ನಮಸ್ತೆ ಪ್ರಿಯ ಓದುಗರೇ, ದೇವರನ್ನು ಬಿಟ್ಟರೆ ನಮಗೆ ಇವರೇ ದೈವ ಎಂಬಂತೆ ತೀರಿ ಹೋದವರ ಭಾವಚಿತ್ರಗಳು ಮನೆಯಲ್ಲಿ ಹೇಗೆ ಇರಬೇಕು? ಇವತ್ತಿನ ಲೇಖನದಲ್ಲಿ ಮನೆಯಲ್ಲಿ ಪೂರ್ವಜರ ಭಾವಚಿತ್ರವನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಮತ್ತು ಯಾವ ದಿಕ್ಕಿನಲ್ಲಿ ಇಡಲೇ ಬಾರದು. ಅವರ ಭಾವಚಿತ್ರಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ಸಂಕ್ಷಪ್ತವಾ ಗಿ ತಿಳಿದುಕೊಳ್ಳೋಣ ಸ್ನೇಹಿತರೆ. ನಮ್ಮ ಪೂರ್ವಿಕರು ಅಂದ್ರೆ ನನ್ನ ತಂದೆ ಅವ್ರ ತಂದೆ ಅವ್ರ ತಂದೆ ಒಂದು ಪರಂಪರಾಗತವಾಗಿ ಬಂದಿರುವ ಭಾವಚಿತ್ರಗಳು ತುಂಬಾ ಹಿಂದಿನವು ಆದ್ರೆ ಭಾವಚಿತ್ರಗಳು ಇರ್ತಾ ಇರಲಿಲ್ಲ. ಕೈಯಲ್ಲಿ ಅವರ ಮೂರ್ತಿಗಳನ್ನು ಚಿತ್ರ ಬರೀತಾ ಇದ್ರು. ಅವರಿಗೆ ನಾವು ದೈವದ ಸ್ಥಾನವನ್ನು ಕೊಟ್ಟಿರುತ್ತಿವಿ. ದೇವರನ್ನು ಬಿಟ್ಟರೆ ನಮಗೆ ಇವರೇ ದೈವ ಆಗಿರ್ಥಾರೆ. ಅಂತಹ ತೀರಿ ಹೋದಂತಹ ಪೂರ್ವಜರ ಭಾವಚಿತ್ರಗಳು ಮನೆಯಲ್ಲಿ ಹೇಗೆ ಇರಬೇಕು ಅನ್ನೋದನ್ನ ಮೊದಲು ತಿಳಿದುಕೊಳ್ಳೋಣ. ಕೆಲವೊಬ್ಬರ ಮನೆಯಲ್ಲಿ ಬೇಕಾಬಿಟ್ಟಿ ಬಿದ್ದಿರುತ್ತದೆ, ಗಾಜು ಓಡೆದಿರುತ್ತೆ, ಫ್ರೇಮ್ ಹಾಳಾಗುತ್ತವೆ, ಜಿರಳೆ ತಿಂದಿರುತ್ತವೆ ಅಂತಹ ಯಾವುದೇ ರೀತಿಯ ಭಾವಚಿತ್ರಗಳನ್ನೂ ಯಾವುದೇ ರೀತಿಯಲ್ಲಿ ಮನೆಯಲ್ಲಿ ಇಟ್ಟುಕೊಳ್ಳಲು ಹೋಗಬೇಡಿ. ಅದರಿಂದ ಮನ ಶಾಂತಿ ಹಾಳಾಗುತ್ತದೆ.

ಈ ಪೂರ್ವಜರ ಭಾವಚಿತ್ರ ಗಳನ್ನು ಎಲ್ಲಿ ಹಾಕಬಾರದು ಎಂದ್ರೆ ಪ್ರಪ್ರಥಮವಾಗಿ ಮನೆಯ ಒಳಗಡೆ ಬರ್ತಾ ಇದ್ದ ಹಾಗೆಯೇ ಕಾಣಿಸುವ ಹಾಗೆ ಯಾವುದೇ ರೀತಿಯಲ್ಲಿ ಭಾವಚಿತ್ರಗಳನ್ನು ಹಾಕುವ ಹಾಗಿಲ್ಲ. ಯಾಕೆ ಹಾಕಬಾರದು ಎಂದರೆ ಆಗಲೇ ಹೇಳಿದ ರೀತಿ ತೀರಿ ಹೋದ ಪೂರ್ವಜರು. ಕೆಲವೊಮ್ಮೆ ಸೆಂಟಿಮೆಂಟ್ ಬಂದಿರುತ್ತೆ. ಆ ಭಾವಚಿತ್ರ ನೋಡುತ್ತಿದ್ದ ಹಾಗೆ ಬೇರೆ ರೀತಿ ಕೆಟ್ಟ ಭಾವ ಒಳ್ಳೆಯ ಭಾವವು ಬಂದಿರುತ್ತದೆ. ಅವರ ಮುಕ್ತಿಯಿಂದ ಒಳ್ಳೆಯದು ನಡೆದಿದ್ದರೆ ಒಳ್ಳೆಯ ಭಾವನೆಗಳು ಕೆಟ್ಟದ್ದು ನಡೆದಿದ್ದರೆ ಕೆಟ್ಟ ಭಾವನೆಗಳು ಬರುತ್ತಾ ಇರುತ್ತವೆ. ಹಾಗಾಗಿ ಯಾವುದೇ ಒಬ್ಬ ವ್ಯಕ್ತಿ ಯಾವುದೇ ರೀತಿಯ ಭಾವೋದ್ವೇಗಕ್ಕೆ ಒಳಗಾಗಬಾರದು ಎಂದರೆ ಆ ಭಾವಚಿತ್ರಗಳನ್ನು ನೋಡಬಾರದು. ಎಲ್ಲಾದರೂ ಮನೆಯ ಮೂಲೆಯ ಬದಿಯಲ್ಲಿ ದಕ್ಷಿಣಾಭಿಮುಖವಾದ ಗೋಡೆ ಅಥವಾ ದಕ್ಷಿಣದ ಗೋಡೆಗೆ ಪೂರ್ವಜರ ಭಾವಚಿತ್ರಗಳನ್ನು ಹಾಕಿಕೊಳ್ಳಬೇಕು. ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಅಂತ ಹೇಳ್ತೀವಿ. ಹಾಗೆಯೇ ದಕ್ಷಿಣ ಮುಖಕ್ಕೆ ಹಾಕಿರುವ ಅವರ ಭಾವಚಿತ್ರ ನೋಡುತ್ತಿದ್ದ ಹಾಗೆ ನಮಗೆ ಅವ್ರಿಲ್ಲ ಅನ್ನುವಂಥದ್ದು ಗೊತ್ತಾಗಿ ಬಿಡಬೇಕು. ಅವರು ಕಾಲವಾಗಿದ್ದಾರೆ, ಅವರು ನಮ್ಮನ್ನು ತೊರೆದು ಹೋಗಿದ್ದಾರೆ. ಈ ಇಳೆಯಲ್ಲಿ ಅವರ ವ್ಯಾಪಾರ ಮುಗಿದಿದೆ. ತಮ್ಮ ವಾಸಸ್ಥಾನ ಕ್ಕ ಹೋಗಿದ್ದಾರೆ ಅನ್ನುವ ಸಂಕೇತವೂ ಅದರಲ್ಲಿ ಅಡಕವಾಗಿ ಇರುವುದರಿಂದ ನಮ್ಮ ಪೂರ್ವಿಕರ ತೀರಿ ಹೋದಂತವರ ಭಾವಚಿತ್ರಗಳನ್ನು ಮನೆಯ ದಕ್ಷಿಣ ಗೋಡೆಯಲ್ಲಿ ಹಾಕುವಂಥ ದ್ದು ಬಹಳ ಒಳ್ಳೆಯದು ಜೊತೆಗೆ

ಮನೆಯ ಒಳಗಡೆ ಪ್ರವೇಶ ಮಾಡುವಾಗ ಹಾಗೂ ಮನೆಯ ಹೊರಗಡೆ ಹೋಗುವಾಗ ಇಟ್ಟುಕೊಳ್ಳುವುದು ಅಷ್ಟು ಶುಭಕರ ಅಲ್ಲ. ಇನ್ನೂ ಕೆಲವೊಬ್ಬರು ದೈವತ್ವದ ಸ್ಥಾನಮಾನಗಳನ್ನು ಕೊಟ್ಟಿರುತ್ತಾರೆ, ಹಲವು ಜನರು ತಮ್ಮ ಮನೆಗಳಲ್ಲಿ ನನ್ನ ತಾಯಿ ನನ್ನ ದೇವರು ಅಂತ ಹೇಳಿ ದೇವರ ಭಾವಚಿತ್ರಗಳನ್ನು ಇರುವಂಥ ಜಾಗದಲ್ಲಿ ಅವರ ಭಾವಚಿತ್ರ ಇಟ್ಟು ಪೂಜಿಸುವ ಕೆಲ್ಸ ಕೂಡ ಇದೆ. ಅದು ನಿಮ್ಮ ನಿಮ್ಮ ಭಾವನೆಗೆ ಬಿಟ್ಟಿರುವ ವಿಚಾರ ಆಗಿರುತ್ತೆ. ಯಾವುದೇ ಕಾರಣಕ್ಕೂ ಮನುಷ್ಯರಾಗಿ ಹುತ್ತಿರುವವರು ದೈವತ್ವದ ಸ್ಥಾನವನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಮನುಷ್ಯ ಮನುಷ್ಯನಾಗಿ ಬದುಕಬೇಕು ಮನುಷ್ಯನಾಗಿ ಬಾಳಬೇಕು, ಮನುಷ್ಯನಾಗಿಯೇ ಒಂದಲ್ಲಾ ಒಂದು ದಿವಸ ಹೋಗಬೇಕು. ದೈವಗಳನ್ನು ಇರುವಂಥ ಜಾಗದಲ್ಲಿ ಯಾವುದೇ ಕಾರಣಕ್ಕೂ ನಮ್ಮ ಪೂರ್ವಿಕರ ಭಾವಚಿತ್ರಗಳನ್ನು ಇದುವಂಥದ್ದು ಅಷ್ಟು ಶ್ರೇಯಸ್ಸು ಅಲ್ಲ ಮತ್ತು ಮನಸ್ಸಿಗೂ ಒಂದು ರೀತಿ ಭಾವೋದ್ವೇಗಕ್ಕ್ ಒಳಗಾಗುವ ಸಂದರ್ಭಗಳು ಜಾಸ್ತಿ ಬಂದು ಬಿಡುತ್ತವೆ. ಹಾಗಾಗಿ ಇಂತಹ ಭಾವಚಿತ್ರಗಳನ್ನು ಸ್ವಲ್ಪ ಮರೆಯಾಗಿ, ಒಳಗಿನ ಪ್ರದೇಶಗಳಲ್ಲಿ, ಒಳಗಿನ ದಕ್ಷಿಣ ಗೋಡೆಗೆ ಹಾಕುವುದು ನಿಮಗೂ ಒಳ್ಳೆಯದು ನಿಮ್ಮ ಮನ ಸ್ಥಿತಿಗೂ, ನಿಮ್ಮ ಮಾನಸಿಕ ಬುದ್ಧಿ ಸ್ಥಿತಿಗೂ ಒಳ್ಳೆಯದು. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ತಪ್ಪದೇ ಶೇರ್ ಮಾಡಿ ಲೈಕ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *