ದೇಹದ ಬಹು ಮುಖ್ಯ ಅಂಗಗಳಲ್ಲಿ ಕಿಡ್ನಿಗಳು ಸಹ ಮುಖ್ಯವಾದವು. ಆದರೆ ಇಂದು ದೇಶಾದ್ಯಂತ ಬಹಳಷ್ಟು ಮಂದಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ನಮ್ಮ ದೇಹದ ರಕ್ತವನ್ನು ಶುದ್ಧೀಕರಿಸುವ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯ ಹೆಚ್ಚಾಗುತ್ತಿದೆ. ಕಿಡ್ನಿಗೆ ಸಮಸ್ಯೆ ಎದುರಾದ ನಂತರ ಪರಿಹಾರೋಪಾಯಗಳಿಗೆ ಪರದಾಡುವ ಬದಲು ಕಿಡ್ನಿ ಆರೋಗ್ಯಕ್ಕೆ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಒಳಿತಲ್ಲವೇ? ಹಾಗಾಗಿ ಪ್ರತಿನಿತ್ಯ ದೇಹಕ್ಕೆ ಅಗತ್ಯವಾದ ನೀರನ್ನು ನಾವು ಸೇವಿಸುವುದು ಕಿಡ್ನಿಯ ಆರೋಗ್ಯ ಕ್ಕೆ ಒಳ್ಳೆಯದು. ಅತಿ ಕಡಿಮೆ ನೀರು ಕುಡಿಯುವುದು ಈ ಅಭ್ಯಾಸದಿಂದ ಕಿಡ್ನಿಗಳು ಸಕ್ರಿಯವಾಗಿರಲು ತೊಂದರೆಯಾಗುತ್ತದೆ. ಅಲ್ಲದೆ ದೇಹದಲ್ಲಿನ ಕೆಟ್ಟ ಅಂಶಗಳು ಸಂಪೂರ್ಣವಾಗಿ ಹೊರ ಹೋಗಲು ತೊಂದರೆಯಾಗುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿಯುವುದು ಒಳಿತು. ಸಾಮಾನ್ಯವಾಗಿ ಎಂಟರಿಂದ 10 ಗ್ಲಾಸ್ ನೀರು ದೇಹಕ್ಕೆ ಅವಶ್ಯಕ ತುಂಬಾ ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿಯಲ್ಲಿ ಕಾರ್ಯದ ಮೇಲೆ ಪರಿಣಾಮ ಬೀರಬಹುದು.

ಆಗಿನ ವ್ಯಾಸೊಪ್ರೆಸಿನ್ ಹಾರ್ಮೋನ್ ನೀರಿನಂಶ ನಿಯಂತ್ರಿಸಿ ರೆನಲ್ ಕಾರ್ಯ ನೋಡಿಕೊಳ್ಳುತ್ತದೆ. ನೀರನ್ನು ಅತಿಯಾಗಿ ಕುಡಿದರೆ ಇದೂ ಕೂಡ ತೊಂದರೆಗೀಡಾಗಬಹುದು. ಇನ್ನು ಕಿಡ್ನಿ ಮೇಲೆ ನೀರಿನ ಪರಿಣಾಮ ನೋಡುವುದಾದರೆ ತುಂಬಾ ಕಡಿಮೆ ಮಟ್ಟದಲ್ಲಿ ನೀರು ಕುಡಿದರೂ ತೊಂದರೆ ಅನುಭವಿಸಬೇಕಾಗುತ್ತದೆ. ಇದು ಮೂತ್ರನಾಳದ ಸೋಂಕಿಗೆ ಕಾರಣ ವಾಗುತ್ತದೆ. ಇನ್ನು ಕಿಡ್ನಿ ಕಲ್ಲು ಹೇಗೆ ಬರುತ್ತೆ ಅಂತ ನೋಡುವುದಾದರೆ ಸ್ವಲ್ಪವೇ ನೀರನ್ನು ಕುಡಿಯುವವರಲ್ಲಿ ಕಿಡ್ನಿಯಲ್ಲಿ ಉಪ್ಪಿನಂಶ ಉಂಟಾಗಿ ಅದು ಕಿಡ್ನಿಯಲ್ಲಿ ಕಲ್ಲುಗಳನ್ನು ಉಂಟುಮಾಡುತ್ತದೆ.ಇದು ಹೀಗೆ ಮುಂದುವರೆದರೆ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಹೆಚ್ಚು ನೀರು ಕುಡಿದರೆ ಏನಾಗುತ್ತದೆ? ಹೆಚ್ಚು ನೀರನ್ನು ಕುಡಿದರೆ ಕಲ್ಮಶ ವೆಲ್ಲಾ ಹೋಗಿ ಕಿಡ್ನಿ ಆರೋಗ್ಯವಾಗಿರುತ್ತದೆ ಎಂಬ ನಂಬಿಕೆ ಕೆಲವರಲ್ಲಿದೆ.

ಆದರೆ ಇದು ಪೂರ್ತಿ ಸತ್ಯವಲ್ಲ. ನೀರು ಕುಡಿಯುವುದರಿಂದ ಗ್ಲೊಮೆರು ಫೀಲ್ಡ್ ಗೆ ಸಹಾಯ ಮಾಡುತ್ತದೆ.ಆದರೆ ಅತಿಯಾಗಿ ನೀರು ಕುಡಿಯುವುದರಿಂದ ಹೆಚ್ಚು ಒತ್ತಡ ಹಾಕಿದಂತಾಗಿ ಈ ಕಾರ್ಯವು ಬಲಹೀನಗೊಳ್ಳುತ್ತದೆ.ಆದ್ದರಿಂದ ಬೆಳಗ್ಗೆ ಒಂದು ಗ್ಲಾಸ್ ನೀರು ಮತ್ತು ನಿಮಗೆ ಬಾಯಿ ಆರಿದಂತದಾಗಲೆಲ್ಲ ನೀರು ಕುಡಿದರೆ ಒಳ್ಳೆಯದು. ಮೂತ್ರಪಿಂಡದ ಕಾಯಿಲೆಯು ಸಾರ್ವಜನಿಕ ಆರೋಗ್ಯದ ಪ್ರಮುಖ ಕಾಳಜಿಯಾಗಿದೆ. ಕಿಡ್ನಿ ರೋಗವು ಬಹಳ ಮುಂದುವರಿದ ತನಕ ಹೆಚ್ಚಾಗಿ ಪತ್ತೆಯಾಗುವುದಿಲ್ಲ. ದುರದೃಷ್ಟವಶಾತ್, ಯಾರಿಗಾದರೂ ಡಯಾಲಿಸಿಸ್ ಅಥವಾ ಕಸಿ ಅಗತ್ಯವಿರುವಾಗ ಇದು ಸಂಭವಿಸುತ್ತದೆ. ತೊಂದರೆ ಪ್ರಾರಂಭವಾಗುವ ಮೊದಲು ಮೂತ್ರಪಿಂಡದ ಕಾಯಿಲೆಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ. ಪ್ರತಿಯೊಬ್ಬರಿಗೂ ನಿಯಮಿತ ಪರೀಕ್ಷೆಯು ಮುಖ್ಯವಾಗಿದೆ, ಆದರೆ ಅಪಾಯದಲ್ಲಿರುವ ಜನರಿಗೆ ಇದು ಮುಖ್ಯವಾಗಿದೆ. ಮುಖ್ಯವಾಗಿ ನಿಮಗೆ ಯಾರಾದರೂ ಹೋಗದ ಲಕ್ಷಣಗಳು ಕಂಡು ಬಂದರೆ ಆದಷ್ಟು ಬೇಗನೇ ವೈದ್ಯರನ್ನು ಭೇಟಿ ಮಾಡಿ

Leave a Reply

Your email address will not be published. Required fields are marked *