ದಾಳಿಂಬೆ ಸಿಪ್ಪೆಯನ್ನು ಸ್ವಲ್ಪ ನೀರಿನಲ್ಲಿ ಚೆನ್ನಾಗಿ ಕುದಿಸಿಕೊಂಡು ಬೆಚ್ಚಗೆ ಇರುವಾಗ ಬಾಯಿ ಮುಕ್ಕಳಿಸಬಹುದು ಇತರ ಮಾಡುವುದರಿಂದ ಸಮಸ್ಯೆ ಇದ್ದರೆ ದೂರವಾಗುತ್ತದೆ. ಕಸದ ಸಮಸ್ಯೆ ಗಂಟಲು ಉರಿ ಸಮಸ್ಯೆ ಕಿರಿಕಿರಿ ಸಮಸ್ಯೆ ಎಲ್ಲವೂ ದೂರವಾಗುತ್ತದೆ. ದಾಳಿಂಬೆ ಹಣ್ಣು ನಮ್ಮ ಆರೋಗ್ಯಕ್ಕೆ ಖಂಡಿತವಾಗಿಯೂ ತುಂಬಾನೇ ಒಳ್ಳೆಯದು ಬೇರೆ ಬೇರೆ ರೀತಿಯಲ್ಲಿ ಸಹಾಯವಾಗುತ್ತದೆ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದಕ್ಕೆ.

ಆದರೆ ನಾವು ನಾರ್ಮಲ್ ಆಗಿ ದಾಳಿಂಬೆ ಹಣ್ಣನ್ನು ತಿಂದು ಅಥವಾ ದಾಳಿಂಬೆ ಬೀಜಗಳನ್ನು ತಿಂದು ತಿಪ್ಪೆಯನ್ನು ಬಿಸಾಕುತ್ತೇವೆ ಹಣ್ಣನ್ನು ಬಿಡಿಸುವಾಗ ಮಧ್ಯಸ್ಥಿ ಬರದೇ ಇರುವ ತರಹ ನೋಡಿಕೊಳ್ಳುತ್ತೇವೆ ಆದರೆ ನಾವು ಬಿಸಾಕುವಂತಹ ದಾಳಿಂಬೆ ಸಿಪ್ಪೆಯಲ್ಲಿ ಎಷ್ಟೊಂದು ಔಷಧೀಯ ಗುಣಗಳು ಇವೆ ಅಂತ ಗೊತ್ತಾದರೆ ಖಂಡಿತವಾಗಿಯೂ ನಾವು ಯಾವತ್ತೂ ಬಿಸಾಡುವುದಿಲ್ಲ.

ಇವತ್ತಿನ ಮಾಹಿತಿಯಲ್ಲಿ ನಾವು ದಾಳಿಂಬೆ ಸಿಪ್ಪೆಯನ್ನು ಯಾವ ಯಾವ ರೀತಿ ಬಳಸಬಹುದು ಯಾವ ಯಾವ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಟ್ಟುಕೊಳ್ಳುವುದಕ್ಕೆ ಇದು ಸಹಾಯವಾಗುತ್ತದೆ ಅಂತ ನೋಡಿಕೊಳ್ಳೋಣ ಬನ್ನಿ..

ಈ ದಾಳಿಂಬೆ ಸಿ ಪಿ ಒಂದು ತರಹ ಒಗರು ಇರುವಂತಹದ್ದು ಅಲ್ಲ ರುಚಿಯಲ್ಲಿ ಒಂದು ರೀತಿ ಒಗರು ಇರುತ್ತದೆ ಹಾಗಾಗಿ ನಮಗೆ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಟ್ಟುಕೊಳ್ಳುವುದಕ್ಕೆ ತುಂಬಾನೇ ಸಹಾಯವಾಗುತ್ತದೆ. ಅಜೀರ್ಣ ಹೊಟ್ಟಿ ನೋವು ಇತರ ಎಲ್ಲ ಸಮಸ್ಯೆಗಳು ಇದ್ದರೆ ನಾವು ದಾಳಿಂಬೆ ಸಿಪ್ಪೆಯನ್ನು ಬಳಸಬಹುದು. ಅದರಿಂದ ಒಂದು ರುಚಿಯಾದ ತಂಬುಳಿ ಕೂಡ ಮಾಡಬಹುದು ಈ ರೀತಿ ರೆಸಿಪಿಯನ್ನು ಕೂಡ ನಾವು ಮಾಡಿಕೊಂಡು ಬಳಸುವುದರಿಂದ ಅಜೀರ್ಣ ಹೊಟ್ಟಿ ನೋವು ಯಾವುದೇ ಇದ್ದರೂ ಕೂಡ ಕಡಿಮೆಯಾಗುತ್ತದೆ.

ಇನ್ನು ನಮ್ಮ ಚರ್ಮಕ್ಕೆ ತುಂಬಾನೇ ಒಳ್ಳೆಯದು ಏನಾದರೂ ಮುಖದಲ್ಲಿ ಪಿಂಪಲ್ಸ್ ಗಳು ಏನಾದರೂ ಆಗುತ್ತಿದ್ದರೆ ನಾವು ಈ ದಾಳಿಂಬೆ ಸಿಪ್ಪೆಯನ್ನು ಬಳಸಬಹುದು ದಾಳಿಂಬೆ ಸಿಪ್ಪೆಯನ್ನು ಒಣಗಿಸಿ ಚೆನ್ನಾಗಿ ಪೌಡರ್ ಮಾಡಿ ಇಟ್ಟುಕೊಂಡು ಸ್ಟೋರ್ ಮಾಡಬಹುದು. ಆ ಪುಡಿಯ ಜೊತೆ ಸ್ವಲ್ಪ ನಿಂಬೆರಸ ಅಥವಾ ರೋಸ್ ವಾಟರ್ ಅಥವಾ ಏನಾದರೂ ಒಂದು ಡ್ರೈ ಸ್ಕಿನ್ ಆಗಿದ್ದರೆ ಅಂತಹವರು ಹಾಲು ಮತ್ತು ಮೊಸರನ್ನು ಮಿಕ್ಸ್ ಮಾಡಿಕೊಂಡು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಹತ್ತು ಹದಿನೈದು ನಿಮಿಷಗಳ ಮೇಲೆ ಮುಖ ತೊಳೆಯಬಹುದು ಈ ರೀತಿ ಮಾಡುವುದರಿಂದ ಮುಖದ ಮೇಲೆ ಮೊಡವೆಗಳು ಎಲ್ಲಾ ದೂರವಾಗುತ್ತವೆ.

ಇತ್ತೀಚಿನ ದಿನಗಳಲ್ಲಿ ಕೆಲವರಿಗೆ ಸಣ್ಣ ವಯಸ್ಸಿಗೆಯೇ ಮುಖದ ಚರ್ಮದ ಮೇಲೆ ಸುಕ್ಕುಗಳು ಕಂಡು ಬರುವ ಕಾರಣ ವಯಸ್ಸಾದವರ ಹಾಗೆ ಕಾಣುತ್ತಾರೆ. ಆದರೆ ಈ ಸಮಸ್ಯೆಗೆ ದಾಳಿಂಬೆ ಸಿಪ್ಪೆಗಳು ಪರಿಹಾರ ಒದಗಿಸುತ್ತವೆ. ಸಣ್ಣ ವಯಸ್ಸಿನಲ್ಲಿ ವಯಸ್ಸಾದವರ ಹಾಗೆ ಕಾಣುವ ಪ್ರಕ್ರಿಯೆಯನ್ನು ಇದು ದೂರ ಮಾಡುತ್ತದೆ.

Leave a Reply

Your email address will not be published. Required fields are marked *