ನವಮಿ ಹಬ್ಬ ಬಂದ ಕ್ಷಣ ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಬರುವ ಹಣ್ಣು, ಕರ್ಬುಜ. ಈ ಸಿಹಿಯಾದ ಹಣ್ಣಿನಿಂದ ಪಾನಕವನ್ನು ತಯಾರಿಸಿ ಹಬ್ಬವನ್ನು ಸಂಭ್ರಮಿಸುತ್ತಾರೆ ಕೇವಲ ಹಬ್ಬಕ್ಕೆ ಮಾತ್ರ ಸೀಮಿತವಾಗಿರುವ ಹಣ್ಣನ್ನು ಪ್ರತಿದಿನ ಸೇವನೆ ಮಾಡುವುದರಿಂದ ಆಗುವ ಲಾಭಗಳು ಎಷ್ಟು ಕೊಟ್ಟ ಇದು ಒಂದು ರಸಭರಿತ ಹಣ್ಣು ಆಗಿದ್ದು ಬೇಸಿಗೆಯಲ್ಲಿ ಸೇವಿಸಲು ಸೂಕ್ತವಾಗಿದೆ ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಒಳಗೊಂಡಿರುತ್ತದೆ ಈ ಬೇಸಿಗೆ ಸಮಯದಲ್ಲಿ ತಾಜಾ ಹಣ್ಣು ಮತ್ತು ಜ್ಯೂಸ್ ಗಳನ್ನು ಸೇವನೆ ಮಾಡುವುದರಿಂದ ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಕರ್ಬುಜ ಅಥವಾ ಪಾನಕವನ್ನು ಠೇವನೆ ಮಾಡುವುದರಿಂದ ನಿಮಗೆ ಸಿಗುವಂತಹ ಆರೋಗ್ಯದ ಲಾಭಗಳ ಬಗ್ಗೆ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ. ಮನುಷ್ಯನಿಗೆ ದೇಹದಲ್ಲಿ ರಕ್ತದ ಒತ್ತಡದ ಸಮಸ್ಯೆ ಹತೋಟಿಗೆ ಬರಬೇಕಾದರೆ ಮೊದಲು ಎಲೆಕ್ಟ್ರೋಲೈಟ್ ಗಳು ಸಮತೋಲನ ಆಗಬೇಕು. ಇದರಿಂದ ರಕ್ತ ಸಂಚಾರ ಸುಗಮವಾಗಿ ದೇಹದಲ್ಲಿ ರಕ್ತದ ಒತ್ತಡ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಪೊಟ್ಯಾಶಿಯಂ ಖನಿಜಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ ಯಾವುದೇ ಆಹಾರ ಈ ಕೆಲಸವನ್ನು ಸುಲಭವಾಗಿ ಮಾಡುತ್ತದೆ.

ಇತ್ತೀಚಿಗೆ ಚಿಕ್ಕವಯಸ್ಸಿನಲ್ಲಿಯೇ ಬಹುತೇಕರು ಸಮಸ್ಯೆಯಿಂದ ಬಳಲುತ್ತಿದ್ದಾರೆ ಅದರ ಔಷಧಿಗಳ ಬದಲಾಗಿ ಆಹಾರದ ಮೂಲಕ ಆರೋಗ್ಯದ ಸಮಸ್ಯೆಗಳನ್ನು ನಿರ್ವಹಿಸಿಕೊಳ್ಳಿ ಕರ್ಬುಜ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಮತ್ತು ಪೊಟ್ಯಾಶಿಯಂ ಅನ್ನು ಹೊಂದಿದೆ ಇದು ನಿಮ್ಮ ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಇದರಲ್ಲಿರುವ ನೀರಿನ ಫೈಬರ್ ಅಂಶವು ಇನ್ನು ಕರ್ಬುಜ ಹಣ್ಣು ಅಥವಾ ಪಾನಕವನ್ನು ಸೇವನೆ ಮಾಡುವುದರಿಂದ ನಿಮ್ಮ ಜೀವನ ಕ್ರಿಯೆ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು.

ಏಕೆಂದರೆ ಇದರಲ್ಲಿ ಫೈಬರ್ ಶ್ರೀಮಂತವಾಗಿದ್ದು ಇದನ್ನು ಮಲಬದ್ಧತೆಯನ್ನು ತಡೆಯಲು ಸಾಕಷ್ಟು ಸಹಾಯ ಮಾಡುತ್ತದೆಕರ್ಬುಜ ಮತ್ತು ಜ್ಯೂಸ್ ಸೇವನೆಯಿಂದ ಕರುಳಿನ ನಿಯಂತ್ರಿಸಲು ಉತ್ತೇಜಿಸುತ್ತದೆ ಬೇಸಿಗೆ ಕಾಲಲಿ ನಿಮ್ಮ ಹೊಟ್ಟೆಯನ್ನು ತಂಪಾಗಿರಿಸುತ್ತದೆ ಅಲ್ಲದೆ ಕರ್ಬುಜ ಹಣ್ಣು 90 ಪರ್ಸೆಂಟ್ ನೀರನ್ನು ಹೊಂದಿರುವುದರಿಂದ ಈ ಬೇಸಿಗೆ ಕಾಲದಲ್ಲಿ ದೇಹವನ್ನು ಹೈಡ್ರೇಟ್ ಮಾಡುತ್ತದೆ.

ನಾರಿನ ಅಂಶಗಳನ್ನು ಒದಗಿಸುವುದರ ಜೊತೆಗೆ ಮಲಬದ್ಧತೆಯ ಗುಣ ಲಕ್ಷಣಗಳನ್ನು ಮಾಯವಾಗಿಸುತ್ತದೆ. ಕೆಲವರು ಮಲ ವಿಸರ್ಜನೆಯ ಸಮಯದಲ್ಲಿ ಬಹಳಷ್ಟು ಕಷ್ಟ ಪಡುತ್ತಾರೆ. ಅದಕ್ಕೆ ಕಾರಣ ಅವರ ಆಹಾರ ತ್ಯಾಜ್ಯ ಬಹಳಷ್ಟು ಗಟ್ಟಿಯಾಗಿರುತ್ತದೆ. ಇಂತಹ ಸಮಸ್ಯೆಯನ್ನು ಕರ್ಬುಜ ಹಣ್ಣು ಸುಲಭವಾಗಿ ನಿವಾರಣೆ ಮಾಡುತ್ತದೆ.

Leave a Reply

Your email address will not be published. Required fields are marked *