ಮನೆಯಲ್ಲಿ ತರಕಾರಿ ಮತ್ತು ದಾಲ್ ರುಚಿಯನ್ನು ಹೆಚ್ಚಿಸಲು ಬಳಸಲಾಗುವ ಟೊಮೆಟೊಗಳನ್ನು ತಿನ್ನುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಟೊಮೆಟೊ ಅನ್ನು ಕರ್ರಿ, ಬೆಳೆ, ಸಲಾಡ್‌, ಸೂಪ್‌ ಮತ್ತು ಚಟ್ನಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಟೊಮ್ಯಾಟೋ ತ್ವಚೆಯ ಆರೋಗ್ಯಕ್ಕೆ ತುಂಬಾ ಹಿತಕಾರಿ ಎಂದು ಪರಿಗಣಿಸಲಾಗಿದೆ. ಸೌಂದರ್ಯಕ್ಕಾಗಿ ಬಳಸುವ ಅನೇಕ ಮನೆಮದ್ದುಗಳಲ್ಲಿ ಇದನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲ, ಟೊಮೇಟೊವನ್ನು ಹಲವು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿಯೂ ಬಳಸುತ್ತಾರೆ. ಟೊಮೆಟೊ ವಿಟಮಿನ್ ಸಿ, ಲೈಕೋಪೀನ್, ವಿಟಮಿನ್ ಕೆ, ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಟೊಮೆಟೊ ತೂಕ ಇಳಿಸಲು ಕೂಡ ಸಹಾಯ ಮಾಡುತ್ತದೆ. ಟೊಮ್ಯಾಟೋ ಸೇವನೆಯಿಂದ ಆಗುವ ಲಾಭಗಳೇನು ತಿಳಿದುಕೊಳ್ಳೋಣ ಬನ್ನಿ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯದೆ ಮಾಗಿದ ಟೊಮೆಟೊವನ್ನು ಸೇವಿಸಿದರೆ, ಅದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ರಿಕೆಟ್ಸ್‌ನಿಂದ ಬಳಲುತ್ತಿರುವ ಮಕ್ಕಳಿಗೆ ದಿನಕ್ಕೆ ಒಂದು ಲೋಟ ಟೊಮೆಟೊ ರಸವನ್ನು ನೀಡಬೇಕು. ಇದರಿಂದ ಅವರಿಗೆ ತುಂಬಾ ಪ್ರಯೋಜನ ಸಿಗುತ್ತದೆ. ಟೊಮೆಟೊ ತಿನ್ನುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮವಾಗುತ್ತದೆ. ತೂಕವನ್ನು ಇಳಿಕೆ ಮಾಡಿಕೊಳ್ಳಲು, ನೀವು ಟೊಮೆಟೊಗಳನ್ನು ಸೇವಿಸಿ. ನೀವು ಸಲಾಡ್‌ನಲ್ಲಿ ಟೊಮೆಟೊ ತಿನ್ನಬಹುದು ಅಥವಾ 1-2 ಗ್ಲಾಸ್ ಟೊಮೆಟೊ ರಸವನ್ನು ಕುಡಿಯಬಹುದು.

ಸಂಧಿವಾತದಿಂದ ತೊಂದರೆ ಇರುವವರು ಟೊಮೆಟೊವನ್ನು ಸೇವಿಸಬೇಕು. ಸೆಲರಿಯನ್ನು ಟೊಮೆಟೊ ರಸದೊಂದಿಗೆ ಬೆರೆಸಿ ಕುಡಿಯುವುದರಿಂದ ಪರಿಹಾರ ಸಿಗುತ್ತದೆ. ಗರ್ಭಿಣಿಯಾಗಿದ್ದರೆ ನೀವು ಟೊಮೆಟೊ ಸೇವಿಸಬೇಕು. ಈ ಕಾರಣದಿಂದಾಗಿ ದೇಹವು ವಿಟಮಿನ್ ಸಿ ಅನ್ನು ಪಡೆಯುತ್ತದೆ ಮತ್ತು ಇದು ಗರ್ಭಾವಸ್ಥೆಯಲ್ಲಿ ದೇಹಕ್ಕೆ ತುಂಬಾ ಲಾಭಕಾರಿಯಾಗಿದೆ. ಹೊಟ್ಟೆ ಹುಳುಗಳ ಸಮಸ್ಯೆ ಇದ್ದರೆ ಖಾಲಿ ಹೊಟ್ಟೆಯಲ್ಲಿ ಟೊಮೆಟೊವನ್ನು ಕರಿಮೆಣಸಿನೊಂದಿಗೆ ಬೆರೆಸಿ ತಿನ್ನುವುದು ಒಳ್ಳೆಯದು. ನಿತ್ಯವೂ ಹಸಿ ಟೊಮೇಟೊ ತಿಂದರೆ ಮುಖದಲ್ಲಿ ಹೊಳಪು ಕಾಣಿಸಿಕೊಳ್ಳುತ್ತದೆ. ಟೊಮೇಟೊ ತಿನ್ನುವುದಲ್ಲದೆ ಇದನ್ನು ಮುಖಕ್ಕೆ ಹಚ್ಚುವುದರಿಂದ ಮುಖ ಕಾಂತಿಯುತವಾಗುತ್ತದೆ. ಇದಕ್ಕಾಗಿ ಟೊಮೇಟೊ ತಿರುಳನ್ನು ಮುಖಕ್ಕೆ ಉಜ್ಜಿ, ಹೊಳಪು ಪಡೆಯಿರಿ. ಮಧುಮೇಹದಲ್ಲಿ ಟೊಮ್ಯಾಟೊ ತಿನ್ನುವುದು ಪ್ರಯೋಜನಕಾರಿಯಾಗಿದೆ ಮತ್ತು ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ.

Leave a Reply

Your email address will not be published. Required fields are marked *