ಕನ್ನಡ ಸುತ್ತ ಮೂಡುವ ಕಪ್ಪು ವರ್ತುಲ ಮುಖದ ಸೌಂದರ್ಯವನ್ನು ಹಾಳು ಮಾಡಿಬಿಡುತ್ತದೆ. ಹೆಣ್ಣು ಮಕ್ಕಳು ಮಾತ್ರವಲ್ಲ ಹುಡುಗರು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಕಾರಣವೂ ಹಲವು ಇದ್ದಿರಬಹುದು. ಪರಿಹಾರ ಇಲ್ಲಿದೆ ನೋಡಿ. ಬಾದಾಮಿ ಎಣ್ಣೆ ಮಲಗುವ ಮುನ್ನ ಸ್ವಲ್ಪ ಬಾದಾಮಿ ಎಣ್ಣೆಯನ್ನು ಕಣ್ಣಿನ ಸುತ್ತ ಹಚ್ಚಿ ಸ್ವಲ್ಪ ಮಸಾಜ್ ಮಾಡಿ. ಬೆಳಗ್ಗೆ ಎದ್ದು ಮುಖವನ್ನು ತಂಪಾದ ನೀರಿನಿಂದ ತೊಳೆಯಿರಿ. ಇನ್ನು ಸೌತೆಕಾಯಿ. ಸೌತೆಕಾಯಿ ಕತ್ತರಿಸಿ ಅದನ್ನು ಹತ್ತು ನಿಮಿಷಗಳ ಕಾಲ ಕಣ್ಣದ ಮೇಲೆ ಇಡಿ. ನಂತರ ಸಾಮಾನ್ಯ ನೀರಿನಿಂದ ಮುಖ ತೊಳೆಯಿರಿ.

ಈ ವಿಧಾನ ಕೇವಲ ಕಪ್ಪು ಕಲೆ ತೆಗೆಯುವುದು ಅಲ್ಲದೆ ಕಣ್ಣಿಗೂ ಕೂಡ ಆರಾಮ ನೀಡುತ್ತದೆ. ಇನ್ನು ಟೊಮೇಟೊ. ಉತ್ತಮ ಪರಿಹಾರ. ಸ್ವಲ್ಪ ಟೊಮೆಟೊ ಜ್ಯೂಸ್ ಗೆ 1 ಚಮಚ ನಿಂಬೆರಸವನ್ನು ಬೆರೆಸಿ ಕಣ್ಣಿನ ಸುತ್ತ ಹಚ್ಚಿ ಹತ್ತು ನಿಮಿಷದ ನಂತರ ನೀರಿನಿಂದ ತೊಳೆಯಿರಿ. ಇದನ್ನು ದಿನಕ್ಕೆರಡು ಬಾರಿಯಾದರೂ ಮಾಡಲೇಬೇಕು. ಇನ್ನು ಬಟಾಣಿ ಒಂದು ಅಥವಾ ಎರಡು ಬಟಾಣಿಯನ್ನು ತುರಿದು ಅದರ ರಸ ತೆಗೆದು ಕಣ್ಣಿನ ಸುತ್ತ ಹಚ್ಚಿ ಕೊಳ್ಳಿ. ಹತ್ತು ನಿಮಿಷದ ನಂತರ ನೀರಿನಿಂದ ತೊಳೆಯಿರಿ. ಇದನ್ನು ದಿನಕ್ಕೆ ಎರಡು ಬಾರಿ ಅಂತೆ ಮಾಡುತ್ತಾ ಬರ್ತಾರೆ

ಕಲೆ ನಿವಾರಣೆಯಾಗುತ್ತದೆ. ಇನ್ನೂ ರೋಸ್ ವಾಟರ್. ಇನ್ನೂ ರೋಸ್ ವಾಟರ್ ಸ್ಕಿನ್ ಟೋನರ್ ಆಗಿ ಕೆಲಸ ಮಾಡುತ್ತದೆ. ಹತ್ತಿಯನ್ನು ರೋಸ್ ವಾಟರ್ ನಲ್ಲಿ ಅದ್ದಿ ಕಣ್ಣಿನ ಮೇಲೆ ಇಡಿ. ಪ್ರತಿನಿತ್ಯ ಎರಡು ಬಾರಿ ಹೀಗೆ ಮಾಡುವುದರಿಂದ ಕಪ್ಪು ಕಲೆ ಮಾಯವಾಗುತ್ತದೆ. ಕಿತ್ತಳೆ ರಸ. ಕಿತ್ತಳೆ ರಸಕ್ಕೆ ಒಂದೆರಡು ಹನಿ ಗ್ಲಿಸರಿನ್ ಸೇರಿಸಿ ಕಣ್ಣಿನ ಸುತ್ತ ಹಚ್ಚಬೇಕು. ಇದು ಕಪ್ಪು ಕಲೆ ನಿವಾರಿಸುವುದೇ ಅಲ್ಲದೆ ಕಣ್ಣಿನ ಸುತ್ತ ನೈಸರ್ಗಿಕವಾಗಿಯೂ ಕೂಡ ಕಾಂತಿಯನ್ನು ಕೂಡ ನೀಡುತ್ತದೆ. ಈ ಮಾಹಿತಿಯ ಬಗ್ಗೆ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.

Leave a Reply

Your email address will not be published. Required fields are marked *