ಮನೆಯಂಗಳದಲ್ಲಿ ಅರಳಿ ನಿಂತ ನಿತ್ಯಪುಷ್ಪಗಳು ಕಣ್ಣಿಗೆ ಎಷ್ಟು ಚೇತೋಹಾರಿಯೋ ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿ. ನಿತ್ಯಪುಷ್ಪ ಮಧುಮೇಹ ರೋಗಿಗಳಿಗೆ ಹೇಳಿ ಮಾಡಿಸಿದಂಥ ಮದ್ದು. ದೇಹದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಪ್ರತಿನಿತ್ಯ ನಿತ್ಯಪುಷ್ಪ ಗಿಡದ ಎಲೆಯನ್ನು ಅಗಿದು ತಿನ್ನಬೇಕು.ಮೇದೋಜೀರಕ ಗ್ರಂಥಿಯ ಬೀಟಾ ಕೋಶಗಳಿಗೆ ಶಕ್ತಿಯನ್ನು ನೀಡುವ ನಿತ್ಯಹರಿದ್ವರ್ಣದ ಹೂವುಗಳು ಮತ್ತು ಎಲೆಗಳಲ್ಲಿ ಆಲ್ಕಲಾಯ್ಡ್ ಅಂಶವಿದೆ. ನಿತ್ಯಪುಷ್ಪದ ಎಲೆಗಳನ್ನು ಜಗಿದು ತಿಂದರೆ ದೇಹದಲ್ಲಿ ಇನ್ಸುಲಿನ್‌ ಉತ್ಪಾದನೆ ಆರಂಭವಾಗುತ್ತದೆ. ಅನಾರೋಗ್ಯಕರ ಜೀವನ ಶೈಲಿ, ಆಹಾರ ಪದ್ಧತಿಯ ಹೊರತಾಗಿ ಆನುವಂಶಿಕ ಕಾರಣಗಳಿಂದಲೂ ಮಧುಮೇಹದ ಸಮಸ್ಯೆ ಕಾಣಿಸಿಕೊಳ್ಳಬಹುದು.

ವ್ಯಕ್ತಿಯ ಮುಖ ಕುತ್ತಿಗೆ ಅಥವಾ ದೇಹದ ಇತರ ಭಾಗಗಳಲ್ಲಿ ಕಪ್ಪು ಕಲೆಗಳು ಮಧುಮೇಹದ ಆರಂಭಿಕ ಲಕ್ಷಣವಾಗಿರಬಹುದು. ಹಾಗಾದರೆ ಇದನ್ನು ನಿವಾರಿಸಲು ನಿತ್ಯಪುಷ್ಪದ ಎಲೆಗಳು ಎಷ್ಟು ಉಪಯುಕ್ತ ಅನ್ನೋದನ್ನು ತಿಳಿಯೋಣ. ಈ ಸಸ್ಯದಲ್ಲಿ 100 ಕ್ಕೂ ಹೆಚ್ಚು ಆಲ್ಕಲಾಯ್ಡ್‌ಗಳಿವೆಯಂತೆ. ಶುಗರ್‌ ಕಾಯಿಲೆ ಇರುವ ರೋಗಿಗಳು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 6-7 ನಿತ್ಯಪುಷ್ಪದ ಎಲೆಗಳನ್ನು ಜಗಿದು ತಿನ್ನಬೇಕು.

ಅದು ಕಷ್ಟವೆನಿಸಿದ್ರೆ ಈ ಹೂವು ಮತ್ತು ಎಲೆಗಳ ರಸವನ್ನು ತೆಗೆದು ಕುಡಿಯಬಹುದು.ರುಚಿಯನ್ನು ಹೆಚ್ಚಿಸಲು ಜೊತೆಗೆ ಟೊಮ್ಯಾಟೋ, ಹಾಗಲಕಾಯಿ, ಸೌತೆಕಾಯಿಗಳನ್ನು ಕೂಡ ಬೆರೆಸಬಹುದು. ನಿತ್ಯಪುಷ್ಪ ಗಿಡದ ಎಲೆಗಳನ್ನು ಒಣಗಿಸಿ ಪುಡಿ ಮಾಡಿ. ಈ ಪುಡಿಯನ್ನು ಪ್ರತಿದಿನ ನೀರಿಗೆ ಹಾಕಿಕೊಂಡು ಕುಡಿಯಬಹುದು. ಆದ್ರೆ ಇದನ್ನು ನಿತ್ಯ ಬಳಸುವ ಮುನ್ನ ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.

Leave a Reply

Your email address will not be published. Required fields are marked *