ಹಲವರಲ್ಲಿ ಹೃದಯಾಘಾತ ಅಥವಾ ಹೃದಯ ಸಂಬಂಧಿ ಖಾಯಿಲೆ ಬರುವ ಮುನ್ನ ಅದನ್ನ ಪತ್ತೆ ಹಚ್ಚಲು ಸಾಧ್ಯವೇ ಎಂಬ ಗೊಂದಲವಿದೆ . ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆಯಿಂದ ಇರಬೇಕಾದ ಅಗತ್ಯ ಹಾಗೂ ಅನಿವಾರ್ಯತೆ ಎರಡು ಇದೆ. ಹೃದಯಾಘಾತ ಎಂದರೆ ಎಲ್ಲರಲ್ಲೂ ಭಯ ಮೂಡುವುದು ಸಹಜ. ಏಕೆಂದರೆ ಈ ಸಮಸ್ಯೆಯಿಂದ ಪ್ರತಿ ವರ್ಷ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ . ಕೆಲವರಿಗಂತೂ ಹಿಂದೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಸಹ ಇದ್ದಕ್ಕಿದ್ದಂತೆ ಇದು ಸಂಭವಿಸುವುದರಿಂದ ಇದರ ಬಗ್ಗೆ ಹೆಚ್ಚು ಭಯ ಇರುತ್ತದೆ .

ಇದಕ್ಕೆ ಯಾವುದಾದರು ಪರೀಕ್ಷೆಗಳ ಮೂಲಕ ಹೃದಯಾಘಾತ ಸಂಭವಿಸುವಿಕೆಯನ್ನು ಮೊದಲೇ ಪತ್ತೆ ಹಚ್ಚಬಹುದೇ ಎಂಬ ಪ್ರಶ್ನೆ ಅನೇಕರಲ್ಲಿ ಕಾಡುತ್ತಿರುತ್ತದೆ. ಖಂಡಿತವಾಗಿ ಸಾಧ್ಯವಿದೆ ಎನ್ನುತಾರೆ ಹೃದಯ ತಜ್ಞರು. ಹೌದು ಕೆಲವು ಟೆಸ್ಟ್ಗಳ ಮೂಲಕ ಹೃದಯಾಘಾತ ಆಗುವುದನ್ನು ಮೊದಲೇ ಕಂಡು ಹಿಡಿಯಬಹುದು . ಹಾಗಾದ್ರೆ ಬನ್ನಿ , ಹೇಗೆಲ್ಲಾ ಎಚ್ಚರ ವಹಿಸಬೇಕು ಹಾಗು ಇದನ್ನು ಪತ್ತೆ ಹಚ್ಚಲು ಇರುವ ಯಾವ ಟೆಸ್ಟ್‌ಗಳನ್ನು ಮಾಡಿಸಬೇಕು ಎಂಬುದನ್ನು ಹೃದ್ರೋಗ ತಜ್ಞರು ವಿವರಿಸಿದ್ದಾರೆ ಓದಿ ತಿಳಿಯೋಣ ಬನ್ನಿ.

ಸಾಮಾನ್ಯವಾಗಿ ನಡೆದರೆ ಅಥವಾ ಮೆಟ್ಟಿಲು ಹತ್ತಿದಾಗ ಎದೆ ಭಾರವಾಗುವುದು ಅಥವಾ ಎದೆ ಒತ್ತಿದಂಗೆ ಆಗುವುದು . ಇದು ಹೃದಯ ಸಂಬಂಧಿ ಸಮಸ್ಯೆ ಆಗುವುದರ ಮುನ್ಸೂಚನೆ ಆಗಿರಬಹುದು . ಹೃದಯಕ್ಕೆ ರಕ್ತನಾಳಗಳ ಮೂಲಕ ರಕ್ತ ಚಲನೆಯಾಗುವುದರ ಬಗ್ಗೆ ನಿಮಗೆಲ್ಲ ತಿಳಿದಿದೆ . ಈ ರೀತಿಯ ಲಕ್ಷಣಗಳು ಈ ರಕ್ತನಾಳಗಳು ಕುಗ್ಗಿ ಹೋಗಿರುವುದರ ಕಾರಣದಿಂದ ಆಗಿರಬಹುದು. ಮುಖ್ಯವಾಗಿ ಡಯಾಬಿಟೀಸ್ ಇರುವವರಿಗೆ ಇದೊಂದು ಮುಖ್ಯ ಸಮಸ್ಯೆ ಇರುತ್ತದೆ. ಏಕೊ ಕಾರ್ಡಿಯೋಗ್ರಾಂ ಟೆಸ್ಟ್ ಮೂಲಕ ಕೂಡ ಹೃದಯದ ಕೆಲಸ ಹೇಗೆ ನಡೀತಿದೆ ಎಂದು ಗೊತ್ತಾಗುತ್ತೆ .

ಇದರಿಂದ ಹೃದಯಕ್ಕೆ ಏನಾದರು ಡ್ಯಾಮೇಜ್ ಆಗಿದ್ದೀಯಾ ಅಥವಾ ಘರ್ಷಣೆ ಉಂಟಾಗಿದ್ದೀಯ ಎಂದು ಕೂಡ ತಿಳಿಯಬಹುದು . ಏಕೊ ಕಾರ್ಡಿಯೋಗ್ರಾಂ ಟೆಸ್ಟ್ ಮೂಲಕ ವಯಸ್ಸಾದವರಲ್ಲಿ ಅಯೋರ್ಟಿಕ್ ವಾಲ್ ತೊಂದರೆ ಇದ್ದರೆ ಸಹ ಇದರಿಂದ ಗೊತ್ತಾಗುತ್ತೆ. ಹಾಗಾಗಿ ಹೃದಯ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಹಾಗು ಹೃದಯದ ಒಳಗೆ ರಕ್ತ ಚಲನೆ ಹೇಗೆ ಆಗುತ್ತಿದೆ ಎಂದು ತಿಳಿಯಲು ಏಕೊ ಕಾರ್ಡಿಯೋಗ್ರಾಂ ಟೆಸ್ಟ್ ಬಹು ಮುಖ್ಯವಾದುದು .

ಸಾಮಾನ್ಯವಾಗಿ ಯಾವುದೇ ವ್ಯಕ್ತಿ ನಡೆದಾಗ ಅಥವಾ ಓಡಿದಾಗ ಆತನ ಹೃದಯ ವೇಗವಾಗಿ ಕೆಲಸ ಮಾಡುತ್ತೆ . ಹಾಗು ರಕ್ತ ಚಲನೆ ಜಾಸ್ತಿ ಬೇಕಾಗುತ್ತೆ . ಇದನ್ನು ಈ ಸಿ ಜಿ ಟೆಸ್ಟ್ ನಲ್ಲಿ ಗೊತ್ತಾಗುತ್ತೆ . ಹಾಯಾಗಿ ಈ ಟೆಸ್ಟ್ ಮಾಡುವಾಗ ವೈದ್ಯರು ವ್ಯಕ್ತಿಯನ್ನು ತ್ರೆಡ್ ಮಿಲ್ ಮೇಲೆ ಸ್ವಲ್ಪ ಹೊತ್ತು ಓಡಲು ಸೂಚಿಸುತ್ತಾರೆ . ನಂತರ ಈ ಸಿ ಜಿ ಟೆಸ್ಟ್ ಮೂಲಕ ಅದನ್ನು ಮಾನಿಟರ್ ಮಾಡಲಾಗುತ್ತೆ . ಈ ಟೆಸ್ಟ್ ಮೂಲಕ ಒಂದು ವೇಳೆ ರಕ್ತ ಕಡಿಮೆ ಆಗುತ್ತಿದೆಯೇ ಎಂದು ತಿಳಿಯಬಹುದಾಗಿದೆ. ಈ ರೀತಿ ಬದಲಾವಣೆ ಕಂಡು ಬಂದಲ್ಲಿ ಏಂಜಿಯೋಗ್ರಾಮ್ ಎಂ ಬಾ ಟೆಸ್ಟ್ ಮಾಡಲಾಗುತ್ತೆ.

ಆದರೆ ಕೆಲವೊಮ್ಮೆ ಬೇರೆ ಬೇರೆ ಕಾರಣಗಳಿಂದ ಈ ಟೆಸ್ಟ್ನಲ್ಲಿ ಸರಿಯಾಗಿ ಪತ್ತೆ ಹಚ್ಚಲು ಸಾಧ್ಯವಾಗದಿರಬಹುದು . ಹಾಗಾಗಿ ಕೆಲವೊಮ್ಮೆ ಇದನ್ನು ಖಚಿತಪಡಿಸಲು ರೇಡಿಯೋ ನ್ಯೂಕ್ಲಿಯರ್ ಟೆಸ್ಟ್ ಅನ್ನು ಮಾಡಲಾಗುತ್ತೆ . ಇದರಲ್ಲಿ ವ್ಯಕ್ತಿಗೆ ವ್ಯಾಯಾಮದ ಬಳಿಕ ಒಂದು ಸಣ್ಣ ಇಂಜೆಕ್ಷನ್ ಕೊಟ್ಟು ಹೃದಯದ ಚಲನೆಯ ಬಗ್ಗೆ ತಿಳಿಯುತ್ತಾರೆ . ಇದು ವಿಶೇಷವಾಗಿ ಮಾಡುವ ಟೆಸ್ಟ್ ಆಗಿದ್ದು ಕೆಲವು ಜಾಗದಲ್ಲಿ ಮಾತ್ರ ಮಾಡಲಾಗುತ್ತೆ.

Leave a Reply

Your email address will not be published. Required fields are marked *