ನಮಸ್ತೆ ಪ್ರಿಯ ಓದುಗರೇ, ಷಣ್ಮುಖ, ಸುಬ್ರಮಣ್ಯ, ಕಾರ್ತಿಕೇಯ ಎಂಬೆಲ್ಲಾ ಹೆಸರಿನಿಂದ ಕರೆಯೂ ಸ್ಕಂದನಿಗೆ ನಮ್ಮ ಭಾರತದ ತುಂಬೆಲ್ಲಾ ಅನೇಕ ದೇವಾಲಯಗಳನ್ನು ಕಟ್ಟಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಿರುವುದನ್ನು ನೋಡಿರ್ತೀರಿ,ಆದ್ರೆ ಈ ದೇಗುಲದಲ್ಲಿ 6 ಮುಖವುಳ್ಳ ಷಣ್ಮುಖನ ಪ್ರತಿಮೆಯನ್ನು ಆಲಯದ ಗೋಪುರದ ಮೇಲೆ ಕೆತ್ತಲಾಗಿದೆ. ಈ ರೀತಿ ಷಣ್ಮುಖನ ಮುಖವನ್ನು ಗೋಪುರದ ಮೇಲೆ ಹೊಂದಿರುವ ವಿಶ್ವದ ಏಕೈಕ ದೇವಾಲಯ ಎಂಬ ಖ್ಯಾತಿಗೆ ಈ ಆಲಯ ಭಾಜನವಾಗಿದೆ. ಬನ್ನಿ ಹಾಗಾದರೆ ಇವತ್ತಿನ ಲೇಖನದಲ್ಲಿ ಆ ಆಲಯ ಎಲ್ಲಿದೆ ಅಲ್ಲಿನ ಮಹಿಮೆಗಳನ್ನು ಏನೇನು ಎಂದು ತಿಳಿದುಕೊಂಡು ಬರೋಣ. 240 ಅಡಿಗಳಷ್ಟು ಎತ್ತರವಿರುವ ಗುಡ್ಡದ ಮೇಲೆ ಶೃಂಗಗಿರಿಯ ಷಣ್ಮುಖ ದೇವರ ದೇವಾಲಯ ಇದೆ. ಈ ದೇಗುಲದ ಮುಂದೆ ಹಾವಿನ ಹುತ್ತದ ಕಲಾಕೃತಿ ಒಳಗೆ ತ್ರಿಶೂಲವನ್ನಾ ನಿರ್ಮಿಸಿರುವದನ್ನು ನೋಡಬಹುದು. ನೂರಾರು ಮೆಟ್ಟಿಲುಗಳನ್ನು ಹತ್ತಿಕೊಂಡು ಹೋದ್ರೆ ನಮಗೆ ಗರ್ಭ ಗುಡಿಯಲ್ಲಿ ಮಂದಸ್ಮಿತ ಆಗಿ ಕುಳಿತ ಷಣ್ಮುಖ ದೇವರ ದರ್ಶನ ಆಗುತ್ತೆ.

ಬದುಕಿನಲ್ಲಿ ಏನೇ ಕಷ್ಟ ಇದ್ರೂ ಇಲ್ಲಿಗೆ ಬಂದು ಭಕ್ತಿಯಿಂದ ಸುಬ್ರಮಣ್ಯ ಸ್ವಾಮಿಗೆ ಪೂಜೆ ಮಾಡಿಸಿಕೊಂಡು ಹೋದ್ರೆ ಆ ಕಷ್ಟಗಳು ಎಲ್ಲವೂ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಗೋಪುರದ ಮೇಲಿರುವ ಷಣ್ಮುಖನ 6 ತಲೆಯ ವಿಗ್ರಹವು ನೋಡುಗರನ್ನು ಮಂತ್ರ ಮುಗ್ದರನ್ನಾಗಿ ಮಾಡುತ್ತದೆ. ಈ ರೀತಿ ಷಣ್ಮುಖನ ವಿಗ್ರಹವನ್ನು ಗೋಪುರದ ಮೇಲೆ ಹೊಂದಿರುವ ವಿಶ್ವದ ಏಕೈಕ ದೇವಾಲಯ ಎಂಬ ಖ್ಯಾತಿಗೆ ಈ ಆಲಯ ಭಾಜನವಾಗಿದೆ. ಇಷ್ಟು ಮಾತ್ರವಲ್ಲದೆ ಈ ದೇಗುಲದ ಒಟ್ಟು ಎತ್ತರ 123 ಅಡಿಗಳಷ್ಟು ಇದ್ದರೆ,ಅದ್ರಲ್ಲಿ 62 ಅಡಿ ಎತ್ತರವನ್ನು ಗೋಪುರವು ಹೊಂದಿದೆ ಎನ್ನುವುದು ಈ ಆಲಯದ ವಸ್ತು ಶಿಲ್ಪದ ವಿಶೇಷತೆ ಆಗಿದೆ. ಇನ್ನೂ ಈ ಕ್ಷೇತ್ರದಲ್ಲಿ ಸ್ವತಃ ಸುಬ್ರಮಣ್ಯ ಸ್ವಾಮಿಯೇ ಇಷ್ಟ ಪಟ್ಟು ಬಂದು ನೆಲೆಸಿದ ಎಂದು ಹೇಳಲಾಗುತ್ತದೆ. ಶೃಂಗೇರಿಯ ಜಗದ್ಗುರುಗಳು ಆದ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಕನಸಿನಲ್ಲಿ ಒಂದು ಬಾರಿ ಷಣ್ಮುಖ ದೇವರು ಬಂದು ಭಕ್ತನೇ ನನ್ನನ್ನು ಶೃಂಗಗಿರಿ ಎಂಬ ಬೆಟ್ಟದ ಮೇಲೆ ಪ್ರತಿಷ್ಠಾಪಿಸು ಅತ್ಯಂತ ಸುಂದರವಾದ ಆ ಪ್ರದೇಶದಲ್ಲಿ ನಾನು ಬಂದು ನೆಲೆಸಲು ಇಚ್ಛೆ ಪಡುತ್ತಿದ್ದೇನೆ ಎಂದು ಹೇಳಿದನಂತೆ. ಸಾಕ್ಷಾತ್ ಸುಬ್ರಮಣ್ಯ ಸ್ವಾಮಿ ಕನಸಿನಲ್ಲಿ ಬಂದು ಹೇಳಿದ್ದರಿಂದ ಈ ಸ್ಥಳದಲ್ಲಿ ಭವ್ಯವಾದ ಆಲಯವನ್ನು ನಿರ್ಮಿಸಲಾಯಿತು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಇಲ್ಲಿ ಸುಬ್ರಮಣ್ಯ ಸ್ವಾಮಿ ಜೊತೆಗೆ ಪಂಚಮುಖಿ ಗಣಪತಿಯ ದರ್ಶನವನ್ನು ಮಾಡಬಹುದು. ಅತ್ಯಂತ ಪ್ರಶಾಂತವಾದ ವಾತಾವರಣದಲ್ಲಿ ಇರುವ ಈ ಆಲಯಕ್ಕ ಬಂದರೆ ಬದುಕಿನ ಭವ ಬಂಧಗಳು ದೂರವಾಗಿ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಪ್ರತಿನಿತ್ಯ ಇಲ್ಲಿ ದೇವರಿಗೆ ಶೈವಾಗಮ ರೀತಿಯ ಪೂಜೆ ಮಾಡಲಾಗುತ್ತಿದ್ದು, ಸುಬ್ರಮಣ್ಯ ಷಷ್ಠಿ ಅಂದು ಷಣ್ಮುಖನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಭಕ್ತರ ಕೋರಿಕೆಗಳನ್ನು ಶೀಘ್ರವಾಗಿ ಮಾನ್ಯ ಮಾಡುವ ಈ ದೇವನನ್ನು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12.30 ಗಂಟೆ ವರೆಗೆ ಸಂಜೆ 4.30 ರಿಂದ ರಾತ್ರಿ 9 ಗಂಟೆವರೆಗೂ ದರ್ಶನ ಮಾಡಬಹುದು. ಅತ್ಯಂತ ಆಕರ್ಷಣೀಯ ಹಾಗೂ ಮ್ಮಸ್ಸಿಗೆ ಮುದವನ್ನು ನೀಡುವ ಷಣ್ಮುಖ ನ ಈ ಆಲಯವು, ರಾಜಧಾನಿ ಬೆಂಗಳೂರಿನಿಂದ ರಾಜರಾಜೇಶ್ವರಿ ನಗರದ ಶೃಂಗಗಿರಿ ಎನ್ನುವ ಗುಡ್ಡದ ಮೇಲಿದ್ದು, ಈ ಆಲಯವು ಮೆಜೆಸ್ಟಿಕ್ ಇಂದ ಕೇವಲ 12 ಕಿಮೀ ದೂರದಲ್ಲಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ 225c, 225f, 373m, 375b, 375ga, 401r ಬಸ್ ಮುಖಾಂತರ ಈ ದೇಗುಲಕ್ಕೆ ಸುಲಭವಾಗಿ ತಲುಪಬಹುದು. ಬೆಂಗಳೂರು ಉತ್ತಮವಾದ ರಸ್ತೆ ಹಾಗೂ ರೈಲ್ವೇ ಹಾಗೂ ವಿಮಾನ ಯಾನದ ಸಂಪರ್ಕವನ್ನು ಹೊಂದಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಷಣ್ಮುಖ ನ ಆಲಯವನ್ನು ದರ್ಶನ ಮಾಡಿ ಪುನೀತರಾಗಿ . ಶುಭದಿನ.

Leave a Reply

Your email address will not be published. Required fields are marked *