನ್‌ಗೆ ದೂರು ಯಾಕೆ ದಾಖಲಿಸಬೇಕು ಎಂದು ಪ್ರಶ್ನೆ ಬಂದೇ ಬರುತ್ತೆ. ಯಾಕಂದ್ರೆ ಆಸ್ತಿ ಪತ್ರಗಳು ಬಹಳ ಪ್ರಮುಖವಾದ ದಾಖಲೆಯಾಗಿದ್ದು, ಅದರ ಮಹತ್ವ ತುಂಬಾನೇ ಇರುತ್ತೆ. ಹಾಗೆ ಯಾರಿಗಾದರೂ ನಿಮ್ಮ ಆಸ್ತಿ ಪತ್ರ ಸಿಕ್ಕ ರೆ ಅವರು ಅದನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತೆ. ಇನ್ನು ಕೆಲವರು ನಿಮ್ಮನ್ನು ಹಾಳು ಮಾಡಲು ಬೇಕಂತಲೇ ಕಳ್ಳತನ ಮಾಡಿ ನಿಮಗೆ ನಷ್ಟ ಉಂಟು ಮಾಡಲು ಯೋಚಿಸುತ್ತಾರೆ ಕಳ್ಳರು ನಿಮ್ಮ ಆಸ್ತಿ ಪತ್ರದ ಸಹಾಯದಿಂದ ದಾಖಲೆ ಸೃಷ್ಟಿಸಿ ನೋಂದಣಿ ಮಾಡುವುದರ ಮೂಲಕ ಅದನ್ನು ಬೇರೆಯವರಿಗೆ ಮಾಡುವ ಸಾಧ್ಯತೆ ಇರುತ್ತೆ.ಈ ಹಿನ್ನಲೆಯಲ್ಲಿ ನೀವು ಮುಂಜಾಗ್ರತ ಕ್ರಮವಾಗಿ ದಯವಿಟ್ಟು ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸುವುದು ಸೂಕ್ತ ಎಂದು ಹೇಳಬಹುದು.

ದೂರು ಕೊಟ್ಟ ನಂತರ ದೃಢೀಕೃತ ಹೊಸ ಆಸ್ತಿ ಪತ್ರಕ್ಕಾಗಿ ನೀವು ನೋಂದಣಿ ಅಧಿಕಾರಿ ಅಂದ್ರೆ ಸಬ್ ರಿಜಿಸ್ಟರ್ ಆಫೀಸ್ ಅವರಿಗೆ ಒಂದು ಅರ್ಜಿ ಬರೆಯಬೇಕು. ಅರ್ಜಿ ಜೊತೆಗೆ ಉಳಿದ ಹಣ ಕೊಟ್ಟ ದೂರಿನ ಪ್ರತಿಯನ್ನು ಅದರ ರಿಸಲ್ಟ ಕಾಫಿ ಮತ್ತು ನಿಮ್ಮ ಆಸ್ತಿಗೆ ಸಂಬಂಧಿಸಿದ ಪಹಣಿಗಳಾಗಲಿ ಅಥವಾ ನಿಮ್ಮ ಆಸ್ತಿ ಗುರುತಿಸುವಂತಹ ಯಾವುದೇ ದಾಖಲೆಗಳು ಆಗಿದ್ದ ಲ್ಲಿ ಅದು ನಿಮ್ಮ ಬಳಿ ಇದ್ದರೆ ದಾಖಲೆಗಳು ಅದರ ಜೊತೆ ಲಗತ್ತಿಸಬೇಕು. ಲಗತ್ತಿಸಿ ಒಂದು ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಕೊಡ ಬೇಕಾಗಿರುತ್ತೆ. ನಂತರ ನೀವು ಕೊಟ್ಟಿರುವ ದಾಖಲೆಗಳನ್ನು ಪರಿಶೀಲಿಸಿ, ನಿಮ್ಮಿಂದ ನಿಗದಿತ ಶುಲ್ಕ ತೆಗೆದುಕೊಂಡು ನಿಮಗೆ ರಸೀದಿ ಕೊಡುತ್ತಾರೆ. ಅಲ್ಲಿ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಕೊನೆಗೆ ಮುಂದಿನ ಮೂರರಿಂದ ಅಥವಾ ಏಳು ದಿನಗಳ ಒಳಗಾಗಿ ನಿಮಗೆ ದೃಢೀಕರಿಸಿದ ಹೊಸ ಆಸ್ತಿಪತ್ರ ಅವರು ಕೊಡುತ್ತಾರೆ ಎಂದು ಹೇಳಬಹುದು.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಮುಖ್ಯ ಅಂಶಗಳು. ಯಾವು ಅಂದ್ರೆ ಒಂದನೆಯದು ಸಕಾಲ ಯೋಜನೆ ಅಡಿಯ ಲ್ಲಿ ಅರ್ಜಿ ಹಾಕಲಾಗುತ್ತೆ. ಗರಿಷ್ಠ ಏಳು ದಿನಗಳ ಒಳಗಡೆ ನಿಮಗೆ ದೃಡಿಕೃತ ಹೊಸ ಆಸ್ತಿ ಪತ್ರ ಕೊಡಲಾಗುತ್ತೆ ಎಂದು ಹೇಳಬಹುದು. ವೇಳೆ ನಿಮ್ಮ ಆಸ್ತಿ ಪತ್ರ ಹರಿದರೆ ಅಥವಾ ಹಾಳಾದರೆ ಅಥವಾ ನೀರಿನಲ್ಲಿ ತೊಳೆಯಲ್ಪಟ್ಟರೆ ನೀವು ಪೋಲೀಸ್ ಠಾಣೆಗೆ ಹೋಗಿ ದೂರು ಕೊಡೋ ಪ್ರಮೇಯ ಬರೋದಿಲ್ಲ. ಇಲ್ಲಿ ಕೇವಲ ಸರಳವಾಗಿ ಒಂದು ಅರ್ಜಿ ಬರೆದು ಸಬ್ ರಿಜಿಸ್ಟರ್ ಆಫೀಸ್ ಗೆ ಆಸ್ತಿ ಮೂಲ ದಾಖಲೆಗಳ ದೃಢೀಕೃತ ನಕಲನ್ನು ನೀವು ಸಬ್ ರಿಜಿಸ್ಟರ್ ಆಫೀಸಿನ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ.

ಮೂರನೆಯದು ಆಸ್ತಿಪತ್ರಗಳಲ್ಲಿ ಹಲವಾರು ವರ್ಗಗಳು ಇವೆ. ಅದರಂತೆ ಬೇರೆ ಬೇರೆ ರೀತಿಯ ಆಸ್ತಿ ಪತ್ರ ಇರುವುದರಿಂದ ಇದರ ಶುಲ್ಕವು ಇಂತಿಷ್ಟೇ ಎಂದು ಹೇಳಲು ಬರುವುದಿಲ್ಲ. ನಾವು ಗಮನಿಸಿದ ಹಾಗೆ ಅಂದಾಜು ₹500 ವರೆಗೂ ಇರಬಹುದು ಅಷ್ಟೇ.ನಾಲ್ಕನೆಯದು ಬ್ಯಾಂಕ್ ಸಾಲ ಸೌಲಭ್ಯ ಕ್ಕಾಗಿ ಅಥವಾ ಆಸ್ತಿ ಭಾಗ ಮಾಡುವಾಗದಂತೆ ಸಾರ್ವಜನಿಕ ಉದ್ದೇಶ ಕ್ಕಾಗಿ ಸರ್ಕಾರ ನಿಮ್ಮ ಜಮೀನು ತೆಗೆದುಕೊಳ್ಳುವ ಸಂದರ್ಭದಲ್ಲಿ ಮೂಲ ದೃಢೀಕೃತ ಆಸ್ತಿ ಪತ್ರ ಕಡ್ಡಾಯವಾಗಿ ಕೇಳಲಾಗುತ್ತೆ. ಇಂತಹ ಸಂದರ್ಭಗಳಲ್ಲಿ ನೀವು ಈ ಮೇಲಿನಂತೆ ಅರ್ಜಿ ಸಲ್ಲಿಸಿ ದೃಢೀಕೃತ ಆಸ್ತಿಪತ್ರ ಮತ್ತೊಮ್ಮೆ ಪಡೆದುಕೊಳ್ಳ ಬಹುದು.

Leave a Reply

Your email address will not be published. Required fields are marked *